ವೀರಾಜಪೇಟೆ, ಅ. ೧೭: ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯ ಬದುಕನ್ನು ಸಹನೆ, ಪ್ರೀತಿ ಹಾಗೂ ಆತ್ಮಸ್ಥೆöÊರ್ಯ ದಿಂದ ಬದಲಾವಣೆ ಮಾಡಬಹುದು ಎಂದು ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವೀರಾಜ ಪೇಟೆ ತಾಲೂಕು, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ವೀರಾಜಪೇಟೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ ವೀರಾಜಪೇಟೆ ಹಾಗೂ ಜ್ಞಾನ ವಿಕಾಸ ಮಹಿಳಾ ಘಟಕ ಸಹಯೋಗದಲ್ಲಿ ಅಮ್ಮತ್ತಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ದುಶ್ಚಟ ಮುಕ್ತ ನಿರ್ಮಾಣ ಕಾರ್ಯಕ್ರಮದಲ್ಲಿ ಮಾತನಾಡಿ, ದುಶ್ಚಟ ಎಂದರೆ ಕೇವಲ ಮದ್ಯಪಾನ ಮಾತ್ರವಲ್ಲ. ಗಾಂಜಾ, ಅಫೀಮು, ಚರಸ್‌ಗೆ ದಾಸರಾಗುವುದು ಕೂಡ ದುಶ್ಚಟವಾಗಿದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನೆಯಲ್ಲಿ ತಂದೆ-ತಾಯAದಿರು ಕುಡಿತಕ್ಕೆ ಬಲಿಯಾದರೆ ಇಡೀ ಸಂಸಾರವೇ ಹಾಳಾಗುತ್ತದೆ. ಇಂದಿನ ಹದಿಹರೆಯದ ಮಕ್ಕಳು ಪ್ರೀತಿ ಪ್ರೇಮಗಳಿಗೆ ಬಲಿಯಾಗಿ ಪೋಕ್ಸೋ ಕಾಯಿದೆ ಅಡಿಯಲ್ಲಿ ಬಂಧಿತರಾಗುತ್ತಿದ್ದಾರೆ. ಆನ್‌ಲೈನ್ ದಂಧೆಗಳು ಹೆಚ್ಚಾಗಿದ್ದು ಅದರಿಂದ ದೂರ ಇರುವಂತೆ ಕರೆ ನೀಡಿದರು.

ಜಿಲ್ಲಾ ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಬಾನಂಗಡ ಅರುಣ್ ಮಾತನಾಡಿ, ಶ್ರೀಧರ್ಮಸ್ಥಳ ಕ್ಷೇತ್ರದ ಏಳಿಗೆಯನ್ನು ಸಹಿಸದ ಕೆಲವು ಶಕ್ತಿಗಳು ಕ್ಷೇತ್ರದ ಹೆಸರಿಗೆ ಕಳಂಕ ಬರುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಚಾರಿತ್ರö್ಯವಧೆ ಮಾಡಲಾಗುತ್ತಿದೆ ಇದನ್ನು ಖಂಡಿಸುತ್ತೇವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಗಳು ಮತ್ತು ಉದ್ದೇಶಗಳು ಮದ್ಯವರ್ಜನ ಶಿಬಿರಗಳಿಂದ ಆಗುವ ಲಾಭಗಳು ಮತ್ತು ಕುಡಿತ ಬಿಟ್ಟ ಒಬ್ಬ ಸದಸ್ಯ ಯಾವ ರೀತಿ ಕುಟುಂಬವನ್ನು ನಿರ್ವಹಿಸಬಲ್ಲ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಪರ ಕೃಷಿಕ ಮುಕ್ಕಾಟಿರ ಸಂತೋಷ್ ಮಾತನಾಡಿ, ಸರ್ಕಾರ ಲಾಟರಿ ನಿಷೇಧ ಮಾಡಿದ ರೀತಿಯಲ್ಲಿ ಮದ್ಯಪಾನವನ್ನು ನಿಷೇಧ ಮಾಡಿದರೆ ಅದೆಷ್ಟೋ ಕುಟುಂಬಗಳು ಸುಖಿ ಜೀವನವನ್ನು ನಡೆಸುತ್ತವೆ ಎಂದು ಹೇಳಿದರು. ಈ ಸಂದರ್ಭ ಪ್ರಧಾನ ಮಂತ್ರಿ ಶ್ರಮಯೋಗಿ ನೋಂದಣಿ ಯೋಜನೆ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲಾಯಿತು.

ಮಳೆಗೆ ಮನೆ ಬಿದ್ದು ಹೋಗಿದ್ದ ಫಲಾನುಭವಿ ತೀರ್ಥವತಿ ಅವರಿಗೆ ಸಹಾಯಧನ ವಿತರಿಸಿದರು. ಅಮ್ಮತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೇಚಂಡ ಅಶ್ವಿನಿ ತಿಮ್ಮಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಜನಜಾಗೃತಿ ಸಮಿತಿ ಸದಸ್ಯ ಪಳೆಯಂಡ ಪಾರ್ಥ ಚಿಣ್ಣಪ್ಪ, ಅಮ್ಮತ್ತಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಯಶೋಧ, ತಾಲೂಕು ಯೋಜನಾಧಿಕಾರಿ ದಿನೇಶ್, ಕೃಷಿ ಮೇಲ್ವಿಚಾರಕ ಹರೀಶ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೇಯಾ, ವಲಯ ಮೇಲ್ವಿಚಾರಕ ಸುಜೀರ್ ಉಪಸ್ಥಿತರಿದ್ದರು.