ಮಡಿಕೇರಿ, ಅ. ೧೪: ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ದಿ.ಬಿ.ಎಸ್ ಗೋಪಾಲಕೃಷ್ಣ ಅವರು ಕೊಡಗಿನ ಭಗೀರಥ ಎಂದು ಜಿಲ್ಲೆಯ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಭಿಮತ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗಾಳಿಬೀಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರು ಹಾಗೂ ಸಾಹಿತಿ ದಿ.ಬಿ.ಎಸ್.ಗೋಪಾಲಕೃಷ್ಣ ದತ್ತಿ ಉಪನ್ಯಾಸ ಹಾಗೂ ಜಿಲ್ಲಾ ಮಟ್ಟದ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.
ಬಡತನದಲ್ಲಿ ಜನಿಸಿದ ಗೋಪಾಲಕೃಷ್ಣ ಅವರು; ೬೭ ವರ್ಷದ ಹಿಂದೆ ಶಕ್ತಿ ಪತ್ರಿಕೆಯನ್ನು ಹುಟ್ಟು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.
ಬಡತನದಲ್ಲಿ ಜನಿಸಿದ ಗೋಪಾಲಕೃಷ್ಣ ಅವರು; ೬೭ ವರ್ಷದ ಹಿಂದೆ ಶಕ್ತಿ ಪತ್ರಿಕೆಯನ್ನು ಹುಟ್ಟು ಮನೋಬಲವಿರಬೇಕು, ಅದು ಅವರಲ್ಲಿದ್ದಿತು. ವಿದ್ಯಾರ್ಥಿಗಳಿಗೆ ಇಂತಹ ಸಾಧಕರ ಜೀವನ ಆದರ್ಶ ವಾಗಬೇಕು. ಕೇವಲ ಉಪದೇಶಗಳನ್ನು ಕೇಳಿದರೆ ಸಾಲದು, ಅದನ್ನು ನಮ್ಮದಾ ಗಿಸಿಕೊಂಡು ಸ್ವಂತ ಮಾಡಿಕೊಳ್ಳುವ ಮೂಲಕ ಉಪಯೋಗಿಸಿಕೊಳ್ಳಬೇಕು. ಸುತ್ತಲಿನ ಪರಿಸರ ಕಲಿಸುವ ಪಾಠಗಳನ್ನು ಕ್ರೋಢೀಕರಿಸಿಕೊಂಡರೆ ಭಗೀರಥ ಆಗಲು ಸಾಧ್ಯ.
(ಮೊದಲ ಪುಟದಿಂದ) ಹಾಗಾಗಿ ಗೋಪಾಲಕೃಷ್ಣರು ಕೊಡಗಿನ ಭಗೀರಥ ಎಂದು ಬಣ್ಣಿಸಿದರು. ಜಿಲ್ಲೆಯಲ್ಲಿ ಇಂತಹ ಅನೇಕ ಸಾಧಕರಿದ್ದು, ಅವರುಗಳನ್ನು ನೋಡಿ ಕಲಿಯುವದು ಬಹಳಷ್ಟಿದೆ. ವಿದ್ಯಾರ್ಥಿಗಳು ಇದನ್ನರಿತು ಭವಿಷ್ಯ ಉನ್ನತಮಟ್ಟಕ್ಕೆ ಏರಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ನವೋದಯ ವಿದ್ಯಾಲಯ ಪ್ರಾಂಶುಪಾಲ ಒ.ಎಂ. ಪಂಕಜಾಕ್ಷನ್ ಮಾತನಾಡಿ; ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ನಡುವೆ ಸಂಸ್ಕೃತಿಯ ಉತ್ಥಾನ ಆಗಬೇಕಿದ್ದಲ್ಲಿ ಭಾಷಾಭಿಮಾನ ಮತ್ತು ಭಾಷೆಗಳ ಬಳಸುವಿಕೆ, ಬೆಳೆಸುವಿಕೆ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇಂದು ಗೋಪಾಲಕೃಷ್ಣ ದತ್ತಿ ನಿಧಿ ಕಾರ್ಯಕ್ರಮವನ್ನು ನವೋದಯ ಶಾಲೆಯಲ್ಲಿ ನಡೆಸುತ್ತಿರುವುದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ; ಗೋಪಾಲಕೃಷ್ಣ ಅವರ ಗರಡಿಯಲ್ಲಿ ತಾನೂ ಕೂಡ ಕೆಲಸ ಮಾಡಿದ್ದೇನೆ. ಕೊಡಗಿನಲ್ಲಿ ಪತ್ರಿಕೆ ಎಂದರೆ ನೆನಪಿಗೆ ಬರುವದು ಗೋಪಾಲಕೃಷ್ಣ ಅವರನ್ನು. ಅವರು ಪತ್ರಿಕೆಯ ನೆಲವನ್ನು ಮಾತ್ರ ಕಂಡಿಲ್ಲ; ಪತ್ರಿಕೆಯ ಮೂಲಕ ಏನೆಲ್ಲ ಸಾಹಸ ಮಾಡಬಹುದೆಂದು ತೋರಿಸಿಕೊಟ್ಟವರು. ಪರಿಶ್ರಮದಿಂದ ಪತ್ರಿಕೆಯನ್ನು ಮುನ್ನಡೆಸಿದವರು. ಇಂದು ಇಲ್ಲಿಯ ಜನರ ದೈನಂದಿನ ಕಾರ್ಯಕ್ರಮ ಆರಂಭಗೊಳ್ಳುವದೇ ಶಕ್ತಿ ಪತ್ರಿಕೆಯಿಂದ ಎಂದು ಹೇಳಬಹುದು. ಜಿಲ್ಲೆಯ ಆಗು ಹೋಗುಗಳನ್ನು ಮೂಲೆ ಮೂಲೆಯ ಜನರಿಗೆ ತಲುಪಿಸುವ ಕಾರ್ಯವನ್ನು ಪತ್ರಿಕೆ ಮಾಡುತ್ತಿದೆ. ಗೋಪಾಲಕೃಷ್ಣರು ‘ಶಕ್ತಿ’ ಮಾತ್ರವಲ್ಲದೆ ಇತರ ಪತ್ರಿಕೆಗಳನ್ನು ಕೂಡ ಹೊರತಂದಿದ್ದರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು. ಮಾಧ್ಯಮ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ಪತ್ರಿಕಾರಂಗ, ಸಾಹಿತ್ಯ, ನಾಟಕರಂಗಕ್ಕೂ ಕೊಡುಗೆ ನೀಡಿರುವ ಅವರನ್ನು ಕೊಡಗಿನ ಪತ್ರಿಕಾರಂಗದ ಭೀಷ್ಮ ಎಂದು ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಅವರು; ಕೊಡಗು ಜಿಲ್ಲೆಯಲ್ಲಿ ಪತ್ರಿಕೆಗಳೇ ಇಲ್ಲದ ಸಂದರ್ಭದಲ್ಲಿ ಕ್ರಾಂತಿ ಮಾಡಿದ ಸಾಧಕ ವ್ಯಕ್ತಿ ಗೋಪಾಲಕೃಷ್ಣ ಅವರು. ಎಲ್ಲ ರೀತಿಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದವರು. ಅವರ ಹೆಸರಿನಲ್ಲಿ ಅವರ ಪುತ್ರ, ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ದತ್ತಿ ನಿಧಿ ಸ್ಥಾಪನೆ ಮಾಡಿದ್ದಾರೆ. ಜಿಲ್ಲೆಯ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದತ್ತಿ ಸ್ಥಾಪನೆ ಮಾಡಲಾಗಿದ್ದು, ಆ ಮೂಲಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಎಂದು ಹೇಳಿದರು. ಕನ್ನಡ ನಾಡು, ನುಡಿ, ಸಾಹಿತ್ಯ ಸೇವೆಗೆ ಪರಿಷತ್ತು ಸೇವೆ ಸಲ್ಲಿಸುತ್ತಿದೆ. ಬಹುಮುಖಿ ಆಯಾಮಗಳಿಗೆ ಸ್ಪಂದಿಸುತ್ತ ಸಾಹಿತ್ಯ, ಭಾಷೆಯ ಹಿರಿಮೆ, ಗರಿಮೆ ಸಾರುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಸಾಹಿತ್ಯ ಓದುವದರೊಂದಿಗೆ ಅವರಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಶಾಲೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅನಂತಶಯನ ಅವರ ಪತ್ನಿ ಜಯಶ್ರೀ ಅನಂತಶಯನ ಅವರು ತಮ್ಮ ಮಾವ ಗೋಪಾಲಕೃಷ್ಣ ಅವರ ಬಗ್ಗೆ ಸವಿವರವಾಗಿ ವಿವರಿಸಿದರು. ತಮಗೆ ಬಡತನವಿದ್ದರೂ ಗೋಪಾಲಕೃಷ್ಣರು ಇತರ ಅನೇಕ ಮಕ್ಕಳಿಗೆ ಸಹಾಯ ಮಾಡಿದ ಅನೇಕ ನಿದರ್ಶನಗಳಿವೆ. ಇದರಿಂದ ಅವರ ಹೃದಯ ವೈಶಾಲ್ಯತೆ ಕಾಣಬಹುದಾಗಿದೆ. ಹಟ, ಆತ್ಮಸ್ಥೆöÊರ್ಯ, ಸತ್ಯ, ನೇರ ನಡೆ, ನಿಷ್ಠುರತೆಯಿಂದ ಉತ್ತುಂಗಕ್ಕೇರಿದವರು. ಸಾಹಿತ್ಯದಲ್ಲಿ ಅಧÀ್ಯಯನ ನಡೆಸಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಸಂಗೀತ, ಗಮಕ, ನಾಟಕದಲ್ಲಿ ಪಕ್ವವಾಗಿದ್ದರು ಎಂದು ತಿಳಿಸಿದರು. ಈ ದತ್ತಿ ಸ್ಪರ್ಧೆಯಲ್ಲಿ ಪುರುಷ ಲೇಖಕರೂ ಭಾಗವಹಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಭಾಗವಹಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಬಹುಮಾನ ವಿತರಣೆ
ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ದತ್ತಿ ಕಥಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭ ಬಹುಮಾನ ವಿತರಣೆ ಮಾಡಲಾ ಯಿತು. ಪ್ರಥಮ ಬಹುಮಾನಕ್ಕೆ ಭಾಜನರಾದ ಮೂರ್ನಾಡುವಿನ ಸಾಹಿತಿ, ನಟಿ, ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಹಾಗೂ ತೃತೀಯ ಬಹುಮಾನ ಪಡೆದ ಕುಕ್ಕುನೂರು ರೇಷ್ಮ ಮನೋಜ್ ಅವರುಗಳಿಗೆ ಗೋಪಾಲಕೃಷ್ಣ ಅವರ ಪತ್ನಿ ರಾಜಲಕ್ಷಿö್ಮ ಗೋಪಾಲಕೃಷ್ಣ ಬಹುಮಾನ ವಿತರಣೆ ಮಾಡಿದರು.
ವೇದಿಕೆಯಲ್ಲಿ ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಜಿಲ್ಲಾ ನಿರ್ದೇಶಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಇದ್ದರು. ನವೋದಯ ಶಾಲೆಯ ಪ್ರಾಧ್ಯಾಪಕ ಮಾರುತಿ ದಾಸಣ್ಣನವರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕಸಾಪ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ನಿರೂಪಿಸಿದರೆ, ಶಿಕ್ಷಕ ಗಣೇಶ್ ಹೆಗಡೆ ಸ್ವಾಗತಿಸಿದರು. ಕಸಾಪ ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ಕುಮಾರ್ ವಂದಿಸಿದರು.