ಸಿದ್ದಾಪುರ, ಅ. ೧೮: ನಿಯಂತ್ರಣ ತಪ್ಪಿದ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಕಾರ್ಮಿಕ ಮೃತಪಟ್ಟ ಘಟನೆ ಮೂರ್ನಾಡು ಸಮೀಪ ನಡೆದಿದೆ. ಮೂಲತಃ ಪಶ್ಚಿಮ ಬಂಗಾಳದ, ಪ್ರಸ್ತುತ ಹೊಸ್ಕೇರಿಯಲ್ಲಿ ನೆಲೆಸಿದ್ದ ಅಬ್ದುಲ್ ರಜಾಕ್ ಮೃತ ದುರ್ಧೈವಿ. ಸಿದ್ದಾಪುರದ ಅವರೆಗುಂದ ನಿವಾಸಿ ಮಧು ಎಂಬಾತ ಮೂರ್ನಾಡುವಿನಿಂದ ಕಾರ್ಮಿಕರನ್ನು ಕರೆದುಕೊಂಡು ಸಿದ್ದಾಪುರಕ್ಕೆ ಬರುವ ಸಂದರ್ಭದಲ್ಲಿ ಮೂರ್ನಾಡು ಸಮೀಪದ ಕಾಂತೂರು ಬಳಿ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ವಾಹನದಲ್ಲಿದ್ದ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.