ಟಿ ಹೆಚ್. ಜೆ. ರಾಕೇಶ್

ಮಡಿಕೇರಿ, ಅ. ೧೨ : ಅವಘಡಗಳು ನಡೆದ ಸಂದರ್ಭ ರಕ್ಷಣೆಗೆ ಧಾವಿಸುವ ಅಗ್ನಿಶಾಮಕ ದಳಕ್ಕೆ ಸೇರಿದ ವಾಹನಗಳ ಆರ್.ಸಿ. ರದ್ದಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆಗಿಳಿಯುವಂತಿಲ್ಲ. ಇದರಿಂದ ಸಮಸ್ಯೆ ಎದುರಾಗುವ ಕಳವಳ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಸೇರಿದ ೧೦ ವಾಹನಗಳಿದ್ದು, ಈ ಪೈಕಿ ೫ ವಾಹನಗಳು ೧೫ ವರ್ಷ ಮೇಲ್ಪಟ್ಟಿವೆ ಎಂಬ ಕಾರಣಕ್ಕೆ ನೋಂದಣಿ ಪ್ರಮಾಣಪತ್ರ (ಆರ್.ಸಿ) ರದ್ದುಗೊಳಿಸ ಲಾಗಿದೆ. ಇದರಿಂದ ಇಲಾಖೆ ಪೇಚಿಗೆ ಸಿಲುಕಿದ್ದು, ಸಂಕಷ್ಟದ ಸಮಯದಲ್ಲಿ ಕ್ರಮಕೈಗೊಳ್ಳುವುದು ಹೇಗೆ? ಎಂಬ ಪ್ರಶ್ನೆ ಉದ್ಭವಿಸಿದೆ.

ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರಕಾರ ೧೫ ವರ್ಷ ಮೇಲ್ಪಟ್ಟ ಸರಕಾರಿ ವಾಹನಗಳನ್ನು ಅನುಪಯುಕ್ತ ಎಂದು ಪರಿಗಣಿಸಿ ಪ್ರಥಮ ಹಂತದಲ್ಲಿ ಅವುಗಳ ಆರ್.ಸಿ. ರದ್ದಿಗೆ ಆದೇಶಿಸಿತ್ತು. ಅದರಂತೆ ಜಿಲ್ಲೆಯಲ್ಲಿ ೯೫ ಸರಕಾರಿ ವಾಹನಗಳನ್ನು ಪಟ್ಟಿ ಮಾಡಲಾಗಿತ್ತು. ಈ ಹಿನ್ನೆಲೆ ಅಗ್ನಿಶಾಮಕ ದಳಕ್ಕೆ ಸೇರಿದ ೫ ವಾಹನಗಳ ನೋಂದಣಿ ಪ್ರಮಾಣ ಪತ್ರವನ್ನು ಆರ್.ಟಿ.ಓ. ರದ್ದು ಮಾಡಿದೆ.

೧೦ ವಾಹನಗಳ ಪೈಕಿ ಮಡಿಕೇರಿಯಲ್ಲಿ ೪ ಇದ್ದು ಅವುಗಳಲ್ಲಿ ೨, ಕುಶಾಲನಗರದ ೩ರಲ್ಲಿ ೨, ಕುಶಾಲನಗರದ ೨ ರಲ್ಲಿ ೧ ವಾಹನದ ಆರ್.ಸಿ. ಈಗಾಗಲೇ ರದ್ದಾಗಿದೆ. ಸೋಮವಾರಪೇಟೆಯಲ್ಲಿರುವ ೧ ವಾಹನ ಮುಂದಿನ ೨ ವರ್ಷ ಮಾನ್ಯತೆ ಹೊಂದಿದೆ.

ಉಳಿದ ೫ ವಾಹನಗಳು ೧೫ ವರ್ಷ ಮೀರದ ಹಿನ್ನೆಲೆ ಅವುಗಳ ಬಳಕೆಗೆ ಯೋಗ್ಯವಾಗಿವೆ. ರದ್ದಾಗಿರುವ ವಾಹನಗಳು ತಾಂತ್ರಿಕವಾಗಿ ಸದೃಢವಾಗಿದ್ದು, ಯಾವುದೇ ಸಮಸ್ಯೆ ಇಲ್ಲ. ಆದರೆ, ಕೇಂದ್ರ ಸರಕಾರದ ನಿಯ ಮದಡಿ ಅಮಾನ್ಯ ಗೊಳಿಸಲಾಗಿದೆ.

ಆಪತ್ಭಾಂಧವ ವಾಹನಗಳು

ಅಗ್ನಿಶಾಮಕ ದಳ ಅಗ್ನಿ ಅವಘಡ, ಕಟ್ಟಡ ದುರಂತ ಸಂದರ್ಭ ನೆರವಿಗೆ ಧಾವಿಸುತ್ತದೆ. ಕೊಡಗು ಜಿಲ್ಲೆ ಅರಣ್ಯ ಪ್ರದೇಶದಿಂದ ಸುತ್ತುವರೆದ ಹಿನ್ನೆಲೆ ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಇವೆಲ್ಲ ಸಮಯ ದಲ್ಲಿ ಅಗ್ನಿಶಾಮಕ ದಳದ ವಾಹನಗಳು ಆಪತ್ಭಾಂಧವನAತೆ ಕಾರ್ಯ ನಿರ್ವಹಿಸುತ್ತವೆ. ವಾಹನದಲ್ಲಿರುವ ಜಲಫಿರಂಗಿ ಮೂಲಕ ಅಗ್ನಿಯನ್ನು ನಂದಿಸ ಬಹುದು. ಇತರ ಸಲಕರಣೆ ಗಳನ್ನು ಬಳಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಆದರೆ, ವಾಹನವೇ ಇಲ್ಲದಿದ್ದರೆ ರಕ್ಷಣಾ ಕಾರ್ಯಕ್ಕೆ ಧಾವಿಸುವುದು ಕಷ್ಟದಾಯಕವಾಗಲಿದೆ. ಅಲ್ಲದೆ, ದೊಡ್ಡ ಮಟ್ಟದ ಅನಾಹುತಗಳು ಸಂಭವಿಸಿ ದರೆ ಇರುವ ವಾಹನ ಗಳನ್ನು ಬಳಸಿಕೊಂಡು ಕೆಲಸ ಮಾಡುವು ದರಿಂದ ಮತ್ತಷ್ಟು ಪ್ರಮಾಣದ ನಷ್ಟಗಳೂ ಸಂಭವಿಸ ಬಹುದು.

ಕೊಡಗು ಅಲ್ಲದೆ ಬೇರೆ ಜಿಲ್ಲೆಗಳಲ್ಲಿ ದುರ್ಘಟನೆಗಳು ನಡೆದ ಸಂದರ್ಭ ಜಿಲ್ಲೆಯ ವಾಹನಗಳು ಹಾಗೂ ಸಿಬ್ಬಂದಿಗಳು ರಕ್ಷಣಾ ಕಾರ್ಯಕ್ಕೆ ತೆರಳುತ್ತಾರೆ. ಇದೀಗ ವಾಹನವಿಲ್ಲದಿರುವುದರಿಂದ ಇದಕ್ಕೂ ಸಮಸ್ಯೆ ಉಂಟಾಗಿದೆ.

(ಮೊದಲ ಪುಟದಿಂದ)

ಬಳಕೆಗೆ ಅವಕಾಶ ನೀಡುವಂತೆ ಮನವಿ

ಹೊಸದಾಗಿ ವಾಹನಗಳು ಬರುವವರೆಗೂ ಹಳೆಯ ವಾಹನಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವಂತೆ ರಾಜ್ಯ ಸರಕಾರದ ಮೂಲಕ ಅಗ್ನಿಶಾಮಕ ದಳ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಹೊಸ ವಾಹನ ಖರೀದಿಸಿದರೂ ನವೀಕರಣ ಕಾರ್ಯಕ್ಕೆ ಹೆಚ್ಚಿನ ಸಮಯ ತಗಲುತ್ತದೆ. ವಿಶೇಷ ವಾಹನದಡಿ ಈ ವಾಹನಗಳು ಬರುವ ಹಿನ್ನೆಲೆ ‘ಬಾಡಿ ಬಿಲ್ಡ್’ಗೆ ಕೆಲವೊಂದು ಮಾರ್ಗಸೂಚಿ ಇದೆ. ಇದನ್ನು ಪಾಲಿಸಬೇಕಾಗಿರುವ ಕಾರಣಕ್ಕಾಗಿ ಹಳೆ ವಾಹನಗಳ ಬಳಕೆಗೆ ಅವಕಾಶ ನೀಡಬೇಕಾಗಿದೆ.

ಕಳವಳ ಸೃಷ್ಟಿ : ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಅರಣ್ಯ ಪ್ರದೇಶವಿರುವ ಕಾರಣಕ್ಕಾಗಿ ಅಗ್ನಿಶಾಮಕ ದಳದ ವಾಹನಗಳು ಅವಶ್ಯಕ. ಜಿಲ್ಲೆಗೆ ಮತ್ತಷ್ಟು ವಾಹನಗಳು ಬೇಕಾಗಿವೆ. ಈ ಮಧ್ಯೆ ಇರುವ ವಾಹನಗಳ ಆರ್.ಸಿ. ಅಮಾನ್ಯದಿಂದ ಕಳವಳ ಸೃಷ್ಟಿಯಾಗಿದೆ. ಅನಾಹುತಗಳು ಉಂಟಾದರೆ ತ್ವರಿತ ಕಾರ್ಯಾ ಚರಣೆಗೆ ಹಿನ್ನಡೆಯಾಗಲಿದೆ. ಕಡಿಮೆ ವಾಹನವಿರುವ ಕಾರಣ ಸಿಬ್ಬಂದಿಗಳು ತೆರಳಲು ತಡವಾಗಬಹುದು. ಅಲ್ಲದೆ ಹೆಚ್ಚುವರಿಯಾಗಿ ನೀರನ್ನು ಸಂಗ್ರಹಿಸಿಕೊಳ್ಳುವುದು ಅಸಾಧ್ಯವಾಗಲಿದೆ. ಇರುವ ವಾಹನವೇ ಮತ್ತೇ ಮತ್ತೇ ತೆರಳಿ ನೀರು ತುಂಬಿಸಿಕೊAಡು ಬರಬೇಕು.

ಜಿಲ್ಲೆಯಲ್ಲಿ ಮಳೆ ಕೊರತೆ ಕಾರಣ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಆತಂಕ ಇದೆ. ಇವೆಲ್ಲ ಕಾರಣ ಪರಿಗಣಿಸಿ ವಾಹನಗಳ ಬಳಕೆಗೆ ಅವಕಾಶ ನೀಡುವ ಆಗ್ರಹಗಳು ಕೇಳಿ ಬಂದಿವೆ.