ಹಲವೆಡೆ ಆದಾಯ ತೆರಿಗೆ ಇಲಾಖೆ ದಾಳಿ

ಬೆಂಗಳೂರು, ಅ. ೧೩: ನಗರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಸಂದರ್ಭ ಕಂತೆ ಕಂತೆ ನೋಟು, ಅಪಾರ ಪ್ರಮಾಣದ ನಗ ನಾಣ್ಯಗಳು ಪತ್ತೆಯಾಗಿವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಸಿಕ್ಕಿದೆ. ಏಕಕಾಲದಲ್ಲಿ ಆರ್‌ಟಿ ನಗರದ ಎರಡು ಸ್ಥಳಗಳ ಮೇಲೆ ಐಟಿ ದಾಳಿ ನಡೆದಿದ್ದು, ಆತ್ಮಾನಂದ ಕಾಲೋನಿಯ ಫ್ಲಾಟ್ ಒಂದರ ಕೊಠಡಿಯಲ್ಲಿದ್ದ ಮಂಚದಡಿ ಕಂತೆ ಕಂತೆ ನೋಟುಗಳು ಕಂಡು ಅಧಿಕಾರಿಗಳು ಬೆಚ್ಚಿಬಿದ್ದರು. ಫ್ಲಾಟ್‌ನಲ್ಲಿ ಬರೊಬ್ಬರಿ ೨೩ ಬಾಕ್ಸ್ಗಳಲ್ಲಿ ೫೦೦ ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಕಾರಿನಲ್ಲಿ ಹಣ ಸಾಗಾಟ ಮಾಡಲು ತಯಾರಾಗಿತ್ತು ಎಂದು ತಿಳಿದುಬಂದಿದೆ. ಆತ್ಮಾನಂದ ಕಾಲೋನಿಯ ಫ್ಲಾಟ್‌ನ ಕೊಠಡಿಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಂಚದಡಿ ಪರಿಶೀಲನೆ ನಡೆಸಿದಾಗ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ. ಪತ್ತೆಯಾದ ಹಣದ ಒಟ್ಟಾರೆ ಮೊತ್ತ ಎಣಿಕೆ ಮಾಡಿದ ಐಟಿ ಅಧಿಕಾರಿಗಳು, ಬಳಿಕ ಮಾಜಿ ಕಾರ್ಪೋರೇಟರ್ ಮನೆ ಬಾಗಿಲು ತಟ್ಟಿದ್ದಾರೆ. ಮಲ್ಲೇಶ್ವರಂ, ಸದಾಶಿವನಗರ, ಡಾಲರ್ಸ್ ಕಾಲೋನಿ, ಮತ್ತಿಕೆರೆ, ಸರ್ಜಾಪುರ ರಸ್ತೆ ಸೇರಿದಂತೆ ೧೦ಕ್ಕೂ ಹೆಚ್ಚು ಕಡೆಗಳಲ್ಲಿ ಚಿನ್ನದ ವ್ಯಾಪಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಇಸ್ರೇಲ್ ರಾಜತಾಂತ್ರಿಕ ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ

ಬೀಜಿಂಗ್, ಅ. ೧೩: ಇಸ್ರೇಲ್ ಮತ್ತು ಹಮಾಸ್ ನಡುವೆ ೭ ದಿನಗಳಿಂದ ಯುದ್ಧ ನಡೆಯುತ್ತಿದೆ. ಇದೇ ವೇಳೆ ಚೀನಾದಲ್ಲಿ ಇಸ್ರೇಲ್ ರಾಜತಾಂತ್ರಿಕ ಕಚೇರಿ ಸಿಬ್ಬಂದಿ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ದಾಳಿ ನಡೆಸಿದ್ದಾನೆ. ಇಸ್ರೇಲ್ ವಿದೇಶಾಂಗ ಸಚಿವಾಲಯ ಈ ಮಾಹಿತಿ ನೀಡಿದೆ. ರಾಜತಾಂತ್ರಿಕ ಕಚೇರಿ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಸಚಿವಾಲಯ ತಿಳಿಸಿದೆ. ವಾಸ್ತವವಾಗಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಮುಂದುವರಿಯುತ್ತಿದ್ದು ಇದೇ ವೇಳೆ ಚೀನಾದಲ್ಲಿ ಇಸ್ರೇಲ್ ರಾಜತಾಂತ್ರಿಕ ಸಿಬ್ಬಂದಿ ಮೇಲೆ ನಡುರಸ್ತೆಯಲ್ಲೇ ವ್ಯಕ್ತಿಯೋರ್ವ ಚಾಕುವಿನಿಂದ ದಾಳಿ ಮಾಡಿದ್ದಾನೆ.

ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ

ಮೈಸೂರು, ಅ. ೧೩: ವೈದಿಕ ಧರ್ಮದಲ್ಲಿ ಜ್ಞಾನವಿಲ್ಲ. ಅಲ್ಲಿರುವುದೆಲ್ಲಾ ಕಂದಾಚಾರ ಹಾಗೂ ಗೊಡ್ಡು ಸಂಪ್ರದಾಯಗಳು ಎಂದು ವಿಚಾರವಾದಿ ಕೆ.ಎಸ್. ಭಗವಾನ್ ಟೀಕಿಸಿದರು. ಮಹಿಷ ದಸರಾ ಆಚರಣೆ ಸಮಿತಿಯಿಂದ ಇಲ್ಲಿನ ಪುರಭವನದಲ್ಲಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ಕಟುವಾಗಿ ಟೀಕಿಸಿದ್ದಾರೆ. ಆ ಧರ್ಮ ಅಜ್ಞಾನವನ್ನು ಹರಡುತ್ತಿದೆ. ಹೀಗಾಗಿ ಅದನ್ನು ನಮ್ಮ ಧರ್ಮ ಎನ್ನಲಾಗದು. ನಮ್ಮದು ಬುದ್ಧ ಧರ್ಮ. ಬುದ್ಧ ನಮ್ಮಲ್ಲಿ ಹುಟ್ಟಿದವನು. ಹಿಂದೂ ಧರ್ಮ ಹೊರಗಿನಿಂದ ಬಂದದ್ದು ಎಂದು ಪ್ರತಿಪಾದಿಸಿದರು.

೬೦ ಉಗ್ರರ ಕೊಂದು ೨೫೦ ಒತ್ತೆಯಾಳುಗಳ ರಕ್ಷಣೆ

ಟೆಲ್ ಅವೀವ್, ಅ. ೧೩: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉಗ್ರ ಹಮಾಸ್ ನಡುವಿನ ಸಂಘರ್ಷ ಏಳನೇ ದಿನವೂ ಮುಂದುವರಿದಿದೆ. ಏತನ್ಮಧ್ಯೆ, ಇಸ್ರೇಲಿ ಸೇನೆಯು ಹಮಾಸ್ ಹೋರಾಟಗಾರರ ವಿರುದ್ಧ ನಡೆಸಿದ ಕಾರ್ಯಾ ಚರಣೆಯ ಒಂದು ವೀಡಿಯೊವನ್ನು ಬಿಡುಗಡೆ ಮಾಡಿದೆ. ವೀಡಿಯೊದಲ್ಲಿ, ಇಸ್ರೇಲಿ ಡಿಫೆನ್ಸ್ ಫೋರ್ಸ್ (ಐಡಿಎಫ್) ಸೈನಿಕರು ಕಾಂಪೌAಡ್‌ಗೆ ಪ್ರವೇಶಿಸಿ ಹಮಾಸ್ ಭಯೋತ್ಪಾದಕರು ಒತ್ತೆಯಾಳಾಗಿದ್ದ ಜನರನ್ನು ರಕ್ಷಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಾಡಿ ಕ್ಯಾಮರಾ ದೃಶ್ಯಗಳನ್ನು ಹಂಚಿಕೊAಡಿರುವ ಐಡಿಎಫ್, ‘ಇಸ್ರೇಲಿ ಸೇನೆಯು ಗಾಜಾ ಭದ್ರತಾ ಬೇಲಿ ಬಳಿ ಕಾರ್ಯಾಚರಣೆ ನಡೆಸಿತು. ಈ ಅವಧಿಯಲ್ಲಿ, ಭಯೋತ್ಪಾದಕರ ಒತ್ತೆಯಾಳಾಗಿದ್ದ ೨೫೦ ಜನರನ್ನು ಸೇನೆಯು ಸುರಕ್ಷಿತವಾಗಿ ರಕ್ಷಿಸಿದ್ದು ೬೦ ಹಮಾಸ್ ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಅಲ್ಲದೆ ಕಾರ್ಯಾಚರಣೆ ವೇಳೆ ೨೬ ಮಂದಿಯನ್ನು ಜೀವಂತವಾಗಿ ಸೆರೆಹಿಡಿಯಲಾಗಿದ್ದು ಇದರಲ್ಲಿ ಹಮಾಸ್ ದಕ್ಷಿಣ ನೌಕಾ ವಿಭಾಗದ ಉಪ ಕಮಾಂಡರ್ ಅಬು ಅಲಿ ಕೂಡ ಸೇರಿದ್ದಾನೆ. ವೀಡಿಯೋದಲ್ಲಿ, ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿರುವ ಕಟ್ಟಡವನ್ನು ಪತ್ತೆಹಚ್ಚುವ ಮೊದಲು ಡಜನ್‌ಗಿಂತಲೂ ಹೆಚ್ಚು ಸೈನಿಕರು ಹಲವಾರು ಕಟ್ಟಡಗಳ ಒಳಗೆ ಹೋಗುವುದನ್ನು ಕಾಣಬಹುದು. ಹಮಾಸ್ ಗಡಿ ಪೋಸ್ಟ್ನಲ್ಲಿ ಸೈನಿಕರು ಹಿಂದಿನಿAದ ಗುಂಡು ಹಾರಿಸುವುದು ಮತ್ತು ಗ್ರೆನೇಡ್‌ಗಳನ್ನು ಎಸೆಯುವುದು ಕಂಡುಬAದಿದೆ.

ಮಣಿಪುರಿ ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ - ಬಂಧನ

ನವದೆಹಲಿ, ಅ. ೧೩: ಮಣಿಪುರಿ ವಿದ್ಯಾರ್ಥಿಗಳಿಬ್ಬರು ನಾಪತ್ತೆ ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಶಂಕಿಸಲಾದ ಪುಣೆಯ ೨೨ ವರ್ಷದ ವ್ಯಕ್ತಿಯನ್ನು ಸಿಬಿಐ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐನ ವಿಶೇಷ ತನಿಖಾ ತಂಡವು ಬುಧವಾರ ಪುಣೆಯಿಂದ ಪೌಲುನ್ಮಾಂಗ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಗುವಾಹಟಿಗೆ ಕರೆದೊಯ್ದಿದೆ ಎಂದು ಅವರು ಹೇಳಿದರು. ವಿಶೇಷ ನ್ಯಾಯಾಲಯ ಆತನನ್ನು ಅಕ್ಟೋಬರ್ ೧೬ ರವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಪೌಲುನ್ಮಾಂಗ್ ಎಂದು ಸಿಬಿಐ ಶಂಕಿಸಿದೆ ಎಂದು ಅವರು ಹೇಳಿದರು. ಕೇಂದ್ರೀಯ ಸಂಸ್ಥೆಯು ಅಕ್ಟೋಬರ್ ೧ ರಂದು ಇಬ್ಬರು ಪುರುಷರು, ಪಾವೊಮಿನ್ಲುನ್ ಹಾಕಿಪ್ ಮತ್ತು ಸ್ಮಾಲ್ಸಮ್ ಹಾಕಿಪ್ ಮತ್ತು ಇಬ್ಬರು ಮಹಿಳೆಯರಾದ ಲಿಂಗ್ನಿಚಾAಗ್ ಬೈಟೆಕುಕಿ ಮತ್ತು ಟಿನ್ನಿಲಿಂಗ್ ಹೆಂಥಾAಗ್ ಅವರನ್ನು ಬಂಧಿಸಿತು. ೨೦ ವರ್ಷದ ಫಿಜಾಮ್ ಹೇಮಂಜಿತ್ ಮತ್ತು ೧೭ ವರ್ಷದ ಹುಡುಗಿ ಹಿಜಾಮ್ ಲಿಂತೋಯಿAಗAಬಿ ಜುಲೈ ೬ ರಂದು ನಾಪತ್ತೆಯಾಗಿದ್ದರು. ಅವರ ಮೃತದೇಹಗಳನ್ನು ತೋರಿಸುವ ಫೋಟೋಗಳು ಸೆಪ್ಟೆಂಬರ್ ೨೫ ರಂದು ಕಾಣಿಸಿಕೊಂಡಿತ್ತು. ಇದು ಮುಖ್ಯವಾಗಿ ವಿದ್ಯಾರ್ಥಿಗಳಿಂದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಯಿತು.