ಮಡಿಕೇರಿ, ಅ. ೧೨: ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಕೊಡಗರು ಎಂದು ನಮೂದಾಗಿರುವುದನ್ನು ಕೊಡವ ಎಂದು ಸರಿಪಡಿಸುವ ಕುರಿತಾದ ವಿಚಾರಕ್ಕೆ ಸಂಬAಧಿಸಿದAತೆ ಇದೀಗ ಸರಕಾರದಿಂದ ಅಧಿಕೃತ ಆದೇಶ ಜಾರಿಯಾಗಿದೆ.

ಕೊಡಗರು ಎಂಬದರ ಬದಲಾಗಿ ಕನ್ನಡ ಆವೃತ್ತಿಯಲ್ಲಿ ಕೊಡವ ಎಂದು ಮತ್ತು ಆಂಗ್ಲ ಆವೃತ್ತಿಯಲ್ಲಿ ಏoಜಚಿvಚಿ ಎಂದು ಬದಲಾಯಿಸುವಂತೆ ತಾ.೯ರಂದು ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಹೇಮಲತ ಎಂ. ಅವರು ಸರಕಾರದ ನಿರ್ಧಾರದಂತೆ ಆದೇಶ ಹೊರಡಿಸಿದ್ದಾರೆ.

ಈ ಹಿಂದಿನ ದಾಖಲೆಯನ್ನು ಬದಲಾಯಿಸುವಂತೆ ಡಾ. ಸಿ.ಎಸ್. ದ್ವಾರಕನಾಥ್ ಅವರ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ್ದ ವಿಶೇಷ ವರದಿಯಲ್ಲಿ ಸಲಹೆ ನೀಡಲಾಗಿತ್ತು. ಈ ಕುರಿತಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ನಂದಿನೆರವAಡ ಯು. ನಾಚಪ್ಪ ಕಳೆದ ೧೪ ವರ್ಷಗಳಿಂದ ಹೈಕೋರ್ಟ್ನಲ್ಲಿ ನ್ಯಾಯಾಂಗ ಹೋರಾಟ ಮೂಲಕ ಗಮನ ಸೆಳೆದು ಸಂವಿಧಾನಿಕ ಹಕ್ಕು ಒದಗಿಸುವಲ್ಲಿ ಶ್ರಮಿಸಿದ್ದಾರೆ. ಅನಂತರ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಮೂಲಕ ಸರಕಾರ ಈ ಬಗ್ಗೆ ಸಚಿವ ಸಂಪುಟದಲ್ಲಿ ಇತ್ತೀಚೆಗೆ ನಿರ್ಣಯ ಕೈಗೊಂಡಿತ್ತು. ಇದೀಗ ತಾ.೯ರಂದು ಅಧಿಕೃತ ಆದೇಶ ಜಾರಿಯಾಗಿದೆ. ಈ ಬಗ್ಗೆ ಮಾತನಾಡಿದ ನಾಚಪ್ಪ ಇದೊಂದು ಐತಿಹಾಸಿಕ ಹೋರಾಟವಾಗಿದ್ದು, ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಮನ್ನಣೆ ನೀಡಿದೆ. ಇದರಿಂದ ಜನಾಂಗಕ್ಕೆ ಅಪಾರ ಪ್ರಮಾಣದಲ್ಲಿ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.