ಐಗೂರು, ಅ. ೧೮: ಅರೆಭಾಷೆ ಗೌಡ ಸಮಾಜ ಐಗೂರು, ಇದರ ನೂತನ ಆಡಳಿತ ಮಂಡಳಿಯನ್ನು ಗೌರವಾಧ್ಯಕ್ಷರಾದ ಪೊನ್ನಚ್ಚನ ಗಣಪತಿ ಅವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಬಾರನ ಭರತ್ ಕುಮಾರ್, ಉಪಾಧ್ಯಕ್ಷರಾಗಿ ನಂಗಾರು ಗಿರೀಶ್ ಕುಮಾರ್, ಕಾರ್ಯದರ್ಶಿಯಾಗಿ ಪೊನ್ನಚ್ಚನ ತೇಜಕುಮಾರ್, ಖಜಾಂಚಿಯಾಗಿ ಕೂಡಕಂಡಿ ಧೀರಜ್, ನಿರ್ದೇಶಕರಾಗಿ ಬಾರನ ಪ್ರಮೋದ್, ದೊಡ್ಡಮನೆ ಕೃಷ್ಣಪ್ಪ, ಪಳಂಗೋಟು ನಾಗೇಶ, ತೆಕ್ಕಡೆ ಸಂದೇಶ, ಚೆರಿಯಮನೆ ವಿನೋದ್, ಬಾರನ ಶೇಖರ, ಬಾರನ ಲೋಕೇಶ್, ಹೊಸೊಕ್ಲು ದುನಿತ್, ಮೂಲೆಮಜುಲು ರಾಧಾ ಗಣೇಶ್ ಮತ್ತು ಕಡ್ಲೆರ ಶೋಭಾ ಹೊನ್ನಪ್ಪ ಆಯ್ಕೆಯಾಗಿರುತ್ತಾರೆ.