ಸೋಮವಾರಪೇಟೆ,ಅ. ೧೩: ಪಟ್ಟಣದ ಮಡಿಕೇರಿ ರಸ್ತೆಯ ಜೈ ಭಾರತ್ ಯುವಕ ಸಂಘದಿAದ ಪ್ರತಿಷ್ಠಾಪಿಸಲಾಗಿರುವ ೨೫ನೇ ವರ್ಷದ ಗೌರಿ-ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಕಾರ್ಯಕ್ರಮ ತಾ. ೧೫ರಂದು (ನಾಳೆ) ಅದ್ದೂರಿಯಾಗಿ ನೆರವೇರಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ತಾ. ೧೫ರಂದು ಬೆಳಿಗ್ಗೆ ೮ ಗಂಟೆಯಿAದ ಗಣಪತಿ ಹೋಮ ನಡೆಯಲಿದ್ದು, ನಂತರ ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ ಜರುಗಲಿದೆ.

ಸಂಜೆ ೬ ಗಂಟೆಯಿAದ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದ್ದು, ವಿಶೇಷವಾಗಿ ‘ಗಣಪತಿಯಿಂದ ನರಹಂತಕ ಹಾಗೂ ದೈವಾಂತಕನ ಸಂಹಾರ’ ಎಂಬ ಕಥಾ ಸಾರಾಂಶವುಳ್ಳ ಮೂರ್ತಿಗಳ ಚಲನವಲನದ ಪ್ರದರ್ಶನ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.