ಕೂಡಿಗೆ, ಅ. ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಶ್ರೀ ಮಹಾದೇವಿ ಸನ್ನಿಧಿಯಲ್ಲಿ ೧೫ ರಿಂದ ೨೩ ರವರೆಗೆ ನಡೆಯುವ ನವರಾತ್ರಿ ಪೂಜೋತ್ಸವ ಕಾರ್ಯಕ್ರಮ ಗಳು ಆರಂಭಗೊAಡಿವೆ.

ಇದರ ಅಂಗವಾಗಿ ದೇವಾಲಯ ಆವರಣದಲ್ಲಿ ಪ್ರತಿ ದಿನ ಸಂಜೆ ೭ ಗಂಟೆ ಯಿಂದ ೮ ಗಂಟೆಯವರೆಗೆ ಭಕ್ತ ವೃಂದ ದವರ ಸಹಕಾರದೊಂದಿಗೆ ಲಲಿತಾ ಸಹಸ್ರ ನಾಮ ಪಾರಾಯಣದೊಂದಿಗೆ ಕುಂಕುಮಾರ್ಚನೆ ಕಾರ್ಯಕ್ರಮ ಆರಂಭಗೊAಡಿದೆ. ಪೂಜಾ ಕಾರ್ಯಕ್ರಮದ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ದಿನಂಪ್ರತಿ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ನಡೆಯುತ್ತಿದೆ. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಟಿ. ಎಂ. ಚಾಮಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಸಮಿತಿಯ ನಿರ್ದೇಶಕರು, ಸುತ್ತಮುತ್ತಲಿನ ಪ್ರದೇಶಗಳ ಗ್ರಾಮಸ್ಥರು ಹಾಜರಿದ್ದರು.

ಇಂದು ಚಂಡಿಕಾ ಹೋಮ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಮಹಾದೇವಿ ಸನ್ನಿಧಿಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಮೃತ್ಯುಂಜಯ ಹೋಮ ಮತ್ತು ಚಂಡಿಕಾ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯ ನಡೆಯಲಿದೆ.