ಕರಿಕೆ, ಅ. ೧೮: ಶ್ರೀಮಂಗಲ ವನ್ಯಜೀವಿ ವಲಯದ ಪಾಲೇಮನಿಯಲ್ಲಿ ಇಲಿಮುಖದ ಜಿಂಕೆ (ಕೂರಹಂದಿ- ಮೌಸ್‌ಡೀರ್) ಬೇಟೆಗೈದಿದ್ದ ಓರ್ವನನ್ನು ಅರಣ್ಯ ಇಲಾಖೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪರಾರಿಯಾಗಿರುವ ಇಬ್ಬರ ಪತ್ತೆಗೆ ಬಲೆ ಬೀಸಿದೆ.

ಬಿರುನಾಣಿಯ ನಿವಾಸಿ ಜಿ.ಪಿ. ಚಂದ್ರು ಬಂಧಿತ ಆರೋಪಿ. ಅದೇ ಗ್ರಾಮದ ಕರ್ತಮಾಡ ಸುರೇಶ್ (ಕರ್ಪಿ) ಮತ್ತು ಜೀವನ್ ತಲೆಮರೆಸಿಕೊಂಡವರು.

ತಾ. ೧೬ ರಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ತಿರುಗುವ ವೇಳೆ ರಾತ್ರಿ ಅರಣ್ಯದ ಭಾಗದಿಂದ ಗುಂಡಿನ ಶಬ್ದ ಕೇಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸಂದರ್ಭ ಮೂವರ ಓಡಾಟ ಕಂಡುಬAದಿದೆ. ಕೂಡಲೇ ಅವರನ್ನು ಹಿಡಿಯಲು ತೆರಳಿದ ಸಂದರ್ಭ ಇಬ್ಬರು ಅರಣ್ಯದೊಳಗೆ ಓಡಿ ಹೋಗಿದ್ದಾರೆ. ಸ್ಥಳದಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದ ಸಂದರ್ಭ ಅವನ ಕೈಯಲ್ಲಿದ್ದ ಚೀಲದಲ್ಲಿ ಸಾವನ್ನಪ್ಪಿದ್ದ ಇಲಿಮುಖದ ಜಿಂಕೆ ಪತ್ತೆಯಾಗಿದೆ. ನಂತರ ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಪೊನ್ನಂಪೇಟೆ ನ್ಯಾಯಾಲಯಕ್ಕೆ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಪಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಮಾರ್ಗದರ್ಶನ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎಸ್.ಎಲ್. ಅರವಿಂದ್, ಉಪವಲಯ ಅರಣ್ಯಾಧಿಕಾರಿ ಹರೀಶ್ ಕುಮಾರ್, ಗಸ್ತು ಅರಣ್ಯ ಪಾಲಕ ವೈ.ಎಲ್. ಚಂದ್ರಶೇಖರ್, ಕೋಡ್ಲೆಪ್ಪ ಹಡಪದ, ಸಿಬ್ಬಂದಿ ಎಸ್.ಎಸ್. ಹರೀಶ್ ಇದ್ದರು.