ಶ್ರೀಮಂಗಲ, ಅ. ೧೮: ತಾ.೧೭ ರಂದು ಭಾಗಮಂಡಲದಲ್ಲಿ ಧಾರ್ಮಿಕ ಆಚರಣೆ ಮುಗಿಸಿ, ತಲಕಾವೇರಿ ಯಲ್ಲಿ ಕಾವೇರಿ ಮಾತೆಯ ತೀರ್ಥೋದ್ಭವಕ್ಕಾಗಿ ಕಾಯುತ್ತಿದ್ದ ವೇಳೆ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಕಾವೇರಿ ಮಾತೆಯ ಭಕ್ತೆ ಅಪ್ಪಚ್ಚಿರ ಕಮಲ ನೀಲಮ್ಮ ಅವರು ತಾ.೧೮ ರಂದು ಚಿಕಿತ್ಸೆ ಫಲಿಸದೆ ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ದೊಡ್ಡಪುಲಿಕೋಟು ಗ್ರಾಮದ ಪ್ರಸ್ತುತ ವೀರಾಜಪೇಟೆಯಲ್ಲಿ ವಾಸವಿದ್ದ ಕಮಲ ನೀಲಮ್ಮ (೬೭) ಅವರು ಪತಿ ದಿವಂಗತ ಮುತ್ತಣ್ಣ ಮತ್ತು ಹಿರಿಯರಿಗೆ ಪಿಂಡ ಪ್ರದಾನ ಮಾಡಿ, ಭಾಗಮಂಡಲದಲ್ಲಿ ಪೂಜೆ ಮುಗಿಸಿ, ತಲಕಾವೇರಿಗೆ ಪುತ್ರ ಶರತ್‌ರೊಂದಿಗೆ ತೆರಳಿ ಕುಂಡಿಕೆಯ ಸಮೀಪ ತೀರ್ಥೋದ್ಭವ ಕ್ಕಾಗಿ ಭಜನೆ ಮಾಡುತ್ತ ಕಾಯುತ್ತಿದ್ದ ಸಂದರ್ಭ ಅವರ ಆರೋಗ್ಯ ಏರುಪೇರಾಗಿ ತಮ್ಮ ಸಮೀಪದಲ್ಲಿ ಕುಳಿತಿದ್ದ ಸಹೋದರ ಮಳವಂಡ ದೇವಯ್ಯ ಅವರ ಪತ್ನಿ ರಾಜೇಶ್ವರಿ ಅವರ ಮೇಲೆ ವರಗಿಕೊಂಡರು.

ಈ ಸಂದರ್ಭ ಸ್ಥಳದಲ್ಲಿದ್ದ ಮೈಸೂರಿನ ವೈದೆÀ್ಯ ಡಾ. ಸೋನಿಯಾ ಮಂದಪ್ಪ ಸೇರಿದಂತೆ ಸ್ಥಳದಲ್ಲಿದ್ದ ಭಾಗಮಂಡಲ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಪ್ರಥಮ ಚಿಕಿತ್ಸೆಯನ್ನು ನೀಡಿದರು.

ತದನಂತರ ಸ್ಥಳದಲ್ಲಿದ್ದ ಆ್ಯಂಬುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಯಿತು. ಇಲ್ಲಿ ಬ್ರೆöÊನ್ ಹ್ಯಾಮರೇಜ್‌ಗೆ ತುತ್ತಾಗಿರುವ ಸುಳಿವು ದೊರೆತ ಹಿನ್ನೆಲೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ತೀವ್ರ ನಿಗಾಘಟಕದಲ್ಲಿ ದಾಖಲಿಸಿ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಪೂರ್ವಾಹ್ನ ೧೦.೧೫ ಸುಮಾರಿಗೆ ಕೊನೆಯುಸಿರೆಳೆದರು. ಕಮಲ ನೀಲಮ್ಮ ಅವರು ಪುತ್ರ , ಪುತ್ರಿಯನ್ನು ಅಗಲಿದ್ದಾರೆ. ಕಮಲ ನೀಲಮ್ಮ ಅವರು ಕಾವೇರಿ ಮಾತೆಯ ಪರಮ ಭಕ್ತೆಯಾಗಿದ್ದು, ಹಲವು ದಶಕಗಳಿಂದ ತೀರ್ಥೋದ್ಭವಕ್ಕೆ ತಪ್ಪದೆ ಆಗಮಿಸುತ್ತಿದ್ದರು.

ತಿಂಗಕೊರ್ ಮೊಟ್ಟ್ ತಲಕಾವೇರಿ ಸಂಕಲ್ಪದೊAದಿಗೆ ಕಳೆದ ೩೪ ತಿಂಗಳಿನಿAದ ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. ಇದಲ್ಲದೆ ತಲಕಾವೇರಿ ಕ್ಷೇತ್ರದಲ್ಲಿ ಸ್ವಚ್ಛಗೊಳಿಸುವ ಸೇರಿದಂತೆ ಈ ಕ್ಷೇತ್ರದಲ್ಲಿ ಧಾರ್ಮಿಕ ಪಾವಿತ್ರö್ಯತೆಯನ್ನು ಕಾಪಾಡಲು ವಿಶೇಷ ಕಾಳಜಿ ವಹಿಸುತ್ತಿದ್ದರು. ಇವರು ವೀರಾಜಪೇಟೆ ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘದ ಹಾಲಿ ನಿರ್ದೇಶಕರಾಗಿ, ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದ ಕಮಲ ನೀಲಮ್ಮ ಅವರ ಪಾರ್ಥಿವ ಶರೀರವನ್ನು ಬುಧವಾರ ಸಂಜೆ ವೀರಾಜಪೇಟೆಯಲ್ಲಿ ಸುಮಾರು ೨ ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಸ್ವಗ್ರಾಮ ದೊಡ್ಡ ಪುಲಿಕೋಟು ಗ್ರಾಮಕ್ಕೆ ತರಲಾಯಿತು.

ಸಂತಾಪ: ‘ತಿಂಗಕೊರ್ ಮೊಟ್ಟ್ ತಲಕಾವೇರಿಕ್' ಸಂಕಲ್ಪ ತಂಡ ಕಮಲ ನೀಲಮ್ಮ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.