ಮಡಿಕೇರಿ, ಅ. ೧೨: ಕಾವೇರಿ ನದಿ ನೀರು ಹಂಚಿಕೆ ಸಂಬAಧ ಕಾವೇರಿ ನೀರು ಸಂಕಷ್ಟ ಸೂತ್ರ ಮತ್ತು ರಾಷ್ಟಿçÃಯ ವೈಜ್ಞಾನಿಕ ಜಲ ನೀತಿ ರೂಪಿಸುವಂತೆ ಆಗ್ರಹಿಸಿ ಮಂಡ್ಯದ ಕದಂಬಸೈನ್ಯ ಕನ್ನಡ ಸಂಘಟನೆ ಕಾವೇರಿ ಯಾತ್ರೆ ಕೈಗೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಸರಕಾರ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸುತ್ತಿದೆ. ಸರಕಾರ, ವಿಪಕ್ಷದವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರು ಜಲಾನಯನ ಪ್ರದೇಶದಲ್ಲಿ ಸಂಚರಿಸಿ ಸುಪ್ರಿಂ ಕೋರ್ಟ್ಗೆ ವಾಸ್ತವ ಚಿತ್ರಣವನ್ನು ಮಂಡಿಸುವಲ್ಲಿ ವಿಫಲರಾಗಿದ್ದಾರೆ. ನೀರು ಬಿಡುವಂತೆ ಏಕಾಏಕಿ ಆದೇಶ ಮಾಡುವದೇ ಪ್ರಾಧಿಕಾರದ ಕೆಲಸವಾಗಿದೆ. ಕನ್ನಡಿಗರು ಎಷ್ಟೇ ಹೋರಾಟ ಮಾಡಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಕಾವೇರಿ ನೀರು ಸಂಕಷ್ಟ ಸೂತ್ರ ಮತ್ತು ರಾಷ್ಟಿçÃಯ ವೈಜ್ಞಾನಿಕ ನೀತಿ ರೂಪಿಸಲು ಮಧ್ಯಸ್ಥಿಕೆ ವಹಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿದರು. ವರ್ಷಂಪ್ರತಿ ಸಂಘಟನೆ ವತಿಯಿಂದ ತಲಕಾವೇರಿಗೆ ಆಗಮಿಸಿ ತಾಯಿಗೆ ನಮಿಸಿ ತೀರ್ಥ ಕೊಂಡೊಯ್ದು ಸಾರ್ವಜನಿಕರಿಗೆ ಹಂಚಲಾಗುತ್ತಿದೆ. ಅದೇ ರೀತಿ ಈ ಬಾರಿ ಕೂಡ ಕಾವೇರಿ ಉಳಿಸಿ ಎಂಬ ಧ್ಯೇಯದೊಂದಿಗೆ ಕಾವೇರಿ ಯಾತ್ರೆ ಹಮ್ಮಿಕೊಂಡಿದ್ದು, ಐದು ಜಿಲ್ಲೆಗಳ ಪ್ರಮುಖರು ಪಾಲ್ಗೊಂಡಿರುವದಾಗಿ ತಿಳಿಸಿದರು.
ಸಂಘಟನೆಯ ಉಪಾಧ್ಯಕ್ಷ ದೇವನಹಳ್ಳಿ ದೇವರಾಜ್ ಮಾತನಾಡಿ, ಸರಕಾರ ರಾಜ್ಯದ ರೈತರ ಹಿತ ಕಾಪಾಡದಿರುವದು ದುರಂತ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ರಾಮನಗರ ಜಿಲ್ಲಾಧ್ಯಕ್ಷ ಶಿವಕುಮಾರ ಪಟ್ಲಿ, ಕಾರ್ಯದರ್ಶಿ ವೆಂಕಟಪ್ಪ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಜೋಸೆಫ್ ರಾಮು ಇದ್ದರು.