ಮಡಿಕೇರಿ, ಅ. ೧೮: ಹಾಕಿ ಇಂಡಿಯಾ ವತಿಯಿಂದ ಏರ್ಪಡಿಸಲಾಗಿರುವ ದಕ್ಷಿಣ ವಲಯ ಸಬ್ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕರ್ನಾಟಕ ಬಾಲಕ ಹಾಗೂ ಬಾಲಕಿಯರ ತಂಡಗಳು ಸತತವಾಗಿ ಗೆಲುವು ಸಾಧಿಸುವ ಮೂಲಕ ಮುನ್ನಡೆ ಸಾಧಿಸಿವೆ.
ತಮಿಳುನಾಡಿನ ಚೆನ್ನೆöÊನ ಎಗ್ಮೋರ್ ನ ರಾಧಾಕೃಷ್ಣ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಬಾಲಕರ ತಂಡವು ಆಂಧÀ್ರಪ್ರದೇಶ ಹಾಕಿ ತಂಡವನ್ನು ೩-೧ ಗೋಲುಗಳಿಂದ ಸೋಲಿಸಿ ಮುನ್ನಡೆ ಸಾಧಿಸಿದೆ. ಕರ್ನಾಟಕ ತಂಡದ ಪರವಾಗಿ ನಿಶಾಂತ್ ಎಂ. ೨ಗೋಲು ಬಾರಿಸಿದರೆ, ರೋಹಿತ್ ಒಂದು ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಸಮರ್ಥ್ ನಾಯಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಹಾಕಿ ಕರ್ನಾಟಕ ಬಾಲಕಿಯರ ತಂಡ ತೆಲಂಗಾಣ ಹಾಕಿ ತಂಡದೆದುರು ೧೩-೦ ಗೋಲುಗಳ ಭಾರೀ ಅಂತರದಿAದ ಗೆಲುವು ಸಾಧಿಸಿದೆ. ತಂಡದ ಪರ ಲಕ್ಷ್ಮಿ ೫ ಗೋಲು ಬಾರಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಉಳಿದಂತೆ ವೈಶ್ಣವಿ ೪, ಪ್ರತಿಕ್ಷ ೨, ದೀಪ್ತಿ ಹಾಗೂ ದೇಚಕ್ಕ ತಲಾ ಒಂದು ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಇದಕ್ಕೂ ಮುನ್ನ ಪುದುಚೇರಿ ತಂಡದ ವಿರುದ್ಧದ ಪಂದ್ಯದಲ್ಲಿ ಭರ್ಜರಿ
೧೨-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿರುವ ಈ ತಂಡ ಅಂಕ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.