ಸೋಮವಾರಪೇಟೆ, ಅ. ೧೮: ಐತಿಹಾಸಿಕ ಮಡಿಕೇರಿ ದಸರಾದಲ್ಲಿ ಪ್ರಮುಖ ಸ್ಥಾನ ಪಡೆದಿರುವ ದಶ ಮಂಟಪ ಹಾಗೂ ಕರಗಗಳಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ದಾನಿಗಳಾಗಿರುವ ಹರಪಳ್ಳಿ ರವೀಂದ್ರ ಅವರು ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.
ಮಡಿಕೇರಿಯ ಕಮ್ಯೂನಿಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿ ದಸರಾದ ೧೦ ಮಂಟಪಗಳಿಗೆ ತಲಾ ರೂ. ೨೦ ಸಾವಿರ ಹಾಗೂ ೪ ಕರಗಗಳಿಗೆ ತಲಾ ೧೦ ಸಾವಿರ ರೂಪಾಯಿಗಳನ್ನು ನೀಡಿದರು.
ನಾಡ ಹಬ್ಬ ಮಡಿಕೇರಿ ದಸರಾವು ಇಂದು ಹೆಚ್ಚು ಪ್ರಸಿದ್ಧಿ ಪಡೆದಿದೆ. ಕಾವೇರಿಯ ತವರಿನಲ್ಲಿ ಇಂತಹ ಜನೋತ್ಸವಗಳು ವಿಜೃಂಭಣೆ ಹಾಗೂ ಧಾರ್ಮಿಕವಾಗಿ ಆಯೋಜನೆಗೊಳ್ಳುತ್ತಿರುವುದು ಸ್ತುತ್ಯಾರ್ಹ ಎಂದು ರವೀಂದ್ರ ಹೇಳಿದರು.
ಈ ಸಂದರ್ಭ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಸಂಚಾಲಕ ಪ್ರಸಾದ್ ಕುಟ್ಟಪ್ಪ, ಅಧ್ಯಕ್ಷ ರವಿ ಗೌಡ, ಪದಾಧಿಕಾರಿಗಳಾದ ಮುಸ್ತಾಫ, ಗಿರೀಶ್, ಶಮೀರ್, ಖಾಸಿಂ, ಬಸಪ್ಪ, ಅನಿರುದ್ಧ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ದಶಮಂಟಪ ಸಮಿತಿ ಪದಾಧಿಕಾರಿಗಳು ಹಾಗೂ ಕರಗ ಸಮಿತಿ ಪ್ರಮುಖರು ಭಾಗವಹಿಸಿದ್ದರು.