ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಐಟಿ ದಾಳಿ

ನವದೆಹಲಿ, ಅ. ೧೬: ಕರ್ನಾಟಕ ಮತ್ತು ಕೆಲವು ಇತರ ರಾಜ್ಯಗಳಲ್ಲಿ ಸರ್ಕಾರಿ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯು (ಐಟಿ ಇಲಾಖೆ) ೯೪ ಕೋಟಿ ರೂ. ನಗದು, ೮ ಕೋಟಿ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಮತ್ತು ವಿದೇಶಿ ನಿರ್ಮಿತ ೩೦ ಐಷಾರಾಮಿ ವಾಚ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಸಿಬಿಡಿಟಿ ಸೋಮವಾರ ತಿಳಿಸಿದೆ. ಅಕ್ಟೋಬರ್ ೧೨ರಂದು ಐಟಿ ಅಧಿಕಾರಿಗಳು ವಿವಿಧ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದರು ಮತ್ತು ಶೋಧ ಕಾರ್ಯ ಪ್ರಾರಂಭಿಸಿದರು. ಬೆಂಗಳೂರು ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ದೆಹಲಿಯ ಕೆಲವು ನಗರಗಳಲ್ಲಿ ಇಲಾಖೆಯು ಒಟ್ಟು ೫೫ ಕಡೆಗಳಲ್ಲಿ ದಾಳಿ ನಡೆಸಿದೆ. ಈ ವೇಳೆ ಅಂದಾಜು ೯೪ ಕೋಟಿ ರೂ. ನಗದು ಮತ್ತು ೮ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೇಳಿಕೆಯಲ್ಲಿ ತಿಳಿಸಿದೆ. ಇದಲ್ಲದೆ, ಶೋಧದ ಸಮಯದಲ್ಲಿ, ವಾಚ್‌ಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿರದ ಖಾಸಗಿ ಉದ್ಯೋಗಿ ಬಳಿ ವಿದೇಶಿ ನಿರ್ಮಿತ ಸುಮಾರು ೩೦ ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದೆ.

ಡಿ.ಕೆ.ಶಿ. ವಿರುದ್ಧದ ತನಿಖೆಯ ತಡೆಯಾಜ್ಞೆ ಹಿಂಪಡೆಯಲು ಸುಪ್ರೀಂ ನಕಾರ

ನವದೆಹಲಿ, ಅ. ೧೬: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ್ ಬೋಸ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠವು, ಸಿಬಿಐ ಮೇಲ್ಮನವಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

‘ಒತ್ತೆಯಾಳುಗಳನ್ನು ಷರತ್ತುಗಳಿಲ್ಲದೆ ತಕ್ಷಣವೇ ಬಿಡುಗಡೆ ಮಾಡಬೇಕು’

ನ್ಯೂಯಾರ್ಕ್, ಅ. ೧೬: ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವಿನ ಯುದ್ಧ ಮುಂದುವರೆದಿರುವAತೆಯೇ, ಯಾವುದೇ ರೀತಿಯ ಷರತ್ತುಗಳನ್ನು ಇಟ್ಟುಕೊಳ್ಳದೆ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹಮಾಸ್‌ಗೆ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅವರು, ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಯ ಮಧ್ಯೆ ಗುಟೆರೆಸ್ ಎರಡು ಮಾನವೀಯ ಮನವಿಗಳನ್ನು ಮಾಡಿದ್ದಾರೆ. ಒತ್ತೆಯಾಳುಗಳನ್ನು ಷರತ್ತುಗಳಿಲ್ಲದೆ ತಕ್ಷಣವೇ ಬಿಡುಗಡೆ ಮಾಡಬೇಕು, ಗಾಜಾದಲ್ಲಿನ ನಾಗರಿಕರಿಗೆ ಮಾನವೀಯ ಸಹಾಯಕ್ಕಾಗಿ ಇಸ್ರೇಲ್‌ಗೆ ತ್ವರಿತ ಮತ್ತು ಅಡೆತಡೆಯಿಲ್ಲದ ಪ್ರವೇಶವನ್ನು ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

ಪ್ರಗ್ನಾನAದ ಅವರನ್ನು ಭೇಟಿಯಾದ ಇಸ್ರೋ ಅಧ್ಯಕ್ಷ

ಚೆನ್ನೆöÊ, ಅ. ೧೬: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಶ್ರೀಧರ ಸೋಮನಾಥ್ ಅವರು ಸೋಮವಾರ ಭಾರತೀಯ ಚೆಸ್ ಆಟಗಾರ ರಮೇಶ್‌ಬಾಬು ಪ್ರಗ್ನಾನಂದ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಜಿಎಸ್ ಎಲ್ ವಿ ರಾಕೆಟ್ ನ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿ, ಮುಂಬರುವ ಪಂದ್ಯಗಳಲ್ಲಿ ಅವರ ಯಶಸ್ಸನ್ನು ಬಯಸಿದರು. ಪ್ರಗ್ನಾನಂದ ತಮಗೆ ಬಂದಿರುವ ಬಹುಮಾನಗಳನ್ನು ತೋರಿಸಿದರು. ಅಲ್ಲದೇ, ಇಸ್ರೋ ವಿಜ್ಞಾನಿಗಳ ಯಶಸ್ಸು ಮತ್ತು ಭವಿಷ್ಯದ ಮಿಷನ್ ಗಗನಯಾನಕ್ಕೆ ಶುಭಾಶಯಗಳನ್ನು ವ್ಯಕ್ತಪಡಿಸಿದರು. ಪ್ರಗ್ನಾನಂದ ಅವರ ತಂದೆ ರಮೇಶ್ ಬಾಬು ಕೂಡ ಉಪಸ್ಥಿತರಿದ್ದರು. ಪ್ರಗ್ಯಾನ್ ರೋವರ್ ಈಗ ನಿರಂತರವಾಗಿ ನಿದ್ರಿಸುತ್ತಿದ್ದಾರೆ ಆದರೆ ಮುಂಬರುವ ದಿನಗಳಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಚೆಸ್ ಆಟಗಾರನು ಸಕ್ರಿಯವಾಗಿರಬೇಕು ಎಂದು ಸೋಮನಾಥ್ ಅವರು ಪ್ರಗ್ನಾನಂದ ಅವರಿಗೆ ಹೇಳಿದರು.

ತಂದೆಯ ಕೋಪಕ್ಕೆ ಮಗ ಬಲಿ

ಚಿತ್ರದುರ್ಗ, ಅ. ೧೬: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಟಿವಿ ರಿಮೋಟ್‌ಗಾಗಿ ನಡೆದ ಜಗಳದಲ್ಲಿ ತಂದೆ ಎಸೆದ ಕತ್ತರಿ ಗಂಟಲು ಸೀಳಿದ ಪರಿಣಾಮ ೧೬ ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಗಂಟಲಿಗೆ ಕತ್ತರಿ ಚುಚ್ಚಿದ್ದು, ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆ. ಮೃತನನ್ನು ಆರೋಪಿ ಲಕ್ಷö್ಮಣ್ ಬಾಬುರ ಹಿರಿಯ ಪುತ್ರ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಚಂದ್ರಶೇಖರ್ ಮತ್ತು ಆತನ ಸಹೋದರ ಪವನ್ ಕುಮಾರ್(೧೪) ಟಿವಿ ಶೋ ವೀಕ್ಷಿಸಲು ರಿಮೋಟ್‌ಗಾಗಿ ಜಗಳವಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಪಾರ್ಶ್ವವಾಯು ರೋಗಿಯ ಲಕ್ಷ್ಮಣ್ ಬಾಬು ಚಂದ್ರಶೇಖರ್ ಮೇಲೆ ಕತ್ತರಿ ಎಸೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಶೇಖರ್‌ನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಕ್ಷö್ಮಣ್ ಬಾಬು ಅವರನ್ನು ವಶಕ್ಕೆ ಪಡೆದಿದ್ದಾರೆ.

ನಿರಾಶ್ರಿತರಿಗೆ ಪ್ರವೇಶ ನಿರ್ಬಂಧ - ನಿಕ್ಕಿ ಹ್ಯಾಲೆ ಕಿಡಿ

ವಾಷಿಂಗ್ಟನ್, ಅ. ೧೬: ಇಸ್ರೇಲ್-ಹಮಾಸ್ ಸಂಘರ್ಷದಿAದಾಗಿ ಗಾಜಾದಲ್ಲಿ ನಿರಾಶ್ರಿತರಾಗಿರುವವರಿಗೆ ಪ್ರವೇಶ ನಿರ್ಬಂಧಿಸಿರುವ ಮುಸ್ಲಿಂ ರಾಷ್ಟçಗಳ ವಿರುದ್ಧ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ನಿಕ್ಕಿ ಹ್ಯಾಲೆ ಕಿಡಿಕಾರಿದ್ದಾರೆ. ಇರಾನ್ ಪರಮಾಣು ಒಪ್ಪಂದಕ್ಕೆ ಸಂಬAಧಿಸಿದAತೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಹಾಲಿ ಅಧ್ಯಕ್ಷ ಜೋ ಬೈಡನ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಹ್ಯಾಲೆ, ಹಮಾಸ್ ಬಂಡುಕೋರರು ಮತ್ತು ಹೆಜ್ಜೆಲ್ಲಾ ಸಂಘಟನೆಗೆ ಇರಾನ್ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಸಿಎನ್‌ಎನ್ ಸುದ್ದಿಸಂಸ್ಥೆಯೊAದಿಗೆ ಮಾತನಾಡಿರುವ ಭಾರತ ಮೂಲದ ಹ್ಯಾಲೆ, ನಾವು ಪ್ಯಾಲೇಸ್ಟೀನ್ ನಾಗರಿಕರ ಕುರಿತು, ಅದರಲ್ಲೂ ಅಮಾಯಕರ ಬಗ್ಗೆ ಕಾಳಜಿ ವಹಿಸಬೇಕು. ಆದರೆ, ಅರಬ್ ರಾಷ್ಟ್ರಗಳು ಎಲ್ಲಿವೆ? ಕತಾರ್, ಲೆಬನಾನ್, ಜೋರ್ಡಾನ್, ಈಜಿಪ್ಟ್ ಎಲ್ಲಿ ಹೋಗಿವೆ? ನಿಮಗೆ ಗೊತ್ತಾ ನಾವು ಈಜಿಪ್ಟ್ಗೆ ಈ ವರ್ಷ ಒಂದು ಬಿಲಿಯನ್ ಡಾಲರ್ (ಅಂದಾಜು ೧ ೮ ಸಾವಿರ ಕೋಟಿ) ನೀಡಿದ್ದೇವೆ. ಆದರೆ, ಅವರು ಗಾಜಾ ನಿರಾಶ್ರಿತರಿಗೆ ಬಾಗಿಲು ಬಂದ್ ಮಾಡಿರುವುದೇಕೆ? ಎಂದು ಕೇಳಿದ್ದಾರೆ.

ರಾಜ್ಯದಲ್ಲಿ ೨ ಸಾವಿರ ಮೆ.ವ್ಯಾ. ವಿದ್ಯುತ್ ಕೊರತೆ

ಬೆಂಗಳೂರು, ಅ. ೧೬: ರಾಜ್ಯದಲ್ಲಿ ೨,೦೦೦ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ. ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿ ಸರ್ಕಾರದಲ್ಲಿ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನೆ ನಡೆಯಲಿಲ್ಲ. ಹೀಗಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹೊರಗಡೆ ವಿದ್ಯುತ್ ಖರೀದಿ ಮಾಡಲು ಕೂಡ ನಾನು ಸೂಚನೆ ಕೊಟ್ಟಿದ್ದೇನೆ. ಸಕ್ಕರೆ ಕಾರ್ಖಾನೆಯಿಂದ ವಿದ್ಯುತ್ ಉತ್ಪಾದನೆ ಹೆಚ್ಚು ಮಾಡಲು ಸೂಚನೆ ನೀಡಿದ್ದೇವೆ. ಆದಷ್ಟು ರೈತರಿಗೆ ತೊಂದರೆಯಾಗದAತೆ ವ್ಯವಸ್ಥೆ ಮಾಡುತ್ತೇವೆ ಎಂದು ಇಂದು ಮೈಸೂರಿನಲ್ಲಿ ತಿಳಿಸಿದರು.