*ಗೋಣಿಕೊಪ್ಪ, ಅ. ೧೬: ಗೋಣಿಕೊಪ್ಪ ಪ್ರಗತಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ತಾ. ೨೩ ರಂದು ಆಯುಧ ಪೂಜೆ, ಅಲಂಕೃತ ಆಟೋಗಳಿಗೆ ಬಹುಮಾನ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಲ್ಲಂಡ ಪ್ರಕಾಶ್ ತಿಳಿಸಿದ್ದಾರೆ.
ಕಾವೇರಿ ಕಲಾ ವೇದಿಕೆಯಲ್ಲಿ ಖ್ಯಾತ ನಿರೂಪಕ, ಮಿಮಿಕ್ರಿ ಕಲಾವಿದ ಶಾಮ್ ಅವರ ಮಿಲನ್ ಇವೆಂಟ್ಸ್ ಹಾಗೂ ಜೀಕನ್ನಡ ಸರಿಗಮಪ ಹಾಗೂ ಕಲರ್ಸ್ ಕನ್ನಡ ಎದೆತುಂಬಿ ಹಾಡುವೆನು ಗಾಯಕರಿಂದ ಲೈವ್ ಕನ್ಸರ್ಟ್ ಆಯೋಜಿಸ ಲಾಗಿದೆ. ಅಲಂಕೃತ ಆಟೋಗಳಿಗೆ ಬಹುಮಾನ ವಿತರಣೆ, ಕನ್ನಡ ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ನಾಪಂಡ ಭೀಮಯ್ಯ, ಕಾರ್ಯದರ್ಶಿ ಮಿಲನ್, ಖಜಾಂಚಿ ಪ್ರಕಾಶ್, ನಿರ್ದೇಶಕ ಧನು ಇದ್ದರು.