ಮಡಿಕೇರಿ, ಅ. ೧೩: ಒಡನಾಟ, ಸಾಮರಸ್ಯದೊಂದಿಗೆ ಜೀವನದಲ್ಲಿ ಸಾಮಾಜಿಕ ಸೇವೆಯ ಮೂಲಕ ಮಾನಸಿಕ ತೃಪ್ತಿಯೊಂದಿಗೆ ಸಂಭ್ರಮಿಸುವುದನ್ನೂ ರೋಟರಿ ಸಂಸ್ಥೆಗಳು ಕಲಿಸುತ್ತವೆ ಎಂದು ರೋಟರಿ ಜಿಲ್ಲೆ ೩೧೮೧ನ ಗವರ್ನರ್ ಹೆಚ್.ಆರ್. ಕೇಶವ್ ಹೇಳಿದ್ದಾರೆ.

ಮಡಿಕೇರಿ ರೋಟರಿ ವುಡ್ಸ್ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಜಿಲ್ಲೆ ೩೧೮೧ ಗವರ್ನರ್ ಹೆಚ್.ಆರ್. ಕೇಶವ್, ಹೊಸ ರೋಟರಿ ಸಂಸ್ಥೆಗಳು ಸಾಕಷ್ಟು ಚೈತನ್ಯದಾಯಿತ್ವದೊಂದಿಗೆ ಬೇರೆ ಸಂಸ್ಥೆಗಳಿಗಿAತ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ. ೨ನೇ ವರ್ಷದಲ್ಲಿ ಸಾಗುತ್ತಿರುವ ರೋಟರಿ ವುಡ್ಸ್ ಇದನ್ನೇ ಸಾಬೀತುಪಡಿಸಿದೆ ಎಂದರು.

ರೋಟರಿ ವಲಯ ಸಹಾಯಕ ಗವರ್ನರ್ ದೇವಣಿರ ತಿಲಕ್, ಅಂಗನವಾಡಿಗಳ ಕಾಯಕಲ್ಪಕ್ಕೆ ರೋಟರಿ ಜಿಲ್ಲೆ ೩೧೮೧ ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದರು. ಅಧ್ಯಕ್ಷರು, ಕಾರ್ಯದರ್ಶಿ ಜತೆ ಎಲ್ಲಾ ರೋಟರಿ ಸದಸ್ಯರು ಕೈಜೋಡಿಸಿದರೆ ಸಾಮಾಜಿಕ ಸೇವಾ ಕಾರ್ಯಗಳು ಸುಗಮವಾಗಿ ಸಾಗುತ್ತವೆ ಎಂದು ತಿಲಕ್ ಹೇಳಿದರು.

ರೋಟರಿ ವುಡ್ಸ್ಗೆ ಇದೇ ಸಂದರ್ಭ ೭ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಈ ನಿಟ್ಟಿನಲ್ಲಿ ರಾಜ್ಯಪಾಲ ಕೇಶವ್ ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

ರೋಟರಿ ವಲಯ ಸೇನಾನಿ ಎಸ್.ಎಸ್. ಸಂಪತ್‌ಕುಮಾರ್ ವೇದಿಕೆಯಲ್ಲಿದ್ದರು. ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್‌ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಕಿಗ್ಗಾಲು ವಂದಿಸಿದರು. ರೋಟರಿಯ ನೂತನ ಸದಸ್ಯರುಗಳ ಸೇರ್ಪಡೆ, ಪ್ರತಿಜ್ಞಾ ವಿಧಿ ನಡೆಯಿತು