ಸೋಮವಾರಪೇಟೆ, ಅ. ೧೮: ರೈತರ ಬೆನ್ನೆಲುಬಾಗಿರುವ ರೈತ ಉತ್ಪಾದಕರ ಸಂಘದ ಬಲವರ್ಧನೆಗೆ ಎಲ್ಲರೂ ಸಹಕಾರ ನೀಡಬೇಕು. ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಸ್ಥಾಪನೆಯಾಗಿರುವ ರೈತ ಉತ್ಪಾದಕರ ಸಂಸ್ಥೆಯನ್ನು ಉಳಿಸಿ ಬೆಳೆಸುವುದು ಪ್ರತಿಯೋರ್ವ ಸದಸ್ಯರ ಕರ್ತವ್ಯವಾಗಬೇಕೆಂದು ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕ ಎಸ್.ಎಂ. ಡಿಸಿಲ್ವಾ ಹೇಳಿದರು.
ಇಲ್ಲಿನ ಸಫಾಲಿ ಸಭಾಂಗಣದಲ್ಲಿ ನಡೆದ ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆಯ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯು ಈಗಾಗಲೇ ಸರ್ವ ಸದಸ್ಯರ ಹಿತವನ್ನು ಕಾಪಾಡುತ್ತಾ ಬಂದಿದ್ದು, ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸಿ ಉತ್ತಮ ಬೆಲೆಯನ್ನು ನೀಡಿದೆ ಎಂದರು. ಈಗಲೂ ಸಹ ರೈತರಿಗೆ ಬೇಕಾಗುವ ಕೃಷಿ ಪರಿಕರಗಳನ್ನು ನೀಡಲಾಗುತ್ತಿದೆ. ರೈತರು ಇನ್ನೂ ಹೆಚ್ಚು ಸದಸ್ಯರಾಗುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಕಾಫಿ ಮಂಡಳಿಯು ಕೂಡ ಬೆಳೆಗಾರರ ಹಿತವನ್ನು ಕಾಯಲು ಮುಂದಾಗಿದ್ದು ಮಂಡಳಿಯಿAದ ಸಿಗುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಾಫಿ ಮಂಡಳಿ ವಿಸ್ತರಣಾಧಿಕಾರಿ ಲಕ್ಷಿö್ಮÃಕಾಂತ್ ಮನವಿ ಮಾಡಿದರಲ್ಲದೆ, ಉತ್ತಮ ಗುಣಮಟ್ಟದ ಕಾಫಿ ನಮ್ಮನ್ನು ಯಾವಾಗಲೂ ಕಾಪಾಡುತ್ತದೆ. ಬೆಳೆಗಾರರು ಕಾಫಿಯ ಗುಣಮಟ್ಟವನ್ನು ನಿರಂತರವಾಗಿ ಕಾಪಾಡಿಕೊಂಡರೆ ಆರ್ಥಿಕ ಪುನಶ್ಚೇತನ ಸಾಧ್ಯ ಎಂದರು.
ಕಾಫಿಯ ಮಾರುಕಟ್ಟೆ ವ್ಯವಸ್ಥೆ, ತಾಂತ್ರಿಕ ಮಾಹಿತಿ, ಮಾರಾಟದ ವಿಧಾನಗಳ ಕುರಿತು ಇ-ಕಾಮ್ ಕಾಫಿ ಕ್ಯೂರಿಂಗ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಚಂಗಲ್ ರಾವ್ ಬೆಳೆಗಾರರಿಗೆ ಮಾಹಿತಿ ಒದಗಿಸಿದರು.
ವೇದಿಕೆಯಲ್ಲಿ ಓ.ಡಿ.ಪಿ. ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ನಬಾರ್ಡ್ ಬ್ಯಾಂಕ್ನ ಡಿ.ಡಿ.ಎಂ. ರಮೇಶ್ ಬಾಬು, ಕಾರ್ಯದರ್ಶಿ ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.