ಚೆಯ್ಯAಡಾಣೆ, ಅ. ೧೭: ಹಲವಾರು ಕಾರುಣ್ಯ ಸಮಾಜ ಸೇವೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕೊಡಗು ಜಿಲ್ಲೆ ಹಾಗೂ ಕರ್ನಾಟಕದ ನಾನಾ ಭಾಗದಲ್ಲಿ ವಿವಿಧ ಸಾಮೂಹಿಕ ಕಾರುಣ್ಯ ಸೇವೆಯ ಮೂಲಕ ಜನ ಮನಗೆದ್ದ ಸೇವ್ ದ ಡ್ರೀಮ್ಸ್ ಎಂಬ ಚಾರಿಟಿಯ ಕಚೇರಿ ಉದ್ಘಾಟನೆ ಯನ್ನು ನಾಪೋಕ್ಲುವಿನಲ್ಲಿ ಸಯ್ಯದ್ ಹಸನ್ ಅಬ್ದುಲ್ಲ ಅದೂರ್ ತಂಗಳ್ ನೆರವೇರಿಸಿದರು. ಚೇರಿಯಪರಂಬು ಶಾದಿ ಮಹಲ್ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವ್ ದ ಡ್ರಿಮ್ಸ್ ಚಾರಿಟಿಯ ಅಧ್ಯಕ್ಷರಾದ ಬಷೀರ್ ಈಶ್ವರಮಂಗಳ ವಹಿಸಿದ್ದರು. ಪ್ರಾರ್ಥನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಫೈಝಿ ಎಡಪಾಲ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಕೊಡಗು ಜಿಲ್ಲಾ ಜಮೀಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ ಉದ್ಘಾಟಿಸಿ ಮಾತನಾಡಿ ಕರುಣೆ ತೋರುವವನಿಗೆ ಸದಾ ದೇವರ ಆಶೀರ್ವಾದ ಇದ್ದೆ ಇರುತ್ತದೆ. ಚಾರಿಟಿಯ ಮೂಲಕ ಹಲವಾರು ಜನರ ಕಣ್ಣೀರೊರೆಸುವ ಕಾರ್ಯ ಶ್ಲಾಘನೀಯವಾದದ್ದು ಎಂದರು. ಪ್ರಾಸ್ತವಿಕವಾಗಿ ಮಾತನಾಡಿದ ಸೇವ್ ದ ಡ್ರಿಮ್ಸ್ ಚಾರಿಟಿಯ ಮುಖ್ಯಸ್ಥ ಜಾಬಿರ್ ನಿಜಾಮಿ ಇದುವರೆಗೂ ನಡೆಸಿದ ಕಾರುಣ್ಯ ಸಹಾಯದ ಬಗ್ಗೆ ನೆರೆದಿದ್ದವರಿಗೆ ವಿವರಿಸಿದರು. ನಾಪೋಕ್ಲು ಸೆಂಟ್ ಮೇರಿ ಚರ್ಚಿನ ಧರ್ಮ ಗುರು ಫಾದರ್ ಜ್ಞಾನ ಪ್ರಕಾಶ್ ಸೇವ್ ದ ಡ್ರಿಮ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಬಡ ಅನಾಥ ಹೆಣ್ಣು ಮಗಳ ಮದುವೆಗೆ ಸಹಾಯ
ಮಾನವೀಯತೆಗೆ ಸಾಕ್ಷಿಯಾದ ವೇದಿಕೆ ಕಾರ್ಯಕ್ರಮ ಬಡ ಅನಾಥ ಹೆಣ್ಣು ಮಗಳ ಮದುವೆಗೆ ವೇದಿಕೆ ಯಲ್ಲೇ ನಾಪೋಕ್ಲು ಹಾಗೂ ಚೇರಿಯ ಪರಬು ಜಮಾಅತ್ ಪದಾಧಿಕಾರಿ ಗಳಿಗೆ ೫ ಪವನ್ ಚಿನ್ನದ ಮಾಂಗಲ್ಯ ವನ್ನು ಸೇವ್ ದ ಡ್ರಿಮ್ಸ್ ಚಾರೀಟಿಯ ಪದಾಧಿಕಾರಿಗಳು ಹಸ್ತಾಂತರಿಸಿದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ನಾಪೋಕ್ಲು ಜಮಾಅತ್ ಅಧ್ಯಕ್ಷ ಸಲೀಂ ಹಾರಿಸ್, ಮೈಸಿ ಕತ್ತಣಿರ, ಶುಭ ಹಾರೈಸಿ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಖಲೀಲ್ ಕ್ರಿಯೆಟಿವ್, ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಜುಬೈರ್ ಪರವಂಡ, ಹಾಫಿಲ್ ರಾಫಿ ಮತಿತ್ತರರನ್ನು ಸನ್ಮಾನಿಸಲಾಯಿತು.
ರಕ್ತದಾನ ಶಿಬಿರ
ಸೇವ್ ದ ಡ್ರಿಮ್ಸ್ ಕಚೇರಿ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮದ ಅಂಗವಾಗಿ ಮಂಗಳೂರು ಬ್ಲಡ್ ಡೊನೆಟರ್ಸ್ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಕೂಡ ಆಯೋಜಿಸ ಲಾಗಿತ್ತು. ಶಿಬಿರದಲ್ಲಿ ೫೦ ಕ್ಕೂ ಹೆಚ್ಚು ಶಿಬಿರಾರ್ಥಿಗಳು ರಕ್ತದಾನ ಮಾಡಿದರು. ಈ ಸಂದರ್ಭ ಸೇವೆ ದ ಡ್ರಿಮ್ಸ್ ನಿರ್ದೇಶಕರಾದ ಆರಫಾತ್, ಅಹ್ಮದ್ ಸಿ.ಹೆಚ್., ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ್ ಬೇಬ, ಮೊಹಮ್ಮದ್ ಟಿ.ಎ., ಮೊಯ್ದು ಕೊಟ್ಟಮುಡಿ, ಕುಶಾಲಪ್ಪ ಎಂ.ಪಿ., ಸಾಬಾ ತಿಮ್ಮಯ್ಯ, ವಿ.ಎಸ್. ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಹರೀಶ್ ಪೂವಯ್ಯ, ಅಂಬಿ ಕಾರ್ಯಪ್ಪ, ರತ್ನ ಪೆಮ್ಮಯ್ಯ, ಅಜೀಜ್ ಪಿ.ಎಂ., ಮನ್ಸೂರ್ ಅಲಿ, ರಶೀದ್ ಪಿ.ಎಂ.. ಸಿದ್ದಿಕ್ ಮಂಜೇಶ್ವರ, ಜಲೀಲ್, ಸಲೀಂ, ಇಕ್ಬಾಲ್, ಕರೀಂ ಎಡಪ್ಪಲ್, ಪಯಾಜ್, ಅಝದ್ ನಗರ್ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಚೇರಿಯಪರಂಬು ಮಸೀದಿ ಅಧ್ಯಕ್ಷ ಬಷೀರ್, ಕಾರ್ಯದರ್ಶಿ ಸಿರಾಜ್, ಅಬ್ದುಲ್ ರಶೀದ್ ಅಯ್ಯಂಗೇರಿ, ಸೇವ್ ದ ಡ್ರಿಮ್ಸ್ ಪದಾಧಿಕಾರಿಗಳು, ವಿವಿಧ ಗ್ರಾಮದ ಗ್ರಾಮಸ್ಥರು, ಮತಿತ್ತರರು ಉಪಸ್ಥಿತರಿದ್ದರು. ಸ್ವಾಗತ ಹಾಗೂ ವಂದನೆಯನ್ನು ಅಹ್ಮದ್ ಸಿ.ಹೆಚ್. ನಿರ್ವಹಿಸಿದರು.