ಗೋಣಿಕೊಪ್ಪಲು, ಅ. ೧೪: ವಾಣಿಜ್ಯ ನಗರ ಗೋಣಿಕೊಪ್ಪ ಇದೀಗ ವಿದ್ಯುತ್ ದೀಪಾಲಂಕಾರದಿAದ ಕಂಗೊಳಿಸುತ್ತಿದ್ದು ನಗರದಲ್ಲಿ ನವರಾತ್ರಿ ಅಂಗವಾಗಿ ಪ್ರತಿದಿನ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಆಕರ್ಷಕ ವೇದಿಕೆ ನಿರ್ಮಾಣಗೊಂಡಿದೆ. ಕಾರ್ಯಕ್ರಮದ ಯಶಸ್ವಿಗೆ ಹಲವು ಉಪ ಸಮಿತಿಗಳು ಉತ್ತಮ ರೀತಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಿವೆೆ. ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಬೃಹತ್ ಪ್ರಮಾಣದಲ್ಲಿ ಕಾವೇರಿ ಕಲಾ ವೇದಿಕೆಯ ನಿರ್ಮಾಣವಾಗಿದ್ದು, ಸಾವಿರಕ್ಕೂ ಅಧಿಕ ಮಂದಿ ಕುಳಿತುಕೊಂಡು ಕಾರ್ಯಕ್ರಮವನ್ನು ವೀಕ್ಷಿಸಲು ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಧ್ವನಿವರ್ಧಕದೊಂದಿಗೆ ವೇದಿಕೆಯಲ್ಲಿ ಬೃಹತ್ ಪ್ರಮಾಣದ ಎಲ್ಇಡಿ ಪರದೆಯನ್ನು ಅಳವಡಿಸಲಾಗಿದೆ. ಪ್ರತಿನಿತ್ಯದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಗೋಣಿಕೊಪ್ಪ ದಸರಾ ಸಮಿತಿಯ ಪದಾಧಿಕಾರಿಗಳು ಈಗಾಗಲೇ ಪೂರ್ವತಯಾರಿ ನಡೆಸಿದ್ದಾರೆ. ವಿವಿಧ ಉಪ ಸಮಿತಿಗಳು ತಮಗೆ ನೀಡಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿವೆ.
ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ೪೫ನೇ ವರ್ಷದ ಅಧ್ಯಕ್ಷರಾಗಿರುವ ಕುಲ್ಲಚಂಡ ಪ್ರಮೋದ್ ಗಣಪತಿ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣನವರ ಮಾರ್ಗದರ್ಶನದಲ್ಲಿ ಯಶಸ್ವಿ ಜನೋತ್ಸವ ನಡೆಸಲು ಯೋಜನೆ ರೂಪಿಸಿದ್ದಾರೆ.
ನಗರದಲ್ಲಿ ಎರಡು ಬದಿಯಲ್ಲಿಯೂ ವಿದ್ಯುತ್ ದೀಪಾಲಂಕೃತಗಳಿAದ ಕಂಗೊಳಿಸುತ್ತಿದೆ.
(ಮೊದಲ ಪುಟದಿಂದ) ನಗರದ ಹಲವು ಭಾಗದಲ್ಲಿ ವಿವಿಧ ಕಾರ್ಯ ಕ್ರಮಗಳ ಬ್ಯಾನರ್ಗಳನ್ನು ಹಾಕಲಾ ಗಿದ್ದು ಪ್ರಚಾರದ ಮೂಲಕ ಜನರನ್ನು ಆಕರ್ಷಿಸಲು ತಯಾರಿ ನಡೆದಿದೆ. ಗೋಣಿಕೊಪ್ಪ ದಸರಾ ಆಹ್ವಾನಕ್ಕೆ ದೊಡ್ಡ ದೊಡ್ಡ ಬ್ಯಾನರ್ಗಳನ್ನು ಅಳವಡಿಸಲಾಗಿದೆ. ಜನರನ್ನು ಇತ್ತ ಕರೆತರುವ ಪ್ರಯತ್ನಕ್ಕೆ ಸಮಿತಿಯು ಶ್ರಮಿಸುತ್ತಿದೆ. ನಗರಕ್ಕೆ ವಿವಿಧ ಭಾಗ ದಿಂದ ಆಗಮಿಸುವ ಮುಖ್ಯ ದ್ವಾರಗ ಳಲ್ಲಿ ಸ್ವಾಗತ ಕೋರುವ ಬ್ಯಾನರ್ಗಳು, ಲೈಟಿಂಗ್ಸ್ಗಳನ್ನು ಅಳವಡಿಸಲಾಗಿದೆ.
ದಸರಾ ಜನೋತ್ಸವದ ಅಂಗವಾಗಿ ರಾಜ್ಯದ ಸಚಿವ ಸಂಪುಟದ ಹಲವು ಸಚಿವರು ಆಗಮಿಸುವ ಸಾಧ್ಯತೆ ಹೆಚ್ಚಿರುವುದರಿಂದ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ವೇದಿ ಕೆಯ ಮೆರುಗನ್ನು ಹೆಚ್ಚಿಸಲು ಸಮಿ ತಿಯು ಸಕಲ ವ್ಯವಸ್ಥೆ ಕೈಗೊಂಡಿದೆ.
ನೂತನ ಸರ್ಕಾರದಲ್ಲಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾ ಗಿರುವ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಗೋಣಿಕೊಪ್ಪ ದಸರಾಕ್ಕೆ ರಾಜ್ಯದ ಮುಖ್ಯಮಂತ್ರಿಯಿAದ ಕಳೆದ ಬಾರಿಯಂತೆ ಈ ಬಾರಿಯೂ ೫೦ ಲಕ್ಷ ಅನುದಾನವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದಲ್ಲಿ ೧೦ ದಿನಗಳ ಕಾಲ ಹಬ್ಬದ ಸಂಭ್ರಮ ಮನೆ ಮಾಡಲಿದ್ದು ದಶಮಂಟಪಗಳಿಗೆ ತಲಾ ರೂ. ೧.೭೫ ಲಕ್ಷ ಅನುದಾನವನ್ನು ನೀಡುವ ತೀರ್ಮಾನ ಕೈಗೊಂಡಿದೆ. ನವರಾತ್ರಿ ಯಂದು ಪ್ರಮುಖ ಆಕರ್ಷಣೆಯಾದ ಸ್ತಬ್ಧಚಿತ್ರ ಮೆರವಣಿಗೆ ದಸರಾ ನಾಡ ಹಬ್ಬ ಸಮಿತಿಯೊಂದಿಗೆ ಆರ್ಎಂಸಿ ಯಾರ್ಡ್ನಿಂದ ಆರಂಭಗೊಳ್ಳಲಿದೆ. ಮೆರವಣಿಗೆಯ ಆರಂಭದಲ್ಲಿ ೨ ಆನೆಗಳು ಆಗಮಿಸುವ ಸಾಧ್ಯತೆ ಹೆಚ್ಚಾ ಗಿದ್ದು, ಸ್ತಬ್ಧಚಿತ್ರಕ್ಕೆ ವಿಶೇಷ ಮೆರುಗು ಬರಲಿದೆ. ದಸರಾ ಕಾರ್ಯಕ್ರಮಕ್ಕೆ ಆನೆ ಯನ್ನು ಕಳುಹಿಸಿಕೊಡಲು ಈಗಾಗಲೇ ಶಾಸಕ ಪೊನ್ನಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅರಣ್ಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ನವರಾತ್ರಿಯಂದು ಸಂಜೆಯ ವೇಳೆ ಮಂಟಪಗಳು ನಿಗದಿತ ಸಮಯದಲ್ಲಿ ಉಮಾಮಹೇಶ್ವರಿ ದೇವಸ್ಥಾನದ ಆವರಣದಿಂದ ಹೊರಡಲು ಈಗಾಗಲೇ ಸಮಿತಿಗಳಿಗೆ ಸೂಚನೆ ನೀಡಲಾಗಿದೆ. ದಸರಾ ಅಂಗವಾಗಿ ತಾ.೧೫(ಇಂದು) ರಿಂದ ಹತ್ತು ದಿನಗಳ ಕಾಲ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಮಾಡುವ ಮೂಲಕ ಪ್ರತಿದಿನ ಪೂಜಾ ಕೈಂಕರ್ಯಗಳು, ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣನವರು ಸೇರಿದಂತೆ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆಯು ಇಂದು ಬೆಳಿಗ್ಗೆ ೭ ಗಂಟೆಗೆ ಜರುಗಲಿದೆ. ಸಂಜೆ ೬ ಗಂಟೆಯಿAದಲೇ ಪ್ರಾಥಮಿಕ ಶಾಲಾ ಮೈದಾನದ ಕಾವೇರಿ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿಭಿನ್ನ ರೀತಿಯ ಕಾರ್ಯಕ್ರಮಗಳು ಮೂಡಿ ಬರಲಿವೆ. ಪ್ರತಿ ದಿನ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಕಾರ್ಯಕ್ರಮ ನಡೆಯಲಿದೆ. ಕಾವೇರಿ ಜನೋತ್ಸವದ ಅಂಗವಾಗಿ ರಾಜ್ಯಮಟ್ದದ ಕಬಡ್ಡಿ ಪಂದ್ಯಾಟ ಶಿವಾಜಿ ಸೇನೆಯಿಂದ ಹಮ್ಮಿಕೊಳ್ಳಲಾಗಿದೆ. ಬೈಕ್ ರ್ಯಾಲಿಯನ್ನು ಸೌತ್ಕೂರ್ಗ್ ಕ್ಲಬ್ ವತಿಯಿಂದ ಹರಿಶ್ಚಂದ್ರಪುರದ ಮೈದಾನದಲ್ಲಿ ನಡೆಯಲಿದೆ. ಮಕ್ಕಳ ದಸರಾ, ಮಹಿಳಾ ದಸರಾ, ಕವಿಗೋಷ್ಠಿ, ಯುವದಸರಾ, ಬೈಕ್ಸ್ಟಂಟ್ ಸೇರಿದಂತೆ ಅನೇಕ ಕಾರ್ಯಕ್ರಮಗಳು ಈ ಬಾರಿ ಜನಾಕರ್ಷಣೆ ಪಡೆಯಲಿವೆ. ವಿವಿಧ ಉಪ ಸಮಿತಿಗಳು ಕಾರ್ಯಕ್ರಮದ ಯಶಸ್ವಿಗೆ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ.*ಗೋಣಿಕೊಪ್ಪ: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಅಕ್ಟೋಬರ್ ೧೫ ರಿಂದ ಅ. ೨೪ ರವರೆಗೆ ಜರುಗಲಿರುವ ೪೫ ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ ಕಾರ್ಯಕ್ರಮ ಪಟ್ಟಿಯನ್ನು ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಶುಕ್ರವಾರ ಬಿಡುಗಡೆಗೊಳಿಸಿದರು.
ಸರ್ಕಾರಿ ಕನ್ನಡ ಮಾಧ್ಯಮ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ಕಾವೇರಿ ಕಲಾ ವೇದಿಕೆಯಲ್ಲಿ ೧೦ ದಿನಗಳ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಗಳು
ತಾ. ೧೫ ರಂದು ಸಂಜೆ ೬ ಗಂಟೆಗೆ ಸ್ಥಳೀಯ ಪ್ರತಿಭಾ ಕಾರ್ಯಕ್ರಮ, ರಾತ್ರಿ ೮.೪೫ ಕ್ಕೆ ಧರ್ಮಸ್ಥಳ ಶ್ರೀ ಸುಬ್ರಮಣ್ಯ ಮುದ್ರಾ ಶಾಲಾ ಮತ್ತು ನೃತ್ಯಾಲಯದ ನೃತ್ಯ ಕಾರ್ಯಕ್ರಮ, ತಾ. ೧೬ ರಂದು ಸಂಜೆ ೬ ಗಂಟೆಗೆ ನಾಗರಹೊಳೆ ರಮೇಶ್ ತಂಡದಿAದ ಸಂಗೀತ, ನೃತ್ಯ, ೭ ಕ್ಕೆ ಜಗನ್ಮೋಹನ ನಾಟ್ಯಾಲಯದ ಭರತನಾಟ್ಯ, ಖ್ಯಾತ ಗಾಯಕ ಚಂದನ್ ಶೆಟ್ಟಿ ತಂಡದಿAದ ಸಂಗೀತ ಸಂಜೆ ಮೂಡಿಬರಲಿದೆ. ತಾ. ೧೭ ರಂದು ಯುವ ದಸರಾ ನಡೆಯಲಿದ್ದು, ಬಸ್ ನಿಲ್ದಾಣದಲ್ಲಿ ಸಾಯಂಕಾಲ ೩ ಗಂಟೆಗೆ ಜಿಲ್ಲಾಮಟ್ಟದ ಸೈಕಲ್ ರೇಸ್, ಬೈಕ್ ಸ್ಟಂಟ್, ಸಂಜೆ ಕುಶಾಲನಗರ ಕ್ರಿಯೇಟಿವ್ ಡ್ಯಾನ್ಸ್ ತಂಡದ ನೃತ್ಯ, ಪೊನ್ನಂಪೇಟೆ ಜೀವನ್ ಮೆಲೋಡಿ ತಂಡದ ಹಾಡುಗಾರಿಕೆ, ಮೈಸೂರು ಹೆರಿಟೇಜ್ ತಂಡದ ಹಿಟ್ ಕನ್ನಡ ಹಾಡು, ರಾಜ್ಯಮಟ್ಟದ ನೃತ್ಯ ಸ್ಪರ್ಧೆ, ತಾ. ೧೮ ರಂದು ಸಂಜೆ ಪೊನ್ನಂಪೇಟೆ ಜೈಭೀಮ್ ಗಡಿನಾಡು ಜನಪದ ಕಲಾ ತಂಡದ ಕಾರ್ಯಕ್ರಮ, ಕುಶಾಲನಗರ ಯದುವೀರ್ ತಂಡದ ಸಾಕ್ಸೊ ಫೋನ್ ವಾದನ, ಪೊನ್ನಂಪೇಟೆ ನಾಟ್ಯ ಸಂಕಲ್ಪ ತಂಡದ ನೃತ್ಯ, ಹೆಜ್ಜೆನಾದ ಕಲಾ ತಂಡದಿAದ ನೃತ್ಯ, ಸಂಗೀತ ಕಾರ್ಯಕ್ರಮ, ತಾ. ೧೯ ರಂದು ಸಂಜೆ ಇಂಟೋಪಿಸ್ ಡ್ಯಾನ್ಸ್ ತಂಡದ ನೃತ್ಯ, ಬೆಂಗಳೂರು ಕಾವೇರಿ ಅಯ್ಯಪ್ಪ ತಂಡದ ಸಂಗೀತ, ಭಾರ್ಗವಿ ಇವೆಂಟ್ ಮತ್ತು ಎಂಟರ್ಟೈನ್ಮೆAಟ್ ತಂಡದ ನೃತ್ಯ, ತಾ. ೨೦ ರಂದು ಮಕ್ಕಳ ದಸರಾ ಕಾರ್ಯಕ್ರಮ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಬೆ. ೧೦ ಗಂಟೆಯಿAದ ನಡೆಯಲಿದೆ. ಸಂಜೆ ಪಂಚಮ್ ತ್ಯಾಗರಾಜ್ ತಂಡದ ಸಂಗೀತ, ಮಜಾ ಭಾರತ ಮತ್ತು ಕಾಮಿಡಿ ಕಿಲಾಡಿ ಕಲಾವಿದರ ಹಾಸ್ಯ, ತಾ. ೨೧ ರಂದು ಬೆ. ೧೦ ಗಂಟೆಯಿAದ ಕಾವೇರಿ ಕಲಾ ವೇದಿಕೆಯಲ್ಲಿ ಮಹಿಳಾ ದಸರಾ ನಡೆಯಲಿದ್ದು, ಸಂಜೆ ಬೆಂಗಳೂರು ಭೂಮಿಕ, ದೀಪಿಕ ತಂಡದ ಸಂಗೀತ, ಪೊನ್ನಂಪೇಟೆ ಸುವೃತ ನೃತ್ಯ ಶಾಲೆಯ ಭರತನಾಟ್ಯ, ಕೃಕ್ ನೃತ್ಯ, ಸೈಕ್ಲೋನ್ ತಂಡದ ನೃತ್ಯ ಕಾರ್ಯಕ್ರಮ ಇರಲಿದೆ. ತಾ. ೨೨ ರಂದು ಬೆ. ೧೦ ಗಂಟೆಗೆ ಕಾವೇರಿ ಕಲಾ ವೇದಿಕೆಯಲ್ಲಿ ದಸರಾ ಕವಿಗೋಷ್ಠಿ, ಸಂಜೆ ಕುಶಾಲನಗರ ನಾಟ್ಯನಿಕೇತನ ತಂಡದ ಭರತನಾಟ್ಯ, ವಿ. ಟಿ. ಶ್ರೀನಿವಾಸ್ ತಂಡದ ವಾದ್ಯ ಸಂಗೀತ, ರಿಫ್ಲೆಕ್ಷನ್ ಡ್ಯಾನ್ಸ್ ತಂಡದ ನೃತ್ಯ, ತಾ. ೨೩ ರಂದು ಸಂಜೆ ಪೊನ್ನಂಪೇಟೆ ನಿಸರ್ಗ ಕಲಾ ತಂಡದ ವೈವಿಧ್ಯಮಯ ಕಾರ್ಯಕ್ರಮ, ವೀರಾಜಪೇಟೆ ನಾಟ್ಯಮಯೂರಿ ತಂಡದ ಭರತನಾಟ್ಯ, ಬಸ್ ನಿಲ್ದಾಣದಲ್ಲಿ ಆಯುಧಪೂಜೆ, ರಸಮಂಜರಿ, ತಾ. ೨೪ ರಂದು ಬೆ. ೧೧.೩೦ ಗಂಟೆಯಿAದ ಸ್ತಬ್ಧಚಿತ್ರ ಮೆರವಣಿಗೆ, ಸಂಜೆ ರ್ವತೋಕ್ಲು ಅಮೃತ ನೃತ್ಯಾಲಯ ತಂಡದ ಭರತನಾಟ್ಯ, ಅಮ್ಮತ್ತಿ ನಾಟ್ಯಾಂಜಲಿ ನೃತ್ಯ ಶಾಲೆಯ ಭರತನಾಟ್ಯ, ಜನಪದ ನೃತ್ಯ, ರಾತ್ರಿ ಸರಿಗಮಪ ಖ್ಯಾತಿಯ ಕಲಾವಿದರ ಸಂಗೀತ ಮೂಡಿಬರಲಿದೆ ಎಂದು ತಿಳಿಸಿದರು. ಸಮಿತಿ ಪ್ರ. ಕಾರ್ಯದರ್ಶಿ ಕಂದಾ ದೇವಯ್ಯ, ಉಪಾಧ್ಯಕ್ಷ ಎಂ. ಮಂಜುಳ, ಎನ್.ಆರ್ ಶಿವಾಜಿ, ಖಜಾಂಚಿ ಧ್ಯಾನ್ ಸುಬ್ಬಯ್ಯ, ನಿಕಟಪೂರ್ವ ಅಧ್ಯಕ್ಷ ಬಿ.ಎನ್. ಪ್ರಕಾಶ್, ಸಾಂಸ್ಕೃತಿಕ ಸಮಿತಿ ಸಂಚಾಲಕ ದಿಲನ್ ಚೆಂಗಪ್ಪ, ಕಾರ್ಯದರ್ಶಿ ರಮೇಶ್, ನಿರ್ದೇಶಕಿ ನೂರೇರ ಧನ್ಯ, ಗ್ರಾ. ಪಂ. ಅಧ್ಯಕ್ಷೆ ಸೌಮ್ಯ ಬಾಲು, ಪ್ರಚಾರ ಸಮಿತಿ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.