ಮಡಿಕೇರಿ, ಅ. ೧೪: ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎನ್.ಎಸ್. ಬೋಸರಾಜು ಅವರ ಕೋರಿಕೆ ಮೇಲೆ ಮಡಿಕೇರಿ ದಸರಾಕ್ಕೆ ಹೆಚ್ಚುವರಿಯಾಗಿ ರೂ. ೨೦ ಲಕ್ಷ ಹಾಗೂ ಗೋಣಿಕೊಪ್ಪ ದಸರಾಕ್ಕೆ ರೂ. ೧೦ ಲಕ್ಷ ಅನುದಾನ ಬಿಡುಗಡೆಗೆ ಇದೀಗ ಆದೇಶವಾಗಿದೆ. ಈ ಹಿಂದೆ ಮಡಿಕೇರಿಗೆ ರೂ. ೭೫ ಲಕ್ಷ ಹಾಗೂ ಗೋಣಿಕೊಪ್ಪ ದಸರಾಕ್ಕೆ ರೂ. ೫೦ ಲಕ್ಷ ಬಿಡುಗಡೆಯಾಗಿತ್ತು. ದಸರಾ ಸಮಿತಿಗಳು ಹೆಚ್ಚುವರಿ ಅನುದಾನಕ್ಕೆ ಶಾಸಕರುಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದಿದ್ದವು.