ಮಡಿಕೇರಿ, ಅ. ೧೪: ಕುಶಾಲನಗರದಲ್ಲಿರುವ ಹಳೆ ಸೇತುವೆಯನ್ನು ಸ್ಮಾರಕವಾಗಿ ಸಂರಕ್ಷಿಸುವAತೆ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಹೈಕೋರ್ಟ್ ವಕೀಲ ಅಮೃತೇಶ್. ಎನ್.ಪಿ. ಮತ್ತು ದೀಕ್ಷಾ ಎನ್ ಅಮೃತೇಶ್ ಅವರು ಕೊಡಗಿನ ಕುಶಾಲನಗರದಲ್ಲಿರುವ ಪುರಾತನ ಸೇತುವೆಯನ್ನು ಸ್ಮಾರಕವಾಗಿ ಸಂರಕ್ಷಣಾ ಪಟ್ಟಿಗೆ ಸೇರಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಭಾರತ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾನಿರ್ದೇಶಕ ಪ್ರೊ. ಕಿಶೋರ್ ಕೆ. ಬಾಸಾ ಹಾಗೂ ಸ್ಮಾರಕಗಳು ಮತ್ತು ಪುರಾತನ ವಸ್ತುಗಳ ರಾಷ್ಟಿçÃಯ ಮಿಷನ್ ನಿರ್ದೇಶಕಿ ಡಾ. ಮಧುಲಿಕಾ ಸಾಮಂತ , ಕೊಡಗು ಜಿಲ್ಲಾಧಿಕಾರಿ, ಕುಶಾಲನಗರ ಪುರಸಭಾಧಿಕಾರಿ ಮೊದಲಾದವರಿಗೆೆ ಕಳುಹಿಸಿರುವ ಮನವಿ ಪತ್ರದಲ್ಲಿ ಈ ಕೆಳಗಿನಂತೆ ಕೋರಿಕೆ ಮುಂದಿಟ್ಟಿದ್ದಾರೆ.

ಕುಶಾಲನಗರದಲ್ಲಿ ಮಹತ್ವದ ಪುರಾತನ ಸ್ಮಾರಕವಿದ್ದು, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಆಶ್ರಯದಲ್ಲಿ ಸಂರಕ್ಷಣೆಗಾಗಿ ತಕ್ಷಣದ ಪರಿಗಣನೆಗೆ ಅರ್ಹವಾಗಿದೆ. ಕುಶಾಲನಗರದಲ್ಲಿರುವ ಐತಿಹಾಸಿಕ ಸ್ಮಾರಕ, ವಿಶೇಷವಾಗಿ ನಮ್ಮ ರಾಷ್ಟçದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ ವಾಸ್ತುಶಿಲ್ಪದ ಹಿನ್ನೆಲೆಯೊಂದಿಗೆÀ ಪ್ರೇರ್‌ಪೇಟೆ ಸೇತುವೆ ಅದ್ಭುತವಾಗಿ ನೆಲೆ ನಿಂತಿದೆ. ಈ ಸೇತುವೆಯನ್ನು ೧೮೪೬ ರಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲಾಯಿತು ಮತ್ತು ೧೮೪೮ ರಲ್ಲಿ ಕೊಡಗು ಮೈಸೂರು ಆಡಳಿತದ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಅವರು ಉದ್ಘಾಟಿಸಿದ್ದರು, ಇದು ಪ್ರಸ್ತುತ ೧೭೫ ವರ್ಷಗಳಿಗಿಂತ ಹಳೆಯದಾಗಿದೆ. ಉದ್ಘಾಟನಾ ಶಿಲೆಯನ್ನು ಹಳೆಗನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಕೆತ್ತಲಾಗಿದೆ, ಸುಂದರವಾದ ಅಮೃತಶಿಲೆಯ ಚಪ್ಪಡಿಯಲ್ಲಿ ಮೂಡಿಬಂದಿದೆ. ಇದೀಗ ಇದನ್ನು ನಿರ್ವಹಣೆ ಮಾಡದೆ ಶಿಥಿಲ ಸ್ಥಿತಿಯಲ್ಲಿದೆ.

ಈ ಸೇತುವೆಯನ್ನು ಟಿಪ್ಪು ಸುಲ್ತಾನನ ಕಾಲದಲ್ಲಿ ವಾಹನ ಸಂಚಾರಕ್ಕೆ ಬಳಸಲಾಗುತ್ತಿತ್ತು, ಈ ಮೂಲಕ ಸಂಚಾರದಿAದಲೇ ಆತ ಮೊದಲು ಪಿರಿಯಾಪಟ್ಟಣ ಕೋಟೆಯನ್ನು ಗೆದ್ದನು, ಮುಂದೆ ಕೊಡಗಿನ ಕಡೆಗೆ ಸಾಗಿದನು, ಅಲ್ಲಿ ಅವನು ಪ್ರೇಸರ್‌ಪೇಟೆಗೆ (ಈಗಿನ ಕುಶಾಲನಗರ) ಪ್ರವೇಶಿಸಿದನು, ಈ ಸೇತುವೆಯ ಮೂಲಕ ಅವನು ಪ್ರೇಸರ್‌ಪೇಟೆ ಕೋಟೆಯನ್ನು ಗೆದ್ದು ಪ್ರವೇಶಿಸಿದಾಗ ಆತನಿಗೆ ಶುಭ ಸುದ್ದಿ ಕಿವಿಗೆ ಬಿದ್ದಿತು. ಆತನ ಪತ್ನಿ ಮಗುವಿನ ತಾಯಿಯಾದಳು ಎನ್ನುವ ಹರ್ಷದ ಸುದ್ದಿ ಕೇಳಿ. ಪ್ರೇಸರ್‌ಪೇಟೆಗೆ ಕುಶಾಲ್ (ಸಂತೋಷ)-ನಗರ ಎಂದು ಮರುನಾಮಕರಣ ಮಾಡಿದನು. ಈ ಸ್ಮಾರಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ನೆಲೆಯಲ್ಲಿ, ಹಾಗೆಯೇ ಇದು ಹೊಂದಿರುವ ಸಂಭಾವ್ಯ ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಮೌಲ್ಯದ ಬೆಳಕಿನಲ್ಲಿ ನಾವು ಇದನ್ನು ಪ್ರಾಚ್ಯ ಸ್ಮಾರಕವಾಗಿ ಪರಿಗಣಿಸಿ ಸಂರಕ್ಷಿಸಲು ಕೋರುವುದಾಗಿ ವಕೀಲರುಗಳು ತಮ್ಮ ಮನವಿಯಲ್ಲಿ ಸಮರ್ಥಿಸಿದ್ದಾರೆ.