ಮಡಿಕೇರಿ, ಅ. ೧೨ : ವಿಶ್ವ ವಿಖ್ಯಾತ ಮೈಸೂರು ದಸರಾ ಸಿನಿಮೋತ್ಸವದಲ್ಲಿ ಕೊಡಗಿನ ನಿರ್ದೇಶಕರು ಹಾಗೂ ಕಲಾವಿದರ ನಾಲ್ಕು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದೇ ಮೊದಲ ಬಾರಿಗೆ ಕೊಡಗಿನ ನಿರ್ದೇಶಕರುಗಳ ಇಷ್ಟು ಸಂಖ್ಯೆಯ ಚಿತ್ರಗಳು ಆಯ್ಕೆಯಾಗಿರುವುದು.

ಕೂರ್ಗ್ ಕಾಫಿವುಡ್ ಮೂವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ “ಅಂತರ್ಮುಖ” ಕನ್ನಡ ಚಿತ್ರ, ಸ್ವಸ್ತಿಕ್ ಎಂಟರ್‌ಟೈನ್‌ಮೆAಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದÀ “ಪೊಮ್ಮಾಲೆ ಕೊಡಗ್” ಕೊಡವ ಚಿತ್ರ, ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ದೇಶನದ “ರಂಗಪ್ರವೇಶ” ಕನ್ನಡ ಚಿತ್ರ ಮತ್ತು ಸಿಂಚನ ಪೊನ್ನವ್ವ ನಿರ್ದೇಶನದ “ಕೌಡಿಕಳಿ” ಕೊಡವ ಚಿತ್ರ ದಸರಾ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ.

ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಗೆ ಒತ್ತು ನೀಡಿರುವ ನಾಲ್ಕು ಚಿತ್ರಗಳು ದಸರಾ ಉತ್ಸವದ ಸಂದರ್ಭ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ತಾ.೧೬ ರಂದು ಬೆಳಿಗ್ಗೆ ೧೦.೧೫ಕ್ಕೆೆ “ಅಂತರ್ಮುಖ”, ತಾ.೧೯ ರಂದು ಮಧ್ಯಾಹ್ನ ೧.೧೫ಕ್ಕೆ “ರಂಗ ಪ್ರವೇಶ”, ಸಂಜೆ ೪.೧೫ಕ್ಕೆ “ಪೊಮ್ಮಾಲೆ ಕೊಡಗ್” ಚಲನಚಿತ್ರ ಇನಾಕ್ಸ್ ಚಿತ್ರಮಂದಿರದಲ್ಲಿ ಮತ್ತು ತಾ.೧೯ ರಂದು ಬೆಳಿಗ್ಗೆ ೧೦ ಗಂಟೆಗೆ ಡಿಆರ್‌ಸಿ ಚಿತ್ರಮಂದಿರದಲ್ಲಿ “ಕೌಡಿಕಳಿ” ಚಲನಚಿತ್ರ ಪ್ರದರ್ಶನಗೊಳ್ಳಲಿದೆ.