ಚೆಟ್ಟಳ್ಳಿ, ಅ. ೧೬: ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂಘದ ವತಿಯಿಂದ ೧೬ ನೇ ವರ್ಷದ ತೀರ್ಥ ವಿತರಣಾ ಕಾರ್ಯಕ್ರಮ ತಾ. ೧೮ರಂದು (ನಾಳೆ) ನಡೆಯಲಿದೆಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.

ಪೂರ್ವಾಹ್ಮ ೧೦.೩೦ ಗಂಟೆಗೆ ಸಹಕಾರ ಸಂಘದ ಮುಂದಿರುವ ಕಾವೇರಿ ಮಾತೆಗೆ ವಿಶೇಷ ಅಲಂಕಾರದೊAದಿಗೆ ಪೂಜೆ ಸಲ್ಲಿಸಲಿದ್ದಾರೆ.

ಕಳೆದ ೧೫ ವರ್ಷಗಳ ಹಿಂದೆ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಕಾವೇರಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿ ಅಂದಿನಿAದ ಪ್ರತಿ ವರ್ಷ ಕಾವೇರಿ ತೀರ್ಥ ವಿತರಣೆ ಮಾಡಲಾಗುತ್ತಿದ್ದು ಈ ಬಾರಿಯ ತುಲಾ ಸಂಕ್ರಮಣದAದು ತಲಕಾವೇರಿಯಿಂದ ತಂದ ಪವಿತ್ರ ತೀರ್ಥವನ್ನು ಸಾರ್ವಜನಿಕರಿಗೆ ವಿತರಿಸಲಾಗುವುದೆಂದು ಅವರು ತಿಳಿಸಿದ್ದಾರೆ.