ಮಡಿಕೇರಿ, ಅ. ೧೩: ವೀರಾಜಪೇಟೆಯ ಶ್ರೀ ಕಾವೇರಿ ಆಶ್ರಮದಲ್ಲಿ ನವರಾತ್ರಿ ಉತ್ಸವ ಮತ್ತು ಶ್ರೀ ಕಾವೇರಿ ತೀರ್ಥಪೂಜೆ ನಡೆಯಲಿದೆ.

ತಾ. ೧೫ ರಿಂದ ತಾ. ೨೩ ರವರೆಗೆ ಶ್ರೀ ದೇವಿ ಪೂಜಾ, ಸಪ್ತಶತಿ ಪಾರಾಯಣ, ಭಜನೆ, ಶ್ರೀ ಲಲಿತಾ ಸಹಸ್ರನಾಮಾರ್ಚನೆಗಳೊಂದಿಗೆ ನವರಾತ್ರಿ ಉತ್ಸವವನ್ನು ಆಚರಿಸಲಾಗುವುದು.

ಶ್ರೀ ದೇವಿ ಪೂಜೆಯನ್ನು ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ವೀರಾಜಪೇಟೆ ಗಣಪತಿ ದೇವಸ್ಥಾನದ ಗಣಪತಿ ಭಟ್ ನಿರ್ವಹಿಸುತ್ತಾರೆ. ತಾ. ೨೦ ರಂದು ಬೆಳಿಗ್ಗೆ ೭.೩೦ ಗಂಟೆಗೆ ಶ್ರೀ ಕಾವೇರಿ ತೀರ್ಥ ಪೂಜೆಯನ್ನು ನಡೆಸಲಾಗುತ್ತದೆ. ಸಭಾ ಕಾರ್ಯಕ್ರಮ ಬೆಳಿಗ್ಗೆ ೧೦ ಗಂಟೆಗೆ ಶ್ರೀ ವಿವೇಕಾನಂದ ಶರಣ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕುಂಬ್ಳೆಯ ಕಲಾರತ್ನ ಶಂನಾಡಿಗ ಅವರಿಂದ ಹರಿಕತೆ ಹಾಗೂ ಬಳಿಕ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.