ಸೋಮವಾರಪೇಟೆ, ಅ. ೧೨: ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಬೇಟೆಗೆ ತೆರಳಿದ್ದ ಬೇಟೆಗಾರರು-ಅರಣ್ಯ ಇಲಾಖಾಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ತಾ. ೧೧ರ ತಡರಾತ್ರಿ ನಡೆದಿದ್ದು, ಘಟನೆಗೆ ಸಂಬAಧಿಸಿದAತೆ ಈರ್ವರು ಬಂಧನಕ್ಕೀಡಾಗಿದ್ದರೆ, ಉಳಿದ ಇಬ್ಬರು ತಲೆಮರೆಸಿ ಕೊಂಡಿದ್ದಾರೆ.
ಧನು ಮತ್ತು ರಾಜಶೇಖರ್ ಬಂಧಿತ ಆರೋಪಿಗಳು. ನಿಡ್ತ ಮೀಸಲು ಅರಣ್ಯಕ್ಕೆ ಒಳಪಡುವ ವ್ಯಾಪ್ತಿಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಕಾಡಾನೆಗಳ ಓಡಾಟದ ಬಗ್ಗೆ ಎಚ್ಚರಿಕೆ ನೀಡಲು ತೆರಳಿದ್ದ ಅರಣ್ಯಾಧಿಕಾರಿಗಳ ಮೇಲೆಯೇ ಬೇಟೆಗಾರರು ಗುಂಡು ಹಾರಿಸಿದ್ದಾರೆ. ಈ ಘಟನೆಯ ನಂತರ ಸಿನಿಮೀಯ ರೀತಿಯಲ್ಲಿ ನಡೆದ ಘಟನಾವಳಿಗಳಿಂದ ಆರೋಪಿಗಳ ಪೈಕಿ ಈರ್ವರು ಅರಣ್ಯಾಧಿಕಾರಿಗಳ ವಶಕ್ಕೆ ಸಿಲುಕಿದ್ದು, ಮೊಕದ್ದಮೆ ದಾಖಲಿಸಿದ ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ.
ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಬೇಟೆಗೆ ತೆರಳಿದ್ದ ಚೌಡ್ಲು ಗ್ರಾಮದ ರಾಜಶೇಖರ, ಕೆಂಚಮ್ಮನಬಾಣೆಯ ಧನು, ಕಾಗಡಿಕಟ್ಟೆಯ ಶರತ್, ಜೀವನ್ ಅವರುಗಳನ್ನು ಅರಣ್ಯದಲ್ಲಿ ಅಧಿಕಾರಿಗಳು ಬೆನ್ನಟ್ಟಿದ ಸಂದರ್ಭ, ಶರತ್ ಎಂಬಾತ ತನ್ನ ಬಳಿಯಿದ್ದ ಕೋವಿಯಿಂದ ಅರಣ್ಯಾಧಿಕಾರಿಗಳಿದ್ದ ಬೊಲೆರೋ ವಾಹನದ ಮೇಲೆ ಗುಂಡು ಹಾರಿಸಿದ್ದಾನೆ.
(ಮೊದಲ ಪುಟದಿಂದ) ಘಟನೆಯಿಂದ ಅರಣ್ಯ ಇಲಾಖೆಗೆ ಸೇರಿದ ಬೊಲೆರೋ ವಾಹನದ ಬಾನೆಟ್, ಗಾಜು ಸೇರಿದಂತೆ ಮುಂಭಾಗ ಜಖಂಗೊAಡಿದ್ದು, ವಾಹನದೊಳಗಿದ್ದ ಗಾರ್ಡ್ ಪ್ರಕಾಶ್, ವಾಚರ್ ಚಿಟ್ಟಿಯಪ್ಪ, ಆರ್.ಆರ್.ಟಿ. ಸಿಬ್ಬಂದಿ ವಿಕಾಸ್, ಚಾಲಕ ಸಂತೋಷ್ ಅವರುಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ವಾಹನಕ್ಕೆ ಬಡಿದ ಗುಂಡು ನಾಲ್ಕು ಇಂಚು ಮೇಲ್ಭಾಗಕ್ಕೆ ತಾಗಿದ್ದರೆ ಕನಿಷ್ಟ ಈರ್ವರು ಸಿಬ್ಬಂದಿಗಳ ಪ್ರಾಣಕ್ಕೆ ಕಂಟಕವಾಗುತ್ತಿತ್ತು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಬೇಟೆಗೆ ಬಂದು ಅರಣ್ಯಾಧಿಕಾರಿಗಳ ಮೇಲೆಯೇ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳಾದ ರಾಜಶೇಖರ ಮತ್ತು ಧನು ಅವರುಗಳÀನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮಕ್ಕಾಗಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಘಟನೆ ಹಿನ್ನೆಲೆ : ತಾ. ೧೧ ರಂದು ರಾತ್ರಿ ೧೧ ಗಂಟೆ ಸುಮಾರಿಗೆ ಎಲಿಫೆಂಟ್ ಪಟ್ರೋಲಿಂಗ್ ಕರ್ತವ್ಯದಲ್ಲಿದ್ದ ಗಾರ್ಡ್ ಪ್ರಕಾಶ್, ವಾಚರ್ ಚಿಟ್ಟಿಯಪ್ಪ, ಆರ್ಆರ್ಟಿ ಸಿಬ್ಬಂದಿ ವಿಕಾಸ್, ಸಂತೋಷ್ ಅವರುಗಳು ನಿಡ್ತ ಮೀಸಲು ಅರಣ್ಯಕ್ಕೆ ಒಳಪಡುವ ಬಾಣಾವರ-ಭುವಂಗಾಲ ರಸ್ತೆಯ ಅರಣ್ಯ ಪ್ರದೇಶದಲ್ಲಿ, ಇಲಾಖೆಯ ವಾಹನ ಬೊಲೆರೋ ಜೀಪ್ನಲ್ಲಿ ಗಸ್ತು ನಡೆಸುತ್ತಿದ್ದ ಸಂದರ್ಭ ಭುವಂಗಾಲ ರಸ್ತೆಯಲ್ಲಿ ಮೇಜರ್ ಮಾಡೆಲ್ನ ಜೀಪ್ ನಿಂತಿರುವುದು ಕಂಡುಬAದಿದೆ. ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಓಡಾಟವಿದ್ದರೂ ಜೀಪ್ ನಿಲ್ಲಿಸಿಕೊಂಡಿರುವುದನ್ನು ಗಮನಿಸಿದ ಅರಣ್ಯ ಇಲಾಖಾ ಸಿಬ್ಬಂದಿಗಳು ಜೀಪ್ನ ಬಳಿ ತೆರಳಿ ‘ಇದು ಕಾಡಾನೆಗಳು ಓಡಾಡುವ ಸ್ಥಳ ಹಾಗೂ ಸಂದರ್ಭ-ಇಲ್ಲಿ ವಾಹನ ನಿಲ್ಲಿಸಬಾರದು’ ಎಂದು ಸೂಚನೆ ನೀಡಲು ಮುಂದಾಗುತ್ತಿದ್ದAತೆ, ಮೇಜರ್ ಮಾಡೆಲ್ನ ಜೀಪ್ ಮುಂದೆ ಚಲಿಸಿದೆ. ಈ ಸಂದರ್ಭ ಅನುಮಾನಗೊಂಡ ಅಧಿಕಾರಿಗಳು ಜೀಪ್ನ್ನು ಬೆನ್ನಟ್ಟಿದ್ದಾರೆ.
ಈ ಸಂದರ್ಭ ಜೀಪ್ ತನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದು, ಅಡ್ಡಾದಿಡ್ಡಿಯಾಗಿ ಚಲಿಸಿದೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಅರಣ್ಯಾಧಿಕಾರಿಗಳು ಸುಮಾರು ೬ ಕಿ.ಮೀ. ನಷ್ಟು ಅರಣ್ಯ, ಗ್ರಾಮಾಂತರ ಪ್ರದೇಶಗಳನ್ನು ಒಳಗೊಂಡ ರಸ್ತೆಯಲ್ಲಿ ಬೆನ್ನಟ್ಟಿದ್ದಾರೆ. ಗಣಗೂರು, ಆಲೂರುಸಿದ್ದಾಪುರ, ಭುವಂಗಾಲ, ಕಣಗಾಲು, ಮುಳ್ಳೂರು ರಸ್ತೆಯಲ್ಲಿ ಬೇಟೆಗಾರರು ಹಾಗೂ ಅರಣ್ಯಾಧಿಕಾರಿಗಳ ವಾಹನ ಚೇಸಿಂಗ್ ಪ್ರಾರಂಭಿಸಿದ್ದು, ಅಂತಿಮವಾಗಿ ಕಣಗಾಲು-ಆಲೂರುಸಿದ್ದಾಪುರ ಟ್ರೆöÊ ಜಂಕ್ಷನ್ನಲ್ಲಿ, ಬೇಟೆಗಾರರು, ಅರಣ್ಯಾಧಿಕಾರಿಗಳಿದ್ದ ಬೊಲೆರೋ ವಾಹನದ ಮುಂಭಾಗಕ್ಕೆ ಫೈರಿಂಗ್ ಮಾಡಿದ್ದಾರೆ.
ದಿಢೀರ್ ಆಘಾತದಿಂದ ಬೆಚ್ಚಿದ ಅರಣ್ಯ ಇಲಾಖಾಧಿಕಾರಿಗಳು, ತಕ್ಷಣ ವಾಹನವನ್ನು ರಸ್ತೆಯ ಬದಿಗೆ ನಿಲ್ಲಿಸಿ ಆರ್ಎಫ್ಓ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಮತ್ತೊಂದು ತಂಡವನ್ನು ಕಳುಹಿಸಿದ ಆರ್ಎಫ್ಓ ಚೇತನ್ ಅವರು, ತಮ್ಮ ಇಲಾಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿ ಕಾರ್ಯಾಚರಣೆ ಆರಂಭಿಸಲು ತಿಳಿಸಿದ್ದಾರೆ. ಅದರಂತೆ ಕಾರ್ಯಾಚರಣೆಗೆ ಇಳಿದ ಅರಣ್ಯಾಧಿಕಾರಿಗಳು ರಾತ್ರಿಯಿಡೀ ಸುತ್ತಮುತ್ತಲ ಅರಣ್ಯ, ಗ್ರಾಮಾಂತರ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದು, ಅಂತಿಮವಾಗಿ ಫೈರಿಂಗ್ ನಡೆದಿರುವ ಸ್ಥಳದಿಂದ ೩ ಕಿ.ಮೀ. ಅಂತರದಲ್ಲಿರುವ ಮುಳ್ಳೂರು ಮುಖ್ಯರಸ್ತೆಯ ದೇವಾಲಯದ ಬಳಿಯಲ್ಲಿರುವ ಮರಕ್ಕೆ ಬೇಟೆಗಾರರು ಬಳಸಿದ್ದ ಜೀಪ್ ಡಿಕ್ಕಿಯಾಗಿರುವುದು ಪತ್ತೆಯಾಗಿದೆ. ನಂತರದ ಕಾರ್ಯಾಚರಣೆಯಲ್ಲಿ ಆರೋಪಿಗಳಾದ ಧನು ಮತ್ತು ರಾಜಶೇಖರ್ನನ್ನು ಬಂಧಿಸಿದ್ದು, ಮುಂದಿನ ಕ್ರಮಕ್ಕಾಗಿ ಶನಿವಾರಸಂತೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಗುಂಡು ಹಾರಿಸಿದ ಶರತ್ ಮತ್ತು ಜೊತೆಗಾರ ಜೀವನ್ ತಲೆಮರೆಸಿಕೊಂಡಿದ್ದಾರೆ.
ಸಾಧಾರಣವಾಗಿ ಪ್ರಾಣಿಗಳನ್ನು ಬೇಟೆಯಾಡಲು ಸುಧಾರಿತ ಮತ್ತು ನವೀಕೃತ ಗುಂಡುಗಳನ್ನು ಬಳಸಿಕೊಳ್ಳುವ ಪ್ರಕರಣಗಳನ್ನು ಆಗಾಗ್ಗೆ ಪತ್ತೆಯಾಗುತ್ತಿದ್ದು, ಈ ಪ್ರಕರಣದಲ್ಲಿ ನವೀಕೃತ ಗುಂಡುಗಳನ್ನು ಬಳಸಿ ಅರಣ್ಯಾಧಿಕಾರಿಗಳ ಮೇಲೆಯೇ ಗುಂಡು ಹಾರಿಸಿರುವುದು ದೃಢಪಟ್ಟಿದೆ. ಆದರೆ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವುದು ಇಲಾಖೆ ಮಾತ್ರವಲ್ಲ;ಸ್ವತಃ ಕಾರ್ಯಾಚರಣೆ ತಂಡ ನಿಟ್ಟುಸಿರು ಬಿಡುವಂತಾಗಿದೆ.
- ವಿಜಯ್ ಹಾನಗಲ್