ಗೋಣಿಕೊಪ್ಪ ವರದಿ, ಅ. ೧೩ : ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ವಿಮೆ ಚೆಕ್ ಅನ್ನು ಕಾರ್ಮಾಡು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಸ್ಬಿಐ ಜನರಲ್ ವಿಮೆ ವತಿಯಿಂದ ವಿತರಿಸಲಾಯಿತು.
ವಿಮೆ ಪಡೆದುಕೊಂಡಿದ್ದ ಮುತ್ತಾ ಅಪಘಾತದಿಂದ ಮೃತಪಟ್ಟ ಹಿನ್ನೆಲೆ, ಪತ್ನಿ ಮುತ್ತಿ ಎಂಬವರಿಗೆ ೧೦ ಲಕ್ಷ ರೂ. ವಿಮೆ ಹಣದ ಚೆಕ್ ವಿತರಿಸಲಾಯಿತು. ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ವಲಯ ವ್ಯವಸ್ಥಾಪಕ ಚಿಕ್ಕರಂಗಯ್ಯ ಚೆಕ್ ವಿತರಿಸಿ ಮಾತನಾಡಿ, ಗ್ರಾಮೀಣ ಬ್ಯಾಂಕ್ ವಿಮಾ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ಕುಟುಂಬಕ್ಕೆ ಆಸರೆಯಾಗಿದ್ದವರನ್ನು ಕಳೆದುಕೊಂಡಾಗ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಆರ್ಥಿಕವಾಗಿ ವಿಮೆ ಸೌಲಭ್ಯ ನೆರವಿಗೆ ಬರುತ್ತಿದೆ ಎಂದರು.
ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕ ವಿಶ್ವಾಸ್, ಕಾರ್ಮಾಡು ಶಾಖೆಯ ವ್ಯವಸ್ಥಾಪಕ ಟೋನಿ, ನಗದು ಗುಮಾಸ್ತ ಸವಿತ್, ಸಿಬ್ಬಂದಿ ಲೋಹಿತ್, ಎಸ್.ಬಿ.ಐ. ಜನರಲ್ ಇನ್ಶೂರೆನ್ಸ್ ಸಿಬ್ಬಂದಿ ಸಿ.ಕೆ. ಶರತ್ ಇದ್ದರು.