ವೀರಾಜಪೇಟೆ, ಅ. ೧೨: ಅತ್ತಿ ಬೆಲೆ ಪಟಾಕಿ ದುರಂತದ ಬಳಿಕ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ ಮುಂದಿನ ದಿನದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮವಾಗಿ ಅನಧಿಕೃತ ಹಾನಿಕಾರಕ ಪಟಾಕಿ ಮಾರಾಟ ನಿಷೇಧಗೊಳಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನಧಿಕೃತವಾಗಿ ಮಾರಾಟ ಮಾಡು ತ್ತಿರುವ ಹಾನಿಕಾರಕ ಪಟಾಕಿಯನ್ನು ನಿಷೇಧಿಸುವ ಸಲುವಾಗಿ ಈ ಹಿನ್ನೆಲೆ ಯಲ್ಲಿ ಮಾರಾಟಗಾರರ ದಾಸ್ತಾನು ಕೊಠಡಿಯನ್ನು ಪರಿಶೀಲಿಸಿ ರಾಜ್ಯದ ಉನ್ನತ ಅಧಿಕಾರಿಗಳಿಗೆ ವಿವರ ನೀಡುವ ಸಲುವಾಗಿ ಸರಕಾರದ ಹಿರಿಯ ಅಧಿಕಾರಿಗಳ ಆದೇಶದನ್ವಯ ವೀರಾಜ ಪೇಟೆ ತಾಲೂಕು ತಹಶೀಲ್ದಾರ್ ಎಚ್.ಎನ್ ರಾಮಚಂದ್ರ ಅವರ ನೇತೃತ್ವದಲ್ಲಿ ವೀರಾಜಪೇಟೆಯಲ್ಲಿ ಈ ಹಿಂದೆ ಪಟಾಕಿ ಮಾರುತ್ತಿದ್ದ ಮಳಿಗೆ ಗಳಿಗೆ ದಿಢೀರ್ ದಾಳಿ ನಡೆಸಿದರು.

ಪಟಾಕಿ ಮಾರಾಟ ಮಳಿಗೆಗೆ ಸಂಬAಧಿಸಿದAತೆ ದಾಳಿ ನಡೆಸಿದ ವೇಳೆ ಅಧಿಕಾರಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ಹಾಗೂ ಛಾಯಾಚಿತ್ರ ಗಳೊಂದಿಗೆ ಸರಕಾರಕ್ಕೆ ವರದಿ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ವೀರಾ ಜಪೇಟೆ ತಹಶೀಲ್ದಾರ್ ಎಚ್.ಎನ್ ರಾಮಚಂದ್ರ ಹಾಗೂ ವೀರಾಜಪೇಟೆ ಪೊಲೀಸರ ತಂಡ, ಅಗ್ನಿಶಾಮಕ ದಳ ಹಾಗೂ ಕಂದಾಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳ ತಂಡ ವೀರಾಜಪೇಟೆಯಲ್ಲಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಅಂಗಡಿಗಳಲ್ಲಿ ಪಟಾಕಿಗಳ ಮಾರಾಟ ಮಾಡುತ್ತಿರುವುದು ಪತ್ತೆಯಾಗಲಿಲ್ಲ.

ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟವನ್ನು ನಿಷೇಧ ಮಾಡಲಾ ಗಿದೆ. ಮುಂದೆ ವ್ಯಾಪಾರದ ಸಂದರ್ಭ ಸರಕಾರದ ನಿಯಮಗಳನ್ನು ಪಾಲಿಸು ವಂತೆ ಸಲಹೆ ಸೂಚನೆಗಳನ್ನು ನೀಡಿ ಎಚ್ಚರಿಕೆ ನೀಡಿದರು.

ಇದೇ ಸಂದರ್ಭ ಪಟಾಕಿ ದುರಂ ತದ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭ ವೀರಾಜಪೇಟೆ ತಾಲೂಕು ತಹಶೀಲ್ದಾರ್, ರಾಮ ಚಂದ್ರ, ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕುಮಾರ್, ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ, ವೀರಾಜಪೇಟೆ ಠಾಣಾಧಿಕಾರಿ ಮಂಜುನಾಥ್, ಕಂದಾಯ ಇಲಾಖೆಯ ಪರಿವೀಕ್ಷಕ ಹರೀಶ್, ಹಾಗೂ ಅಗ್ನಿಶಾಮಕ ದಳದವರು ಪಾಲ್ಗೊಂಡಿದ್ದರು.