ಮಡಿಕೇರಿ, ಅ. ೧೮: ಅಖಿಲ ಕೊಡವ ಸಮಾಜದ ನೂತನ ಗೌರವ ಕಾರ್ಯದರ್ಶಿಯಾಗಿ ಕೀತಿಯಂಡ ವಿಜಯಕುಮಾರ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಮೂವೇರ ರೇಖಾ ಪ್ರಕಾಶ್ ನೇಮಕಗೊಂಡಿದ್ದಾರೆ. ಅವರನ್ನು ಕೇಂದ್ರ ಸಮಿತಿ ಒಮ್ಮತದಿಂದ ನೇಮಕ ಮಾಡಲಾಗಿದೆ. ಅಮ್ಮಣಿಚಂಡ ರಾಜ ನಂಜಪ್ಪ ಮತ್ತು ಅಪ್ಪುಮಣಿಯಂಡ ತುಳಸಿ ಕಾಳಪ್ಪ ಅವರುಗಳ ರಾಜೀನಾಮೆಯಿಂದ ಸ್ಥಾನಗಳು ತೆರವಾಗಿತ್ತೆಂದು ಅಖಿಲ ಕೊಡವ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.