ಕೋವರ್‌ಕೊಲ್ಲಿ ಇಂದ್ರೇಶ್

ಬೆಂಗಳೂರು, ಅ. ೧೩: ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ದೊಡ್ಡ ಪ್ರಮಾಣದ ದಾಳಿ ನಡೆಸಿದ್ದು ನೂರಾರು ಕೋಟಿ ರೂಪಾಯಿಗಳ ಅಕ್ರಮ ಹಣ ಮತ್ತು ಆಸ್ತಿ ಪಾಸ್ತಿ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವಾರ ತೆರಿಗೆ ವಂಚಿಸಿದ್ದ ಚಿನ್ನದ ವ್ಯಾಪಾರಿಗಳ ಮೇಲೆ ಐಟಿ ದಾಳಿ ಮಾಡಲಾಗಿತ್ತು. ದಾಳಿ ವೇಳೆ ಸಿಕ್ಕ ದಾಖಲಾತಿಗಳ ಆಧಾರದ ಮೇಲೆ ಮತ್ತೆ ಗುರುವಾರ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸರ್ಜಾಪುರ ರಸ್ತೆ ಮಲ್ಲೇಶ್ವರ ಸದಾಶಿವ ನಗರ ಸೇರಿ ಹಲವಾರು ಕಡೆ ಐಟಿ ದಾಳಿ ನಡೆಸಿದೆ. ರಾಜಸ್ತಾನದ ಚುನಾವಣೆಗೂ ಬೆಂಗಳೂರು ಐಟಿ ದಾಳಿಗೂ ಸಂಬAಧ ಇದೆ ಎಂದು ತಿಳಿದು ಬಂದಿದೆ.

ಕಾಫಿ ಮಂಡಳಿಯ ಕಾರ್ಯದರ್ಶಿ ಎಂ. ಚಂದ್ರಶೇಖರ್

(ಮೊದಲ ಪುಟದಿಂದ) ಅವರ ಮತ್ತೀಕೆರೆ ಯಲ್ಲಿರುವ ಮನೆಗೆ ಗುರುವಾರ ಬೆಳ್ಳಂ ಬೆಳಿಗ್ಗೆ ೫ ಗಂಟೆಗೆ ದಾಳಿ ನಡೆಸಿದ ಅಧಿಕಾರಿಗಳು ಸಂಜೆಯವರೆಗೂ ಸಾಕಷ್ಟು ದಾಖಲೆಗಳು, ಭೂಮಿಯ ಒಡೆತನದ ದಾಖಲೆಗಳನ್ನು ಪತ್ತೆ ಹಚ್ಚಿದ್ದಾರೆ. ಇದಲ್ಲದೆ ಅವರಿಗೆ ಸಂಬAಧಿಸಿದ ಸ್ಥಳಗಳಲ್ಲಿಯೂ ದಾಳಿ ನಡೆದಿದ್ದು ಅವರ ಆಪ್ತ ಚಿನ್ನಾಭರಣ ವ್ಯಾಪಾರಿಯೊಬ್ಬರ ಮನೆಯ ಮೇಲೂ ದಾಳಿ ನಡೆಸಲಾಗಿದೆ.

ಈ ಕುರಿತು ಆದಾಯ ತೆರಿಗೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದರು. ದಾಳಿಯ ವೇಳೆ ಅನೇಕ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು ದಾಖಲೆಗಳ ಪರಿಶೀಲನೆಯ ನಂತರವೇ ನಿಖರವಾದ ಮಾಹಿತಿ ದೊರೆಯುವುದಾಗಿ ತಿಳಿಸಿದರು.