ಮಡಿಕೇರಿ, ಅ. ೧೩: ತವರು ಮನೆಗೆ ಹೋಗಿ ಬರುತ್ತೇನೆಂದು ತೆರಳಿದವರು ಇದುವರೆಗೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪತಿ ನೀಡಿದ ದೂರಿನನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾ. ೪ರಂದು ಅಮ್ಮುಣಿ (೨೩) ತನ್ನ ಪತಿ ಬಿ.ಡಿ. ಗಣೇಶ್ ಅವರಿಗೆ ತವರು ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದು, ಅದಾದ ನಂತರ ಮನೆಗೆ ಹಿಂತಿರುಗಿಲ್ಲ. ಕರೆ ಮಾಡಿದರೂ ಸಿಗುತ್ತಿಲ್ಲ ಎಂದು ದೂರಿನಲ್ಲಿ ಪತಿ ಉಲ್ಲೇಖಿಸಿದ್ದಾರೆ.

ನಾಪತ್ತೆಯಾದಾಕೆ ೫ ಅಡಿ ಎತ್ತರ, ಕೊಡವ, ಕನ್ನಡ, ಕುರುಬ ಭಾಷೆ ಬಲ್ಲವರಾಗಿದ್ದು, ಕಪ್ಪು ಮೈಬಣ್ಣ ಹೊಂದಿದ್ದಾರೆ. ಈಕೆ ಪತ್ತೆಯಾದಲ್ಲಿ ೦೮೨೭೨-೨೨೮೭೭೭, ೨೨೯೦೦೦ ಸಂಖ್ಯೆಗೆ ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆ ತಿಳಿಸಿದೆ.