ಮಡಿಕೇರಿ, ಅ. ೧೩ : ನಗರದ ವಿವಿಧ ವಾರ್ಡ್ಗಳಲ್ಲಿ ನಡೆಯುತ್ತಿರುವ ರಸ್ತೆಗಳ ದುರಸ್ತಿ ಕಾಮಗಾರಿಗಳನ್ನು ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್ ಪರಿಶೀಲಿಸಿದರು. ಕಾಮಗಾರಿ ಪರೀಶೀಲನೆ ಸಂದರ್ಭ ಇಂಜಿನಿಯರ್ ಮತ್ತು ಗುತ್ತಿಗೆದಾರರು ಹಾಜರಿದ್ದರು. ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸ್ಥಳೀಯರು ಗಮನಹರಿಸುವಂತೆಯೂ ಯಾವುದೇ ದೂರುಗಳಿದ್ದಲ್ಲಿ ತಕ್ಷಣ ನಗರಸಭೆಯ ಗಮನಕ್ಕೆ ತರುವಂತೆ ಸತೀಶ್ ಮನವಿ ಮಾಡಿದ್ದಾರೆ.