ಗೋಣಿಕೊಪ್ಪಲು, ಅ. ೧೩: ದ.ಕೊಡಗಿನ ಕೋತೂರು ಸಹಕಾರ ಸಂಘದ ಅಧ್ಯಕ್ಷರಾಗಿ ಪೆಮ್ಮಂಡ ಭರತ್, ಉಪಾಧ್ಯಕ್ಷರಾಗಿ ತಾಣಚ್ಚಿರ ದೀಪಕ್ ಆಯ್ಕೆಯಾಗಿದ್ದಾರೆ. ೧೩ ನಿರ್ದೇಶಕರನ್ನೊಳಗೊಂಡಿರುವ ಕೋತೂರು ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿ ಸಿದ್ದಲಿಂಗಮೂರ್ತಿ ನೆರವೇರಿಸಿದರು.
ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನಿರ್ದೇಶಕರುಗಳಾದ ಕೆ.ನಾಣಯ್ಯ, ಡಿ.ರತನ್, ಕೆ.ಕಟ್ಟಿ, ಎಂ.ಉತ್ತಪ್ಪ, ಕೆ.ಸದಾಶಿವ, ಪಿ.ಲವಕುಮಾರ್, ಡಿ.ಅಯ್ಯಣ್ಣ, ಎಂ.ಚAದ್ರ, ವಿ.ರಾಜು, ಪಿ.ಪುಷ್ಪ ಹಾಗೂ ಕೆ.ಲಲಿತ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸಹಕಾರ ಸಂಘದ ಕಾರ್ಯನಿರ್ವಣಾಧಿಕಾರಿ ಕೊಟ್ಟಂಗಡ ಮೊಣ್ಣಪ್ಪ ಸ್ವಾಗತಿಸಿ, ವಂದಿಸಿದರು.