ಮಡಿಕೇರಿ, ಅ. ೧೨: ಮಡಿಕೇರಿಯ ಬೆಳ್ಳಿಯಪ್ಪ ಸ್ಮಾರಕ ಸಭಾಭವನದಲ್ಲಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಮಾಜದ ಜಿಲ್ಲಾ ಕುಂಬಾರ ಕುಲಾಲ ಸಂಘಕ್ಕೆ ನೂತನ ಕಾರ್ಯಕಾರಿ ಮಂಡ ಳಿಯನ್ನು ಆಯ್ಕೆ ಮಾಡಲಾಯಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎಂ.ಡಿ. ನಾಣಯ್ಯ ಅವರು ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷ ರಾದ ಮುತ್ತಮ್ಮ ಕೋಟಿ ಇವರು ಹಲವಾರು ವರ್ಷ ಸಂಘಕ್ಕೆ ಪ್ರಾಮಾ ಣಿಕವಾಗಿ ಸೇವೆ ಮಾಡಿದ್ದನ್ನು ಸ್ಮರಿ ಸುತ್ತಾ ಒಂದು ಸಮಾಜದ ಸಂಘ ಬಲಿಷ್ಠವಾದಾಗ ಆ ಸಮಾಜವು ಅಭಿ ವೃದ್ಧಿ ಹೊಂದುತ್ತದೆ ಎಲ್ಲರೂ ಜೊತೆ ಗೂಡಿ ನಡೆದಾಗ ಸಮಾಜದ ಏಳಿ ಗೆಯೂ ಇನ್ನಷ್ಟು ಬೆಳಗುತ್ತದೆ ಎಂದರು.

ನAತರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ೭೫% ಕ್ಕಿಂತ ಹೆಚ್ಚು ಅಂಕ ತೆಗೆದ ಮಕ್ಕಳಿಗೆ ಸಹಾಯಧನ ವಿತರಿಸಲಾಯಿತು ನಂತರ ಕುಲ ಬಾಂಧವರಿಗೆ ನೆರವಾದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ಗೌರವ ಸಲಹೆಗಾರರಾದ ಉದ್ಯಮಿ ದಾಮೋದರ್ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದಾಮೋದರ್ ಅವರು ಎಲ್ಲರೂ ಒಮ್ಮನಸಿನಿಂದ ಒಗ್ಗೂಡಿದಾಗ ಸಮಾಜ ಬೆಳೆಯಲು ಸಾಧ್ಯ ಆ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯವನ್ನು ಇನ್ನಿತರ ವ್ಯವಸ್ಥೆಗಳನ್ನು ಪೂರೈಸಲು ಅನುಕೂಲವಾಗುತ್ತದೆ ಎಂದರು.

ಕೊಡಗು ಜಿಲ್ಲಾ, ಕುಲಾಲ ಕುಂಬಾರ ಯುವ ಘಟಕದ ಇನ್ನೊಬ್ಬರು ಗೌರವ ಸಲಹೆಗಾರರಾದ ಕುಶಾಲಪ್ಪ ಕುಶಾಲನಗರ ಅವರು ಮಾತನಾಡಿ ಸಂಘದ ವತಿಯಿಂದ ನಡೆಯುವ ವಾರ್ಷಿಕ ಮಹಾಸಭೆ ಕ್ರೀಡಾಕೂಟ ಮತ್ತು ಇತರ ಮನೋ ರಂಜನೆ ಕಾರ್ಯಕ್ರಮಗಳಲ್ಲಿ ಭಾಗ ವಹಿಸುವಂತೆಯೂ ಕರೆ ನೀಡಿದರು. ಸದಸ್ಯ ದಿನೇಶ್ ಐಗೂರು ಅವರು ಮಾತನಾಡಿ ಸಂಘದ ಬೆಳವಣಿಗೆಗೆ ಯುವಕರ ಪಾತ್ರ ಮಹತ್ತರವಾದದ್ದು. ಅದಕ್ಕಾಗಿ ಯುವಕರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಮಡಿಕೇರಿ ಎಎಸ್‌ಐ ಚಂದ್ರ ಶೇಖರ್, ಅರುಣ್‌ಕುಲಾಲ್ ಕೂಡಿಗೆ, ಅಶ್ವತ್ ಮಡಿಕೆಬೀಡು, ಚಂದ್ರಶೇಖರ್ ಮುರ್ನಾಡು ಸಂಘದ ಬೆಳವಣಿಗೆಗೆ ಪೂರಕವಾದ ಸಲಹೆ ನೀಡಿದರು. ನಂತರ ನೂತನ ಸಮಿತಿ ರಚನೆಯಾ ಯಿತು ಸ್ಥಾಪಕ ಅಧ್ಯಕ್ಷರಾಗಿ ಮುತ್ತಮ್ಮ ಕೋಟಿ ಗೌರವಾಧ್ಯಕ್ಷರಾಗಿ ಎಂ.ಡಿ. ನಾಣಯ್ಯ, ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಕುಶಾಲಪ್ಪ ಕೆ. ಕುಶಾಲನಗರ, ಉಪಾ ಧ್ಯಕ್ಷರಾಗಿ ದಾಮೋದರ್, ಕಾರ್ಯ ದರ್ಶಿಯಾಗಿ ಅರುಣ್ ಕುಲಾಲ್ ಕೂಡಿಗೆ, ಖಜಾಂಚಿಯಾಗಿ ಗಿರೀಶ್ ಮಡಿಕೆಬೀಡು, ಕಮಿಟಿ ಸದಸ್ಯರಾಗಿ ದಿನೇಶ್ ಐಗೂರು , ಅಶ್ವತ್ ಮಡಿಕೆಬೀಡು, ಸುರೇಶ್ ಮಡಿಕೇರಿ, ಅಪ್ಪಾಜಿ ಕುಶಾಲನಗರ , ನಾರಾಯಣ ಚೇರಂಬಾಣೆ, ಪುರುಷೋತ್ತಮ್ ಹೆಮ್ಮಾಡ್, ಅಚ್ಚು ಐಗೂರು, ಕೆ.ವಿಠಲ, ಕಾಂತಿಮಣಿ ಮಡಿಕೇರಿ, ಸರಸ್ವತಿ ಬೆಟ್ಟಗೇರಿ, ಅವರನ್ನು ಆಯ್ಕೆ ಮಾಡಲಾಯಿತು.

ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾ ಘಟಕ, ಯುವ ಘಟಕ ಮತ್ತು ಮಹಿಳಾ ಘಟಕದ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜನೆ ಮಾಡುವ ತೀರ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹೊದ್ದೂರು ಚೇರಂಬಾಣೆ ಸಂಘದ ಸದಸ್ಯರು, ಬೆಟ್ಟಗೇರಿ ಸೋಮವಾರಪೇಟೆ ಘಟಕದ ಸದಸ್ಯರು, ವೀರಾಜಪೇಟೆ ಘಟಕದ ಸದಸ್ಯರು, ಮಡಿಕೆಬಿಡು ಕುಶಾಲನಗರ ಘಟಕದ ಸದಸ್ಯರು, ಮಡಿಕೇರಿ ಘಟಕದ ಸದಸ್ಯರು, ಶನಿವಾರ ಸಂತೆ ಮಹಿಳಾ ಘಟಕದ ಸದಸ್ಯರು, ಯುವ ಘಟಕದ ಸದಸ್ಯರು ಹಾಜರಿದ್ದರು. ಭರತ್ ಬೆಟ್ಟಗೇರಿ ಕಾರ್ಯಕ್ರಮ ನಿರೂಪಿಸಿ, ಶ್ರುತಿಕಾ ಪ್ರಾರ್ಥಿಸಿ, ಅಶ್ವತ್ ಮಡಿಕೆಬೀಡು ವಂದಿಸಿದರು.