ತಲಕಾವೇರಿ, ಅ. ೧೭: ಮುಂಜಾನೆಯ ಆಹ್ಲಾದಕರ ವಾತಾವರಣವಾದರೂ ಕುಳಿರ್ಗಾಳಿ, ಮಂಜು ಮುಸುಕಿದ ಸನ್ನಿವೇಶ... ನಸುಕಿನ ವೇಳೆಯಲ್ಲೂ ಭಕ್ತ ಮಾಜನತೆಯ ಜಯಘೋಷ... ವೈದಿಕ ತಂಡದವರಿAದ ವೇದ - ಮಂತ್ರಗಳ ಪಠಣದ ಭಕ್ತಿಭಾವವನ್ನು ಮತ್ತಷ್ಟು ಗಟ್ಟಿಯಾಗಿಸುತ್ತಿದ್ದ ಸನ್ನಿವೇಶದ ನಡುವೆ ನಾಡಿನ ಜೀವನದಿ, ಕೊಡಗಿನ ಆರಾಧ್ಯ ದೈವ, ಕೊಡವರ ಕುಲಮಾತೆ ಶ್ರೀ ಕಾವೇರಿ ತೀರ್ಥಸ್ವರೂಪಿಣಿಯಾಗಿ ಆವೀರ್ಭವಿಸುವ ಮೂಲಕ ನಾಡಿನ ಜನತೆಯನ್ನು ಹರಸಿದಳು.
ಚುಮು ಚುಮು ಚಳಿ... ಬೀಳುತ್ತಿದ್ದ ಮಂಜು... ರಾತ್ರಿಯ ಹೊತ್ತನ್ನು ಮರೆಯಾಗಿಸುವ ಪ್ರಯತ್ನವಾಗಿ ಏರ್ಪಡಿಸಲಾಗಿದ್ದ ವಿದ್ಯುತ್ ಬೆಳಕಿನ ವ್ಯವಸ್ಥೆ ಶ್ರೀ ಕ್ಷೇತ್ರ ತಲಕಾವೇರಿಯನ್ನು ಹೊಸತೊಂದು ಲೋಕದಂತೆ ಸೃಷ್ಟಿಸಿತ್ತು.
ಇಂತಹ ಪ್ರಾಕೃತಿಕತೆಯ ಆಹ್ಲಾದಕರ ವಾತಾವರಣ ಬಹುಶಃ ಕಾವೇರಿ ತವರು ಕೊಡಗಿಗೆ ದೊರೆತಿರುವ ದೇವರ ಕೊಡುಗೆ ಎಂಬದು ಅತಿಶಯೋಕ್ತಿಯಲ್ಲ ಎಂಬ ರೋಮಾಂಚಕಾರಿ ಅನುಭವ ಮೂಡಿಸುವದ ರೊಂದಿಗೆ ಮಾತೆ ಕಾವೇರಿ ಕರ್ಕಾಟಕ ಲಗ್ನದಲ್ಲಿ ಈ ಬಾರಿ ನಸುಕಿನ ಜಾವ ೧.೨೭ ರ ಸರಿ ಸುಮಾರಿಗೆ ಪವಿತ್ರ ಕುಂಡಿಕೆಯಲ್ಲಿ ತೀರ್ಥ ಸ್ವರೂಪಿಣಿಯಾಗಿ ದರುಶನ ನೀಡುತ್ತಾಳೆಂದು ನಿಗದಿಯಾಗಿತ್ತು. ಆದರೆ ನಿಗದಿಗಿಂತ ಒಂದು ನಿಮಿಷ ಅಂದರೆ ನಸುಕಿನ ಜಾವ ೧.೨೬ಕ್ಕೆ ದರ್ಶನ ನೀಡುವ ಮೂಲಕ ಭಕ್ತ ಸಮೂಹವನ್ನು ಪಾವನಗೊಳಿಸಿದಳು.
ತಡರಾತ್ರಿಯಾದರೂ, ಭಕ್ತ ಸಮೂಹದ ಉತ್ಸುಕತೆಗೆ, ಯಾವುದೇ ಕೊರತೆಯಿರಲಿಲ್ಲ. ವರ್ಷಂಪ್ರತಿಯAತೆ ಈ ಬಾರಿಯೂ ಶ್ರೀಮಾತೆಯನ್ನು ಭಕ್ತಿಭಾವದಿಂದಲೇ ಬರಮಾಡಿಕೊಳ್ಳಲಾಯಿತು.
ಜೈ ಜೈ ಮಾತಾ... ಕಾವೇರಿ ಮಾತಾ... ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದಾ... ಎಂಬಿತ್ಯಾದಿ ಘೋಷಣೆಗಳು, ಮಾತೆಯನ್ನು ಆರಾಧಿಸುವ ಭಕ್ತಿ ಭಾವವನ್ನು ತೋರುವ ಹಾಡು... ಭಜನೆಗಳು, ಪುರೋಹಿತ ತಂಡದಿAದ ನಿರಂತರವಾಗಿ ಕೇಳಿ ಬರುತ್ತಿದ್ದ ಮಂತ್ರಘೋಷಗಳ ಪಠಣ ಕ್ಷೇತ್ರವನ್ನು... ಅಲ್ಲಿ ಜಮಾಯಿಸಿದ್ದ ಭಕ್ತವೃಂದವನ್ನು ಭಾವಪರವಶತೆಗೊಳಗಾಗುವಂತೆ ಮಾಡಿದ್ದವು.
ತೀರ್ಥೋದ್ಭವ ಈ ಬಾರಿ ತಡರಾತ್ರಿ ೧.೨೭ರ ವೇಳೆಗೆ ನಿಗದಿಯಾಗಿದ್ದ ರಿಂದ ಭಕ್ತರ ಸಂಖ್ಯೆ ಒಂದಷ್ಟು ವಿರಳವೆನಿಸುವಂತಿತ್ತು. ಮಳೆ - ಚಳಿಯ ಆತಂಕದ ಕಾರಣವೂ ಮತ್ತೊಂದು ಅಂಶವಾಗಿತ್ತು. ಆದರೂ ಮಾತೆಯ ಆರಾಧಕರು ತಡರಾತ್ರಿ ಎಂಬದನ್ನು ಮರೆತು ವರ್ಷಕ್ಕೊಮ್ಮೆ ಘಟಿಸುವ ಪವಿತ್ರ ತೀರ್ಥೋದ್ಭವವನ್ನು ಸಾಕ್ಷೀಕರಿಸಿದರು. ತಾ. ೧೭ರ ಮಂಗಳವಾರದAದು ಹಗಲು ಕ್ಷೇತ್ರದಲ್ಲಿ ವಿವಿಧ ಪೂಜಾ - ಪುನಸ್ಕಾರಗಳ
(ಮೊದಲ ಪುಟದಿಂದ) ಮೂಲಕ ಮಾತೆಯನ್ನು ಬರಮಾಡಿಕೊಳ್ಳುವ ಸಿದ್ಧತೆಗಳು ಆರಂಭಗೊAಡವು. ಸಂಜೆಯ ತನಕ ಭಕ್ತರು ಹೆಚ್ಚಿರಲಿಲ್ಲವಾದರೂ, ಸಂಜೆ ಕಳೆದು ರಾತ್ರಿಯಾಗುತ್ತಿದ್ದಂತೆಯೇ ಕ್ಷೇತ್ರದತ್ತ ಜನ - ವಾಹನ ಸಂಚಾರ ಹೆಚ್ಚಾಗತೊಡಗಿತ್ತು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ವ್ಯವಸ್ಥಿತ ಕ್ರಮಗಳನ್ನು ಕೈಗೊಂಡಿದ್ದರೆ, ಅತ್ತ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯದತ್ತಿಗಳ ಇಲಾಖೆ ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯದ ಮೂಲಕ ಎಲ್ಲಾ ರೀತಿಯ ಧಾರ್ಮಿಕ ವಿಧಿ - ವಿಧಾನಗಳ ಪಾಲನೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.
ಭಗಂಡೇಶ್ವರ ಕ್ಷೇತ್ರ ಹಾಗೂ ತಲಕಾವೇರಿ ಸನ್ನಿಧಾನ ವಿದ್ಯುತ್ ಬೆಳಕು, ಹೂವಿನ ಅಲಂಕಾರದೊAದಿಗೆ ಕಂಗೊಳಿಸುತ್ತಿತ್ತು. ಭಾಗಮಂಡಲದಿAದ - ತಲಕಾವೇರಿ ಮಾರ್ಗದಲ್ಲಿಯೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೇಶ ಮುಂಡನ - ಪಿಂಡ ಪ್ರದಾನ
ಕನ್ನಡ ನಾಡಿನ ಜೀವನದಿ, ರೈತರ ಜೀವನಾಡಿ ಕಾವೇರಿಯ ತವರು ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೂ ಮುನ್ನ ಹಲವು ಪೂಜಾ ಕೈಂಕರ್ಯಗಳು ನೆರವೇರಿದವು. ದಿನನಿತ್ಯದಂತೆ ಪೂಜೆಗಳು ಎಂದಿನAತೆ ನಡೆದವು. ಈ ಬಾರಿ ನಡುರಾತ್ರಿ ಕಾವೇರಿ ದರ್ಶನ ನೀಡುವ ಹಿನ್ನೆಲೆ ಬೆಳಿಗ್ಗೆಯಿಂದ ಸಂಜೆ ತನಕ ಭಕ್ತರ ಸಂಖ್ಯೆ ಕಡಿಮೆಯಿತ್ತು.
ಕಾರ್ಮೋಡ, ಮಂಜುಮುಸುಕಿದ ವಾತಾವರಣದ ನಡುವೆ ಭಗಂಡೇಶ್ವರ ಹಾಗೂ ತಲಕಾವೇರಿ ಸನ್ನಿಧಿ ಶ್ವೇತ ಸುಂದರಿಯAತೆ ಕಂಗೊಳಿಸುತಿತ್ತು. ಭಾಗಮಂಡಲದಲ್ಲಿ ನಂದಾದೀಪಕ್ಕೆ ಅಕ್ಕಿಹಾಕಿ ಜನರು ಪ್ರಾರ್ಥಿಸಿ ಪಡಿಯಕ್ಕಿಯನ್ನು ಕೊಂಡೊಯ್ದರು. ತ್ರಿವೇಣಿ ಸಂಗಮದಲ್ಲಿ ಮುಳುಗಿ ಭಕ್ತರು ಪುನೀತರಾದರು. ಭಕ್ತರು ಬೆಳಿಗ್ಗಿನಿಂದಲೇ ಆಗಮಿಸಿ ಇಹಲೋಕ ತ್ಯಜಿಸಿದವರಿಗೆ ಕೇಶಮುಂಡನ, ಪಿಂಡಪ್ರದಾನ ಮಾಡಿ ಸ್ಮರಿಸಿಕೊಂಡರು.
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಿತ್ತು. ಇದಕ್ಕೆ ತೀರ್ಥೋದ್ಭವದ ಸಮಯ ಕಾರಣವಾಗಿದೆ ಎಂದು ಹಿರಿಯರು ಹೇಳಿಕೊಂಡರು. ಕೇಶಮುಂಡನ ಹಾಗೂ ಪಿಂಡಪ್ರದಾನವನ್ನು ಬೆರಳೆಣಿಕೆ ಮಂದಿ ಮಾತ್ರ ಇಂದು ನೆರವೇರಿಸಿದರು. ಮುಂದಿನ ಒಂದು ತಿಂಗಳ ಕಾಲ ಜಾತ್ರೆ ಇರುವ ಕಾರಣ ತಾ. ೧೮ ರಿಂದ (ಇಂದಿನಿAದ) ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಸಂಭ್ರಮದ ವಾತಾವರಣ : ಮಧ್ಯಾಹ್ನದಿಂದಲೇ ಕ್ಷೇತ್ರಗಳಲ್ಲಿ ಕಾರ್ಮೋಡ, ಮಂಜು ಮುಸುಕಿದ ವಾತಾವರಣವಿದ್ದರೂ, ಸಂಭ್ರಮ ಮಾತ್ರ ಮನೆ ಮಾಡಿತ್ತು.
ಕ್ಷೇತ್ರಗಳು ವಿದ್ಯುತ್ ಹಾಗೂ ಪುಷ್ಪಾಲಂಕಾರದಿAದ ಕಣ್ಮನ ಸೆಳೆಯುತ್ತಿದ್ದವು. ಭಾಗಮಂಡಲದಲ್ಲಿ ಜಾತ್ರೆ ವಾತಾವರಣ ಸೃಷ್ಟಿಯಾಗಿತ್ತು. ಆಟಿಕೆ ಸೇರಿದಂತೆ ಇನ್ನಿತರ ಅಂಗಡಿಗಳು ನಿರ್ಮಾಣಗೊಂಡಿದ್ದವು. ಭಾಗಮಂಡಲದಿAದ ತಲಕಾವೇರಿ ತನಕ ೨ ಬದಿಗಳಲ್ಲಿ ಟ್ಯೂಬ್ಲೈಟ್ ಅಳವಡಿಸಲಾಗಿತ್ತು. ತಲಕಾವೇರಿ ಸನ್ನಿಧಿಯ ಬ್ರಹ್ಮಕುಂಡಿಕೆಯಲ್ಲಿ ಬೆಳಗ್ಗಿನಿಂದ ಸಂಜೆ ೬.೩೦ ರ ತನಕ ವಿವಿಧ ಹಂತಗಳಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ರಾತ್ರಿ ೧೦.೩೦ರ ತನಕ ಮತ್ತೇ ಪೂಜೆಗಳು ಆರಂಭಗೊAಡು ತೀರ್ಥೋದ್ಭವ ತನಕ ಮುಂದುವರೆಯಿತು. ಅರ್ಚಕರಾದ ರವಿರಾಜ್ ಹಾಗೂ ಉಸ್ತುವಾರಿ ಸಚಿವ ಬೋಸರಾಜು, ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂಥರ್ ಗೌಡ, ಸಂಸದ ಪ್ರತಾಪ್ ಸಿಂಹ. ಜಿಲ್ಲಾಧಿಕಾರಿ ವೆಂಕಟ್ ರಾಜಾ, ದಕ್ಷಿಣ ವಲಯ ಪೊಲೀಸ್ ಉಪಮಹಾನಿರೀಕ್ಷಕ ಡಾ. ಎಂ.ಬಿ. ಬೋರಲಿಂಗಯ್ಯ, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಅಪರ ಜಿಲ್ಲಾಧಿಕಾರಿ ವೀಣಾ, ಉಪವಿಭಾಧಿಕಾರಿ ಯತೀಶ್ ಉಲ್ಲಾಳ್, ಮಡಿಕೇರಿ ತಹಶೀಲ್ದಾರ್ ಪ್ರವೀಣ್, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಭಾಗಮಂಡಲ ತಕ್ಕಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ, ಕೆಪಿಸಿಸಿ ಪ್ರಮುಖ, ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಚಲ£ಚಿತ್ರ ಕಲಾವಿದರಾದ ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು. ಶಾಸಕ ಎ.ಎಸ್. ಪೊನ್ನಣ್ಣ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.