ವೀರಾಜಪೇಟೆ, ಅ. ೧೨: ಗ್ರಾಮೀಣ ಭಾಗದಲ್ಲಿ ನಡೆಯುವ ಎಲ್ಲಾ ಸಾರ್ವಜನಿಕ ಕೆಲಸ ಕಾಮ ಗಾರಿಗಳ ಬಗ್ಗೆ ಗ್ರಾಮದ ಚುನಾಯಿತ ಜನಪ್ರತಿನಿಧಿಗಳಿಗೆ ಮಾಹಿತಿ ಇರಬೇಕು. ಅಲ್ಲದೆ ಕಾಮಗಾರಿಗಳು ಕಳಪೆಯಾಗದಂತೆ ಉತ್ತಮ ಗುಣಮಟ್ಟ ಹೊಂದಿರುವAತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳ ಕರ್ತವ್ಯವಾಗಬೇಕು ಎಂದು ವೀರಾಜಪೇಟೆ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಜನ ಸ್ಪಂದನಾ ಕಾರ್ಯಕ್ರಮ ಕೆದ ಮುಳ್ಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಭೌಗೋಳಿಕವಾಗಿ ಬೃಹತ್ ವ್ಯಾಪ್ತಿ ಹೊಂದಿದ್ದು, ಹಲವು ಜ್ವಲಂತ ಸಮಸ್ಯೆಗಳಿವೆ. ಕುಡಿಯುವ ನೀರಿನ ಕಾಮಗಾರಿಗಳು ವಿಫಲ ವಾಗಿದೆ. ವಿದ್ಯುತ್ ಸಮಸ್ಯೆ, ಕಾಡಾನೆ ಸಮಸ್ಯೆ ಗ್ರಾಮೀಣ ಭಾಗದ ರಸ್ತೆಗಳು ಹೀಗೆ ಹಲವು ಸಮಸ್ಯೆ ಈಡೇರ ಬೇಕಿದೆ. ಇದಾಗದೆ ಬುಡಕಟ್ಟು ಜನಾಂಗ, ಶೋಷಿತ ಸಮುದಾಯ ಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದಲ್ಲಿ ಯಾವುದೇ ಪ್ರಯೋಜನವಿಲ್ಲ. ಕಾರಣ ಹಕ್ಕು ಪತ್ರ ಪಡೆದುಕೊಂಡ ವ್ಯಕ್ತಿಗಳು ಮನೆ ನಿವೇಶನ ಮಾಡುವಾಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ನಿವೇಶನ ಗುರುತಿಸಿ ನಂತರದಲ್ಲಿ ಹಕ್ಕುಪತ್ರ ವಿತರಣೆ ಮಾಡುವುದು ಒಳಿತು ಎಂದು ಶಾಸಕರು ಹೇಳಿದರು. ಕುಡಿಯುವ ನೀರು ಸಮಸ್ಯೆ ಬಗ್ಗೆ ಜಲಜೀವನ್ ಮಿಷನ್ ಅಡಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳು ವಿಫಲತೆಯನ್ನು ಕಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಕೆಲವು ಭಾಗದಲ್ಲಿ ನೀರಿನ ಮೂಲಗಳಿವೆಯಾದರು ಬಳಕೆಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ರಾಜ್ಯವೇ ಬರದಿಂದ ತತ್ತರಿಸಿದೆ. ಅಕಾಲಿಕ ಮಳೆ ಮತ್ತು ವಾತಾವರಣದ ವ್ಯತಿರಿಕ್ತ ಪರಿಣಾಮ ದಿಂದಾಗಿ ಕುಡಿಯುವ ನೀರು ಮತ್ತು ಬೆಳೆಗಳಿಗೆ ಸಮರ್ಪಕ ನೀರು ಒದಗಿಸ ಲಾಗದೆ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರಸ್ತುತವಾಗಿ ಬದುಕಲು ಚಿಂತಿಸದೆ. ಮುಂದಿನ ತಲೆಮಾರಿನವರೆಗೂ ಯೋಜನೆಗಳು ಪೂರ್ಣತೆಯನ್ನು ಪಡೆದು ಕೊಳ್ಳಬೇಕು. ಈ ನಿಟ್ಟಿನಲ್ಲಿ ಬಹು ಗ್ರಾಮ ಯೋಜನೆ ಅಡಿಯಲ್ಲಿ ಕೆದಮುಳ್ಳೂರು ಗ್ರಾಮ ವ್ಯಾಪ್ತಿಯ ಗ್ರಾಮಗಳನ್ನು ಆಯ್ಕೆಗೊಳಿಸಲಾಗಿದೆ. ಈ ಯೋಜನೆಗಳಿಗೆ ಪಿ.ಎಸ್.ಆರ್. ಸಿದ್ಧವಾಗಿ ಮುಕ್ತಾಯಗೊಂಡಿರುತ್ತದೆ. ಕೀರ್ತಿ ಹೊಳೆಗೆ ಕಿರುಅಣೆಕಟ್ಟು ನಿರ್ಮಾಣಕ್ಕೆ ಕ್ರಿಯಾಯೋಜನೆಗಳು ಇಲಾಖೆಯ ತಯಾರಿಕಾ ಹಂತ ದಲ್ಲಿದೆ ಎಂದರು. ಈ ಸಂದರ್ಭದಲ್ಲಿ ಕೆದಮುÄಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೨ ಮಂದಿಗೆ ಹಕ್ಕು ಪತ್ರ ಮತ್ತು ೩೦ ಮಂದಿಗೆ ವಿವಿಧ ಪಿಂಚಿಣಿ ಪ್ರಮಾಣ ಪತ್ರವನ್ನು ವಿತರಣೆ ಮಾಡಿದರು. ಸಭೆಯಲ್ಲಿ ಗ್ರಾಮಸ್ಥರಿಂದ ವಿವಿಧ ಕುಂದು ಕೊರತೆಗಳಿಗೆÀ ಸಂಬAಧಿಸಿದAತೆ ಮನವಿ ಪತ್ರವನ್ನು ಸ್ವೀಕರಿಸಿದರು. ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಸರ್ವರೂ ಸಹಕರಿಸುವಂತೆ ಮನವಿ ಮಾಡಿದರು.

ಧನ ಸಹಾಯ: ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಬಾರಿಕಾಡ್ ಪೈಸಾರಿಯ ನಿವಾಸಿ (ಅಂದ ಸಹೋದರರಾದ) ಜಿತೇಂದ್ರ ಮತ್ತು ಕೃಷ್ಣೇಂದ್ರ ಎಂಬುವವರ ಮನೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ. ವಿದ್ಯುತ್ ಇಲಾಖೆಯು ಮನೆಗೆ ವಿದ್ಯುತ್ ಸಂಪರ್ಕ ನೀಡಲು ಕಂಬ ಅಳವಡಿಸಲು ಮುಂಗಡ ಹಣ ನೀಡುವಂತೆ ತಿಳಿಸಿತ್ತು. ಸಹೋದರರು ಮುಂಗಡ ಹಣ ನೀಡಲು ಶಕ್ತರಾಗಿ ರುವುದಿಲ್ಲಾ. ಇಲಾಖೆಯ ವತಿಯಿಂದ ಉಚಿತವಾಗಿ ವಿದ್ಯುತ್ ಕಂಬ ಅಳವಡಿಸುವಂತೆ ಸದಸ್ಯರಾದ ಕೆ.ಎಂ. ರಾಮಯ್ಯ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರು ಕಂಬ ಅಳವಡಿಸಲು ಮುಂಗಡ ಹಣ ರೂ. ಏಳು ಸಾವಿರವನ್ನು ತಾವೇ ಕೊಡುವುದಾಗಿ ಭರವಸೆ ನೀಡಿದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ಸಂಖ್ಯೆ ೩೬೬/೧ಪಿ೧ ರಲ್ಲಿ ೨೦೧೧ ರಲ್ಲಿ ಒಟ್ಟು ೬೬ ಮನೆಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿತ್ತು. ಅದರೆ ಮೂಲಭೂತ ಸೌಕರ್ಯ ಒದಗಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಮನೆಗಳ ನಿರ್ಮಾಣ ನೆನಗುದ್ದಿಗೆ ಬಿದ್ದಿದೆ. ೩೭೦/೧ ರಲ್ಲಿ ಸುಮಾರು ೧೨೯ ನಿವೇಶನ ಗುರುತು ಮಾಡಲಾಗಿದ್ದು ಕೆಲವು ಮನೆಗಳು ನಿರ್ಮಾಣ ಹಂತ ದಲ್ಲಿದೆ ಕೆಲವು ಅಪೂರ್ಣಗೊಂಡಿದೆ. ಇಲಾಖೆಯು ನಿರ್ಲಕ್ಷö್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಗಿರಿಜನ ಸಮಗ್ರ ಕಲ್ಯಾಣ ಇಲಾಖೆಯ ಅಧಿಕಾರಿ ಈ ಹಿಂದೆ ತಲಾ ಒಂದು ಮನೆ ನಿರ್ಮಾಣಕ್ಕೆ ೬೦ ಸಾವಿರ ಹಣ ಅನುದಾನ ನೀಡಲಾಗಿತ್ತು. ಕಚ್ಚ ವಸ್ತುಗಳ ಬೆಲೆ ಏರಿಕೆ ಮತ್ತು ಪ್ರಕೃತಿ ವಿಕೋಪದಿಂದಾಗಿ ಮನೆ ನಿರ್ಮಾಣ ದಲ್ಲಿ ವಿಳಂಬವಾಗಿದೆ. ನಂತರದಲ್ಲಿ ಐದು ಲಕ್ಷ ರೂ. ಮನೆ ನಿರ್ಮಾಣಕ್ಕೆ ನಿಗದಿಗೊಳಿಸಲಾಗಿತ್ತು. ಆದರೆ ಜಿ.ಎಸ್.ಟಿ.ಯಿಂದಾಗಿ ಮನೆ ನಿರ್ಮಾಣ ಸಂಸ್ಥೆಗಳು ಹೆಚ್ಚುವರಿ ಹಣದ ಬೇಡಿಕೆಯನ್ನು ಮಾಡಿರುತ್ತಾರೆ ಹೀಗೆ ಮನೆ ನಿರ್ಮಾಣದಲ್ಲಿ ತಡವಾಗುತ್ತಿದೆ ಎಂದು ಉತ್ತರ ನೀಡಿದರು.

ಕಾಡಾನೆಗಳ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮಾತನಾಡಿದ ವಲಯ ಅರಣ್ಯ ಇಲಾಖೆಯ ಆಧಿಕಾರಿಗಳಾದ ಕೆ.ಎಂ. ದೇವಯ್ಯ ಅವರು ಈ ಭಾಗದಲ್ಲಿ ಸುಮಾರು ೫೦ ರಿಂದ ೬೦ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು ಕಾಡಾನೆ ಕಾರ್ಯಾಚರಣೆಯ ಮೂಲಕ ಸುಮಾರು ೩೫ ಕಾಡಾನೆ ಗಳನ್ನು ಕಾಡಿಗೆ ಅಟ್ಟುವಲ್ಲಿ ಸಫಲ ರಾಗಿದ್ದೇವೆ. ಖಾಸಗಿ ಸಂಸ್ಥೆಯೊAದು ಸೋಲಾರ್ ಲೈಟ್ ನೀಡುವುದಾಗಿ ಹೇಳಿ ಗ್ರಾಮಸ್ಥರು ಪಂಚಾಯಿತಿಗೆ ಆರ್ಜಿ ಸಲ್ಲಿಸಿದಲ್ಲಿ ಬೇಡಿಕೆಯಂತೆ ಇಲಾಖೆಯ ವತಿಯಿಂದ ಸೋಲಾರ್ ಲೈಟ್ ಒದಗಿಸಲಾಗುತ್ತದೆ ಎಂದು ಹೇಳಿದರು. ಜನ ಸ್ಪಂದನಾ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾ. ಆರೋಗ್ಯ ಇಲಾಖೆ, ಲೋಕೋಪ ಯೋಗಿ ಇಲಾಖೆ, ಚೆಸ್ಕಾಂ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ ಕಂದಾಯ ಇಲಾಖೆ ಮತ್ತು ಇತರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾಳೇಟಿರ ಜೆಫ್ರಿ ಉತ್ತಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಎA. ಪರಮೇಶ್ವರ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ತಾಲೂಕು ದಂಢಾಧಿಕಾರಿಗಳಾದ ಹೆಚ್.ಎನ್. ರಾಮಚಂದ್ರ, ತಾಲೂಕು ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಅಪ್ಪಣ್ಣ, ತಾಲೂಕು ಆರೋಗ್ಯಾ ಧಿಕಾರಿಗಳಾದ ಡಾ. ಯತಿರಾಜ್, ನೋಡಲ್ ಅಧಿಕಾರಿಗಳಾದ ರಾಕೇಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಸದಸ್ಯರಾದ ಎಂ.ಎA. ಇಸ್ಮಾಯಿಲ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಿ.ಡಿ.ಓ. ಪ್ರಮೋದ್ ಅವರು ವಂದಿಸಿದರು. ಕೆದಮುಳ್ಳೂರು ಗ್ರಾಮದ ಕ್ರಿಶ್ಚನ್ ಕಾಲೋನಿಯಿಂದ ಕೆದಮುಳ್ಳೂರು ಗ್ರಾಮದವರೆಗಿನ ಸುಮಾರು ಐದು ಕಿ.ಮೀ. ರಸ್ತೆ ಶಿಥಿಲಗೊಂಡು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿ ಮತ್ತು ಒತ್ತಡದ ಮೇರೆಗೆ ಸುಮಾರು ಎರಡು ಕಿ.ಮೀ. ರಸ್ತೆಗೆ ೧ ಕೋಟಿ ೨೦ ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶಾಸಕರು ಭೂಮಿಪೂಜೆ ನೆರೆವೇರಿಸಿದರು. ಲೋಕೋಪ ಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಲಿಂಗರಾಜ್, ಗುತ್ತಿಗೆದಾರ ಸುರೇಶ್, ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮತ್ತು ಗ್ರಾಮಸ್ಥರು ಹಾಜರಿದ್ದರು.