ಶ್ರೀಮಂಗಲ, ಅ. ೧೨: ಗ್ರಾಮೀಣ ಕ್ರೀಡೆಯನ್ನು ಉತ್ತೇಜಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾರಂಭವಾದ ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ವಾರ್ಷಿಕ ಮಹಾಸಭೆ ಮತ್ತು ಆಡಳಿತ ಮಂಡಳಿಯ ಚುನಾವಣೆ ಗೋಣಿ ಕೊಪ್ಪಲಿನ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.

ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಉಪಾಧ್ಯಕ್ಷರಾಗಿ ಚೆಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿಯಾಗಿ ಉಳು ವಂಗಡ ಲೋಹಿತ್ ಭೀಮಯ್ಯ, ಸಹ ಕಾರ್ಯದರ್ಶಿಯಾಗಿ ಪೊನ್ನೋಲ ತಂಡ ಗಂಗಮ್ಮ ಹರೀಶ್, ಖಜಾಂಚಿ ಯಾಗಿ ಪೊನ್ನೋಲತಂಡ ಯಶು ನಾಚಪ್ಪ, ನಿರ್ದೇಶಕರುಗಳಾಗಿ ಕೊಣಿಯಂಡ ಮಂಜು ಮಾದಯ್ಯ, ಜಮ್ಮಡ ಗಿಲ್, ಚೆಟ್ಟಂಗಡ ಕಂಬ ಕಾರ್ಯಪ್ಪ, ಮುಂಡಚಾಡಿರ ಭರತ್ ಗಣಪತಿ, ಪೊನ್ನೋಲತಂಡ ಪ್ರತಿಷ್ ಮುತ್ತಣ್ಣ, ಪೊನ್ನೋಲತಂಡ ಹರೀಶ್ ನಾಚಪ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು. ಕಳೆದ ಎರಡು ವರ್ಷಗಳಿಂದ ಟಗ್ ಆಫ್ ವಾರ್ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೊನ್ನೋಲತಂಡ ಕುಟುಂಬ ಪ್ರಥಮವಾಗಿ ಈ ಕ್ರೀಡೆಯನ್ನು ಕಕ್ಕಬೆಯಲ್ಲಿ ಆಯೋಜನೆ ಮಾಡಿದ್ದು, ಸುಮಾರು ೪೦ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ದ್ವಿತೀಯ ವರ್ಷ ಚೆಟ್ಟಂಗಡ ಕುಟುಂಬ ಟಿ. ಶೆಟ್ಟಿಗೇರಿಯಲ್ಲಿ ಈ ಪಂದ್ಯಾವಳಿ ಯನ್ನು ಆಯೋಜನೆ ಮಾಡಿ ದಾಖ ಲೆಯ ೧೭೭ ಕುಟುಂಬಗಳು ಭಾಗವಹಿ ಸಿದಲ್ಲದೆ, ಇದರಲ್ಲಿ ಮಹಿಳೆಯರ ತಂಡವೂ ಪ್ರತ್ಯೇಕವಾಗಿ ಭಾಗವಹಿ ಸಿದ್ದವು. ಈ ಬಾರಿಯ ಮೂರನೇ ವರ್ಷದ ಪಂದ್ಯಾವಳಿಯನ್ನು ಬೊಟ್ಟೋಳಂಡ ಕುಟುಂಬಸ್ಥರು ನಾಪೋಕ್ಲುವಿನಲ್ಲಿ ನಡೆಸಲಿದ್ದಾರೆ.

ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿ, ವಂದಿಸಿದರು. ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಸ್ವಾಗತಿಸಿ ಅಕಾಡೆಮಿಯ ರೂಪರೇಷೆ ಬಗ್ಗೆ ಚರ್ಚೆಯನ್ನು ನಡೆಸಲಾಯಿತು.