*ಗೋಣಿಕೊಪ್ಪ, ಅ. ೧೨ : ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ವತಿ ಯಿಂದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋ ಜಿಸಿದ್ದ ಪತ್ರಕರ್ತರ ದಸರಾ ಕ್ರೀಡಾಕೂ ಟದಲ್ಲಿ ಪತ್ರಕರ್ತರು ವಿವಿಧ ಕ್ರೀಡೆ ಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಹಗ್ಗಜಗ್ಗಾಟದಲ್ಲಿ ಡಿ. ನಾಗೇಶ್ ನೇತೃತ್ವದ ತಂಡ ಪ್ರಥಮ, ಎನ್. ಎನ್. ದಿನೇಶ್ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬೌಲ್ ಮಾಡಿ ಕಪ್ ಗೆಲ್ಲಿ ವಿಭಾಗದಲ್ಲಿ ಎನ್. ಎನ್. ದಿನೇಶ್ (ಪ್ರ), ಎಂ. ಎಂ. ಚನ್ನನಾಯಕ (ದ್ವಿ), ಮಂಡೇಡ ಅಶೋಕ್ (ತೃ), ತೆಂಗಿನಕಾಯಿ ಹೊಡೆಯುವುದರಲ್ಲಿ ಡಿ. ನಾಗೇಶ್ (ಪ್ರ), ಮನೋಜ್ ಕುಮಾರ್ (ದ್ವಿ), ಮಂಡೇಡ ಅಶೋಕ್ (ತೃ), ಭಾರದ ಗುಂಡು ಎಸೆತದಲ್ಲಿ ಅನೀಶ್ ಮಾದಪ್ಪ (ಪ್ರ), ವಿ. ವಿ. ಅರುಣ್ ಕುಮಾರ್ (ದ್ವಿ), ಮನೋಜ್ ಕುಮಾರ್ (ತೃ), ಗೋಣಿ ಚೀಲ ಓಟದಲ್ಲಿ ಜಗದೀಶ್ ಜೋಡುಬೀಟಿ (ಪ್ರ), ಮಂಡೇಡ ಅಶೋಕ್ (ದ್ವಿ), ಎಂ. ಎಂ. ಚನ್ನನಾಯಕ (ತೃ) ಸ್ಥಾನ ಪಡೆದರು.

ಬಹುಮಾನ ವಿತರಣಾ ಕಾರ್ಯ ಕ್ರಮದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು ಮಾತನಾಡಿ, ಮಾಧ್ಯಮ ಜನಪ್ರತಿನಿಧಿಗಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಪತ್ರ ಕರ್ತರು ಮುಂದಿನ ಪೀಳಿಗೆಗೆ ಮಾದ ರಿಯಾಗುವಂತ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಗೋಣಿಕೊಪ್ಪ ಗ್ರಾಮ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ಕುಟ್ಟಂಜೆ ಟ್ಟೀರ ತಿಮ್ಮಯ್ಯ ಮಾತನಾಡಿ, ಪತ್ರಕರ್ತರ ಅಭಿವೃದ್ಧಿ ಪರ ಚಿಂತನೆ ಹೆಚ್ಚು ಸಹಕಾರಿಯಾಗುತ್ತಿದೆ. ಕ್ರೀಡೆ ಯಲ್ಲಿ ಪಾಲ್ಗೊಳ್ಳುವುದರಿಂದ ಸೂರ್ಯನ ಬೆಳಕು ದೇಹ ಸ್ಪರ್ಶಿ ಸುತ್ತದೆ. ಉತ್ತಮ ಗಾಳಿ ಸೇವಿಸಲು ಅವಕಾಶ ದೊರೆಯುತ್ತಿದೆ. ಆರೋ ಗ್ಯಕ್ಕೂ ಒಳ್ಳೆಯದು. ಕ್ರೀಡೆ ಮುಖ್ಯ ಎಂದರು. ಪೊನ್ನಂಪೇಟೆ ತಾಲೂಕು ದಿವ್ಯಾಂಗ ಒಕ್ಕೂಟದ ಅಧ್ಯಕ್ಷ ಕಾರೇ ಟೀರ ಗಣೇಶ್, ಕ್ರೀಡಾಕೂಟ ಸಂಚಾ ಲಕ ಮಂಡೇಡ ಅಶೋಕ್ ಇದ್ದರು.