ಮಡಿಕೇರಿ, ಅ. ೧೪ : ಕಲುಷಿತಗೊಳ್ಳುತ್ತಿರುವ ಕಾವೇರಿ ನದಿಯ ರಕ್ಷಣೆ ಹಾಗೂ ಸ್ವಚ್ಛ ಕಾವೇರಿಗಾಗಿ ಜಾಗೃತಿ ಮೂಡಿಸುವ ಸಲುವಾಗಿ ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ಅಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್ ಆಶ್ರಯದಲ್ಲಿ ತಾ.೨೦ ರಿಂದ ನ. ೧೩ ರವರೆಗೆ ತಲಕಾವೇರಿಯಿಂದ ಪೂಂಪ್ಹಾರ್ವರೆಗೆ ಜಾಗೃತಿ ರಥಯಾತ್ರೆ ಏರ್ಪಡಿಸಿರುವದಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಕಾವೇರಿ ನದಿ ಸ್ವಚ್ಛತೆಗಾಗಿ ಕಳೆದ ೧೩ ವರ್ಷಗಳಿಂದ ಜಾಗೃತಿ ಮೂಡಿಸಿಕೊಂಡು ಬರಲಾಗುತ್ತಿದ್ದು, ಇದು ೧೩ನೇ ರಥಯಾತ್ರೆಯಾಗಿದೆ. ತಾ.೨೦ರಂದು ಸುಮಾರು ೫೦ಕ್ಕೂ ಹೆಚ್ಚು ಮಂದಿ ಸಾಧು ಸಂತರು ಸೇರಿ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ರಥಯಾತ್ರೆ ಪ್ರಾರಂಭಗೊಳ್ಳಲಿದೆ. ಜಿಲ್ಲೆಯೊಳಗಡೆ ಕಾವೇರಿ ಹರಿಯುವ ೨೩ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾವೇರಿ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರಥಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕೇಂದ್ರ ಸರಕಾರದಿಂದ ಗಂಗಾ ನದಿ ಶುದ್ಧೀಕರಣಕ್ಕಾಗಿ ಗಂಗಾ ಯೋಜನೆ ಕೈಗೊಂಡ ಹಾಗೆ ಕಾವೇರಿ ನದಿ ಶುದ್ಧೀಕರಣಕ್ಕೂ ಯೋಜನೆ ರೂಪಿಸಬೇಕು. ಕಾವೇರಿ ನದಿ ಮಡಿಕೇರಿ, ಅ. ೧೪ : ಕಲುಷಿತಗೊಳ್ಳುತ್ತಿರುವ ಕಾವೇರಿ ನದಿಯ ರಕ್ಷಣೆ ಹಾಗೂ ಸ್ವಚ್ಛ ಕಾವೇರಿಗಾಗಿ ಜಾಗೃತಿ ಮೂಡಿಸುವ ಸಲುವಾಗಿ ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ಅಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್ ಆಶ್ರಯದಲ್ಲಿ ತಾ.೨೦ ರಿಂದ ನ. ೧೩ ರವರೆಗೆ ತಲಕಾವೇರಿಯಿಂದ ಪೂಂಪ್ಹಾರ್ವರೆಗೆ ಜಾಗೃತಿ ರಥಯಾತ್ರೆ ಏರ್ಪಡಿಸಿರುವದಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಕಾವೇರಿ ನದಿ ಸ್ವಚ್ಛತೆಗಾಗಿ ಕಳೆದ ೧೩ ವರ್ಷಗಳಿಂದ ಜಾಗೃತಿ ಮೂಡಿಸಿಕೊಂಡು ಬರಲಾಗುತ್ತಿದ್ದು, ಇದು ೧೩ನೇ ರಥಯಾತ್ರೆಯಾಗಿದೆ. ತಾ.೨೦ರಂದು ಸುಮಾರು ೫೦ಕ್ಕೂ ಹೆಚ್ಚು ಮಂದಿ ಸಾಧು ಸಂತರು ಸೇರಿ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ರಥಯಾತ್ರೆ ಪ್ರಾರಂಭಗೊಳ್ಳಲಿದೆ. ಜಿಲ್ಲೆಯೊಳಗಡೆ ಕಾವೇರಿ ಹರಿಯುವ ೨೩ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾವೇರಿ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರಥಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕೇಂದ್ರ ಸರಕಾರದಿಂದ ಗಂಗಾ ನದಿ ಶುದ್ಧೀಕರಣಕ್ಕಾಗಿ ಗಂಗಾ ಯೋಜನೆ ಕೈಗೊಂಡ ಹಾಗೆ ಕಾವೇರಿ ನದಿ ಶುದ್ಧೀಕರಣಕ್ಕೂ ಯೋಜನೆ ರೂಪಿಸಬೇಕು. ಕಾವೇರಿ ನದಿ ಉತ್ಸವದಲ್ಲಿ ಪಾಲ್ಗೊಳ್ಳುವದಾಗಿದೆ. ನಂತರ ಶ್ರಿರಂಗಪಟ್ಟಣಕ್ಕೆ ತೆರಳಿ ನಿಮಿಷಾಂಬ ದೇವಾಲಯದ ಬಳಿ ಮಹಾ ಆರತಿ, ತಾ. ೨೨ ರಂದು ಕನಕಪುರ ಶಂಕರ ಆಶ್ರಮದಲ್ಲಿ ಕಾರ್ಯಕ್ರಮ ಮತ್ತು ವಾಸ್ತವ್ಯ. ನಂತರ ತಮಿಳುನಾಡಿನತ್ತ ಯಾತ್ರೆ ತಂಡ ಪಯಣ. ನ. ೧೩ ರಂದು ತಮಿಳುನಾಡು ಪೂಂಪ್ಹಾರ್ನಲ್ಲಿ ಕಾವೇರಿ ನದಿ ಬಂಗಾಳಕೊಲ್ಲಿ ಸಮುದ್ರ ಸಂಗಮದ ಜಾಗದಲ್ಲಿ ಕಾವೇರಿ ತೀರ್ಥ ಸಮರ್ಪಣೆಯೊಂದಿಗೆ ಯಾತ್ರೆ ಸಮಾಪ್ತಿಗೊಳ್ಳಲಿದೆ ಎಂದು ಚಂದ್ರಮೋಹನ್ ತಿಳಿಸಿದರು.
ಕಾವೇರಿ ತೀರ್ಥಯಾತ್ರಾ ಸಮಿತಿ ಸ್ಥಾಪಕ ಅಧ್ಯಕ್ಷ ಗಣೇಶ ಸ್ರೂಪಾನಂದ ಸ್ವಾಮೀಜಿ ಮಾತನಾಡಿ; ಕಾವೇರಿ ನದಿ ಪ್ರಾಚೀನ ನದಿಯಾಗಿದ್ದು, ಇದರ ಸ್ವಚ್ಛತೆಗೆ ಯೋಜನೆ ರೂಪಿಸುವದರೊಂದಿಗೆ ಪಾವಿತ್ರö್ಯತೆ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಸಂತರು ಸೇರಿಕೊಂಡು ಸಂಘ ಮಾಡಿಕೊಂಡು ಜಾಗೃತಿ ಯಾತ್ರೆ ಕೈಗೊಳ್ಳಲಾಗುತ್ತಿದೆ. ಕಾವೇರಿ ಉಗಮ ಸ್ಥಾನದಿಂದ ಸಮುದ್ರ ಸೇರುವಲ್ಲಿವರೆಗಿನ ಆಯ್ದ ಸ್ಥಳಗಳಲ್ಲಿ ಕಾವೇರಿಗೆ ಪೂಜೆ, ಆರತಿ ಸಲ್ಲಿಸುವ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾವೇರಿ ಕಲುಷಿತವಾಗುತ್ತಿದ್ದು, ಬಾಟಲಿ ನೀರು ಕುಡಿಯುವ ಪರಿಸ್ಥಿತಿ ಬಂದೊದಗಿದೆ. ಈ ನಿಟ್ಟಿನಲ್ಲಿ ಕಾವೇರಿ ಸಂರಕ್ಷಣೆ ಅತ್ಯಗತ್ಯವೆಂದು ಹೇಳಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಜಿಲ್ಲಾ ಸಂಚಾಲಕಿ ಪಟ್ಟಡ ರಿನಾ ಪ್ರಕಾಶ್ ಮಾತನಾಡಿ; ಗಂಗಾ ನದಿಯಂತೆ ಕಾವೇರಿ ನದಿ ಕೂಡ ಶುದ್ಧವಾಗಬೇಕು, ಬೊಗಸೆಯಲ್ಲಿ ಕಾವೇರಿ ನೀರು ಕುಡಿಯುವಂತಾಗ ಬೇಕು. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಕಾರ್ಯ ಮಾಡಲಾಗುತ್ತಿದೆ. ನದಿ ಜೋಡಣೆ ಕಾರ್ಯ ಕೂಡ ಆಗುತಲಿದ್ದು, ನದಿ ಸಂರಕ್ಷಣೆ ಕಾಯ್ದೆ ರೂಪಿಸುವ ಮೂಲಕ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಓಂಕಾರ ಸರಸ್ವತಿ ಸ್ವಾಮೀಜಿ, ನದಿ ಸ್ವಚ್ಛತಾ ಆಂದೋಲನ ಸಮಿತಿ ಕಾರ್ಯದರ್ಶಿ ಮಂಡೇಪAಡ ಬೋಸ್ ಮಂದಣ್ಣ, ಕಾವೇರಿ ಮಹಾ ಆರತಿ ಸಂಚಾಲಕಿ ವನಿತಾ ಚಂದ್ರಮೋಹನ್ ಇದ್ದರು.