ಕೊಡ್ಲಿಪೇಟೆ, ಅ. ೧೩: ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಕಾಮಗಾರಿಗಳಿಗೆ ಸಂಬAಧಿಸಿದAತೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಜಮಾಬಂದಿ ಸಭೆಯಲ್ಲಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
೨೦೨೨-೨೩ನೇ ಸಾಲಿನ ಜಮಾ ಬಂದಿ ಸಭೆಯು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷ ಮಹಮ್ಮದ್ ಹನೀಫ್ ಅಧ್ಯಕ್ಷತೆಯಲ್ಲಿ ಜರುಗಿತು. ಸಾರ್ವಜನಿಕರ ಪರವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ.ಆರ್. ವೇದ ಕುಮಾರ್, ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಪೂರ್ತಿ ಯಾದರೂ ಸಾಮಗ್ರಿ ಹಣ ಇದು ವರೆಗೂ ಬಿಡುಗಡೆಯಾಗಿ ರುವುದಿಲ್ಲ ಎಂದು ಆಕ್ಷೇಪಿಸಿದರು.
ಸಭೆಯಲ್ಲಿದ್ದ ಗ್ರಾಮಸ್ಥರೂ ಸಹ ತಮ್ಮ ಅಸಮಾಧಾನ ಹೊರಹಾಕಿದರು. ೧೫ ನೇ ಹಣಕಾಸು ಯೋಜನೆಯಲ್ಲಿ ಕೈ ಗೊಂಡಿರುವ ಶೇಕಡ ೨೫ ರ ಕಾಮಗಾರಿಗಳನ್ನು ಪ್ರತ್ಯೇಕವಾಗಿ ಸಭೆಗೆ ಮಂಡಿಸುವAತೆ ಒತ್ತಾಯಿಸಿದರು. ವರ್ಗ ಒಂದರಲ್ಲಿ ಖರ್ಚು ಮಾಡಬೇಕಾದ ಶೇ. ೨೫ರ ಕಾಮಗಾರಿಗಳ ಮೊತ್ತಕ್ಕೆ ಮುಂಗಡವಾಗಿ ಕ್ರಿಯಾ ಯೋಜನೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಕ್ಯಾತೆ ಶಿವಕುಮಾರ್ ಅವರು ಮಾತನಾಡಿ, ಉದ್ಯೋಗ ಖಾತ್ರಿ ಕಾಮಗಾರಿಗಳು ಮುಗಿದ ತಕ್ಷಣ ಬಿಲ್ ನೋಂದಾಯಿಸ ಬೇಕು. ಕೂಲಿ ಪಾವತಿ ಹಾಗೂ ಸಾಮಾಗ್ರಿ ಹಣ ಬಿಡುಗಡೆ ತಡವಾಗುತ್ತಿದ್ದು, ಇರ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯುವಂತೆ ಆಗ್ರಹಿಸಿದರು.
ಸಭೆಯಲ್ಲಿ ೨೨-೨೩ನೇ ಸಾಲಿನ ಜಮಾ ಖರ್ಚು ವೆಚ್ಚಗಳನ್ನೊಳ ಗೊಂಡ ವರದಿಯನ್ನು ಪಂಚಾ ಯಿತಿ ನೌಕರ ರಾಜೇಶ್ ಮಂಡಿಸಿ ದರು. ಕಾರ್ಯದರ್ಶಿ ಅಶ್ವಥ್ ಅವರು ಹಿಂದಿನ ಸಾಲಿನ ಜಮಾ ಬಂದಿ ಸಭೆಯ ವರದಿ ವಾಚಿಸಿ ದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್ ತಿಳಿಸಿದರು. ಸಭೆಯಲ್ಲಿ ಪಂಚಾ ಯಿತಿ ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರಾದ ಲೀನಾ ಪರಮೇಶ್, ಪಾವನ ಗಗನ್, ರೇಣುಕಾ ಮೇದಪ್ಪ, ದಿನೇಶ್ ಕುಮಾರ್, ಮೋಕ್ಷಿತ್ ರಾಜ್, ದೊಡ್ಡಯ್ಯ, ಪಂಚಾಯತ್ ರಾಜ್ ಇಂಜಿನಿ ಯರ್ ಸಲೀಂ, ಉದ್ಯೋಗ ಖಾತ್ರಿ ಇಂಜಿನಿಯರ್ ರಾಜೇಶ್, ಪಂಚಾ ಯಿತಿ ನೌಕರರಾದ ರಂಜಿತಾ, ಸಚಿನ್, ಪ್ರಮುಖರಾದ ಲತೀಫ್, ಕರೀಂ, ಕಾಂತರಾಜ್, ಯೋಗೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.