ಮಡಿಕೇರಿ, ಅ. ೧೮: ದಸರಾ ಅಂಗವಾಗಿ ಮೈಸೂರಿನಲ್ಲಿ ಜರುಗಿದ ರಾಜ್ಯಮಟ್ಟದ ಸಿ.ಎಂ. ಕಪ್ ಫೆನ್ಸಿಂಗ್ (ಕತ್ತಿವರಸೆ) ಸ್ಪರ್ಧೆಯಲ್ಲಿ ಕೊಡಗಿನ ಯುವಕ ಕೆಚ್ಚೆಟ್ಟೀರ ವಿಜಯ್ ಉತ್ತಯ್ಯ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ತಾ. ೧೬ ಹಾಗೂ ೧೭ರಂದು ಜರುಗಿದ ಸ್ಪರ್ಧೆಯಲ್ಲಿ ವಿಜಯ್ ಇಪ್ಪಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇದಕ್ಕೂ ಮುನ್ನ ಸೆ. ೩೦ ರಿಂದ ಅ. ೨ರವರೆಗೆ ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಮತ್ತೊಂದು ಸ್ಪರ್ಧೆಯಲ್ಲಿ ಸೀನಿಯರ್ ವಿಭಾಗದಲ್ಲಿ ಕೂಡ ವಿಜಯ್ ಕಂಚಿನ ಪದಕ ಗಳಿಸಿದ್ದಾರೆ. ಬೆಂಗಳೂರಿನ ಸೆಂಟ್ ಜೋಸಫ್ಸ್ ಕಾಲೇಜಿನ ಕಾನೂನು ವಿದ್ಯಾರ್ಥಿಯಾಗಿರುವ ವಿಜಯ್ ಕಡಗದಾಳುವಿನವರಾದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಕೆಚ್ಚೆಟ್ಟೀರ ರವಿ ದೇವಯ್ಯ ಹಾಗೂ ಅಂತರರಾಷ್ಟಿçÃಯ ಅಥ್ಲೆಟಿಕ್ಸ್ ಆಟಗಾರ್ತಿ, ವಕೀಲೆ ರೇಷ್ಮಾ ದೇವಯ್ಯ ಅವರ ಪುತ್ರ.