(ಕಳೆದ ಸಂಚಿಕೆಯಿAದ) ಯಾವುದೇ ಕಾವ್ಯದ ಶಕ್ತಿ ಹಾಗೂ ಮೌಲ್ಯ ನಿರ್ಧಾರವಾಗುತ್ತಿದ್ದದ್ದು ಅದರ ರೂಪಕ, ಅಲಂಕಾರದಲ್ಲಿ. ಶ್ರೇಷ್ಠ ಸಾಹಿತ್ಯಕ್ಕೆ ಅಲಂಕಾರಗಳು ಮುತ್ತಿನಂತೆ ಹೊಳೆಯುತ್ತಿದ್ದವು. ಕೊಡವರ ಬಾಳೋಪಾಟ್, ಅದರಲ್ಲಿಯೂ ವಿಶೇಷವಾಗಿ ಚಾವ್‌ಪಾಟ್ ಇಂತಹ ಹಲವು ರೂಪಕ ಅಲಂಕಾರಗಳೊAದಿಗೆ ಗಮನ ಸೆಳೆಯುತ್ತದೆ. ಲಿಖಿತ ದಾಖಲೆಗಳಿಲ್ಲದೆ ಶತಮಾನಗಳ ಕಾಲ ಬಾಯಿಯಿಂದ ಬಾಯಿಗೆ ಹರಡುತ್ತಾ ಬಂದಿದೆ. ಒಂದೇ ರೀತಿಯ ಸಾಹಿತ್ಯ ಸಾವಿರಾರು ಮಂದಿಯಿAದ ಪೋಷಿಸಲ್ಪಟ್ಟು ಇಂದಿನ ತನಕ ಉಳಿದು ಬಂದಿದೆ. ಸಾವು ಯಾವುದೇ ಜೀವಿಯ ಅಂತ್ಯ. ಈ ಸಂದರ್ಭ ಸತ್ತ ವ್ಯಕ್ತಿಯ ಬದುಕಿನ ಕ್ರಮವನ್ನು, ಆತನ ಸಾಧನೆಗಳನ್ನು, ಗುಣಗಳನ್ನು ಗೀತೆಯ ರೂಪದಲ್ಲಿ ಕಟ್ಟಿಕೊಟ್ಟಿರುವ ಕೊಡವರ ಹಿರಿಯರ ಕವಿತ್ವಾಶಕ್ತಿಯನ್ನು ಮೆಚ್ಚಲೇಬೇಕು.

``ನಾರಾಯಣ ದೇವಂಡೋ-ನಾರಾಯಣ ದೇವರ

ಏಳ್‌ತೊರೆ ಪೊಮ್ಮಾಲೆ-ಏಳು ಸುತ್ತಿನ ಹೂವಿನ ಹಾರ

ಮಾಲೆಚೂರೆ ಬುದ್ದೋಲೆ - ಬಿದ್ದು ಚೂರು ಚೂರಾದಂತೆ

ನಿAಗ ಚೂರೆ ಬುದ್ದಿರೋ - ನೀವು ಬದುಕಿನಲ್ಲಿ ಬಿದ್ದು ಹೋದೀರಿ

ನಾರಾಯಣ ದೇವಂಡೊ - ನಾರಾಯಣ ದೇವರ

ನೋಟುವಳ ಕನ್ನಡ - ಮುಖ ನೋಡುವಕನ್ನಡಿ

ಕೈ ತಪ್ಪಿ ನೆಲ ತಾಂದ್-ಕೈ ತಪ್ಪಿ ನೆಲಕ್ಕೆ ಬಿದ್ದು

ಬುದ್ದೊಡಂದ್ ಪೋನೋಲೆ-ಒಡೆದು ಹೋದ ರೀತಿಯಲ್ಲಿ

ನಿಂಗೊಡAದ್ ಪೋಯಿರೊ -ನೀವು ಒಡೆದು ಹೋದಿರಿ’’

ಅಂದರೆ, ಅಂತ್ಯ ಹೇಗಾಯಿತು ಎನ್ನುವುದನ್ನು ವಿವರಿಸಲಾಗಿದೆ. ದೇವರಿಗೆ ಹಾಕುವ ಹಾರ ಪವಿತ್ರವಾದುದು. ಆ ಹಾರ ತುಂಡು ತುಂಡಾಗಿ ಬಿದ್ದು ಚೆಲ್ಲಾಪಿಲ್ಲಿಯಾಗುವುದು ಅಪಶಕುನ. ಒಂದು ವೇಳೆ ತುಂಡಾಗಿ ಬಿದ್ದಲ್ಲಿ ಮತ್ತೆ ಅದನ್ನು ಜೋಡಿಸಿ ದೇವರಿಗೆ ಹಾಕುವಂತಿಲ್ಲ. ಅದಿನ್ನು ವ್ಯರ್ಥ. ಆ ಹಾರ ತುಂಡಾದAತೆ ನಿಮ್ಮ ಬದುಕು ಕೂಡ ಅಂತ್ಯ ವಾಯಿತು. ನೀವು ಇನ್ನು ಜೀವಕ್ಕೆ ಮರಳಲು ಸಾಧ್ಯವೇ ಇಲ್ಲ ಎನ್ನುವ ವಾಸ್ತವ ಒಪ್ಪಿಕೊಳ್ಳ ಬೇಕಿದೆ. ದೇವರು ತಮ್ಮ ಮುಖ ನೋಡಿ ಕೊಳ್ಳುವ ಕನ್ನಡಿ ಕೂಡ ವಿಶೇಷ ವಾದುದು. ಕೇವಲ ದೇವರ ಕನ್ನಡಿ ಮಾತ್ರವಲ್ಲ, ಮನುಷ್ಯರು ನೋಡಿಕೊಳ್ಳುವ ಕನ್ನಡಿ ಕೂಡ ಒಡೆದು ಹೋದರೆ ಅದು ಅಪಶಕುನ. ಅಂತಹ ಒಡೆದ ಕನ್ನಡಿಯಲ್ಲಿ ಮುಖ ನೋಡಬಾರದು ಎನ್ನುವ ನಿಯಮವೇ ಇದೆ. ಅದೇ ರೀತಿ ಕನ್ನಡಿ ಒಡೆದು ಹೋದಂತೆ ನಿಮ್ಮ ಬದುಕು ಕೂಡ ಒಡೆದು ಹೋಯಿತು ಎಂದು ಹೇಳಲಾಗಿದೆ.

``ನಾರಾಯಣ ದೇವಂಡೋ - ನಾರಾಯಣ ದೇವರ

ಪೊಲ್ಲುವಳ ಪೊಂಜೂದ್ - ಹೊಲಿಗೆ ಹಾಕುವ ಸೂಜಿ

ಪಾದತುಂಡಿ ಪೋನೋಲೆ-ದಾರ ತುಂಡಾದAತೆ

ನಿAಗ ತುಂಡಿ ಪೋಯಿರೋ - ನೀವು ತುಂಡಾಗಿ ಬಿದ್ದಿರೊ’’

ಹಿಂದೆ ಸೂಜಿ ಪ್ರತಿ ಮನೆಗೆ ಅಗತ್ಯವಾಗಿತ್ತು. ಸೂಜಿಯ ಬಗ್ಗೆಯೇ ಸಾಕಷ್ಟು ನಂಬಿಕೆ ಇತ್ತು. ಅದನ್ನು ಎಲ್ಲೆಂದರಲ್ಲಿ ಇಡುವಂತಿಲ್ಲ. ಸಂಜೆಯ ನಂತರ ಬಳಸುವಂತಿಲ್ಲ. ದೇವರು ಕೂಡ ಸೂಜಿ ಬಳಸುತ್ತಿದ್ದರು. ಆ ದೇವರ ಸೂಜಿಯ ದಾರ ತುಂಡಾಗಿ ಸೂಜಿ ಬಿದ್ದು ಕಾಣೆಯಾದಂತೆ ನಿಮ್ಮ ಜೀವ ಕೂಡ ನೋಡು ನೋಡುತ್ತಿದ್ದಂತೆ ಕಣ್ಮರೆಯಾಯಿತು ಎಂದು ಚಾವ್‌ಪಾಟ್‌ನಲ್ಲಿ ವಿವರಿಸಲಾಗಿದೆ. ಚಾವ್‌ಪಾಟ್‌ನ ಆರಂಭದಲ್ಲಿ ಹೇಗೆ ವ್ಯಕ್ತಿ ಜೀವ ಹೋಯಿತು ಎನ್ನುವುದನ್ನು ಕಾವ್ಯಮಯವಾಗಿ ಹೇಳಲಾಗಿದೆ.

`ನಾರಾಯಣ ದೇವಂಡೊ - ನಾರಾಯಣ ದೇವರ

ತಿತ್ತ್ಮಳೆ ಪೊಜ್ಜದೋ - ಬೆಂಕಿ ಮಳೆ ಹೊಡೆದದ್ದು

ನಾನರಿಂಜಿ ಕೊಂಡ್‌ಲೆ - ನನಗೆ ಅರಿವು ಆಗಲಿಲ್ಲ

ನಾನರಿಂಜಿ ಕೊಂಡಿನೋ - ನನಗೆ ಅರಿವು ಆಗಿದ್ದಲ್ಲಿ

ನೀ ಬೂಕಿ ಕೆಡ್‌ತಿಪ್ಪೊ - ನೀರು ಸುರಿದು ಕೆಡಿಸುತ್ತಿದ್ದೆ

ನಾರಾಯಣ ದೇವಂಡ- ನಾರಾಯಣ ದೇವರ

ಕಳ್ಳಪಡೆ ಬಂದದೋ-ಕಳ್ಳಸೈನ್ಯ ಬಂದದ್ದು

ನಾನರಿAಜಿ ಕೊಂಡ್‌ಲೆ-ನನಗೆ ಅರಿವಾಗಲಿಲ್ಲ

ನಾನರಿಂಜಿ ಕೊಂಡಿನೋ - ನನಗೆ ಅರಿವಾಗಿದ್ದಲ್ಲಿ

ಕೆತ್ತಿಚೂರೆ ಇಟ್ಟಿಪ್ಪೊ ಅಜ್ಜಯ್ಯ-ಕಡಿದು ಸೂರೆ ಮಾಡುತ್ತಿದ್ದೆ’’

ಆರೋಗ್ಯವಾಗಿಯೇ ಇದ್ದ ವ್ಯಕ್ತಿ ಇದ್ದಕ್ಕಿದಂತೆ ಅಂತ್ಯ ಕಾಣಬಹುದು. ಅವರನ್ನು ಉಳಿಸಿಕೊಳ್ಳುವ ಯಾವ ಅವಕಾಶವೂ ದೊರೆಯುವುದಿಲ್ಲ. ಒಂದು ವೇಳೆ ಮುಂಚಿತವಾಗಿ ಆತನಿಗೆ ಅನಾರೋಗ್ಯವಾಗಿರುವುದು ತಿಳಿದಿದ್ದಲ್ಲಿ ಬೇರೆ-ಬೇರೆ ಮಾರ್ಗಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊAಡು ಅವರನ್ನು ಉಳಿಸಿಕೊಳ್ಳಬಹುದಿತ್ತು. ಆತ್ಮೀಯರಾಗಿದ್ದ, ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದ ವ್ಯಕ್ತಿಯನ್ನು ನಾವು ಕಳೆದುಕೊಳ್ಳುತ್ತಿರಲಿಲ್ಲ ಎಂದಿದೆ. ದೇವರೇ ಆಕ್ರೋಶದಿಂದ ಬೆಂಕಿ ಮಳೆಯನ್ನು ಸುರಿಸಿದರೆ ಅದರಿಂದ ಪಾರಾಗಲು ಸಾಧ್ಯವೇ ಇರುವುದಿಲ್ಲ. ಆದರೆ, ಆತ ಬೆಂಕಿಯ ಮಳೆ ಸುರಿಯು ತ್ತಾನೆ ಎಂದು ತಿಳಿದಿದ್ದಲ್ಲಿ ಎಷ್ಟೇ ಕಷ್ಟ ಪಟ್ಟಾದರೂ ನೀರು ಹಾಕಿ ಬೆಂಕಿಯನ್ನು ನಂದಿಸುತ್ತಿದೆ. ದೇವರ ಸೈನ್ಯ ಬಂದಲ್ಲಿ ಅವರೊಂದಿಗೆ ಹೋರಾಡುವುದು ಕಷ್ಟಸಾಧ್ಯ. ಮುಂಚಿತವಾಗಿ ತಿಳಿದಿದ್ದಲ್ಲಿ ಆ ಕಳ್ಳ ಕೂಟವನ್ನು ಕೂಡ ಸೋಲಿಸಿ ಓಡಿಸಿ ನಿಮ್ಮನ್ನು ರಕ್ಷಿಸುತ್ತಿದ್ದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಅನಿರೀಕ್ಷಿತವಾಗಿ ಸಾವು ಯಾರ ಅರಿವಿಗೂ ಬಾರದೆ ಬಂದಿದೆ. ನಿಮ್ಮನ್ನು ಕಾಪಾಡಿಕೊಳ್ಳಲು ನಮಗೆ ಅವಕಾಶವೇ ಸಿಗಲಿಲ್ಲ ಎಂದು ಹೋಲಿಕೆಯೊಂದಿಗೆ ಹೇಳಿರುವುದು ವಿಶೇಷವಾಗಿದೆ.

``ಕುಂಬಿಯಾರ್ ತಿಂಗತ್ತೋ-ಕುAಬಿಯಾರ್ ಮಾಸದಲ್ಲಿ

ತುಂಬೆಮಲೆ ಮೋಳ್‌ಲ್-ತುಂಬೆ ಮಲೆಯ ಮೇಲೆ

ತಿತ್ತ್ ಬೆದ್‌ಕಾಂಜಿತ್ - ಬೆಂಕಿಯAತಹ ಬಿಸಿಲು ಕಾದು

ನೆಲ್ಲಿಗೆ ಚೆಂಡಿAಜಿತ್ - ನೆಲ್ಲಿ ಕಾಯಿ ಸಿಡಿದು ಬಿದ್ದು

ನೆಯಿ ಪಿಲ್ಲ್ಕ್‌ತಿತ್ತಾಯಿ-ತುಪ್ಪದಂತಹ ಹುಲ್ಲು ಬೆಂಕಿಯಾಗಿ

ಪಿಲ್ಲ್ಚೂರ್ ಬುದ್ದೋಲೆ -ಹುಲ್ಲೆಲ್ಲ ಬೆಂಕಿಯಿAದ ನಾಶವಾಗಿ

ಈ ಒಕ್ಕಡ ಕುಂದ್‌ಲ್-ಈ ಕುಟುಂಬದ ಬೆಟ್ಟದಲ್ಲಿ

ನಿಂಗ ಚೂರೆ ಬುದ್ದಿರೋ - ನೀವೂ ಬಿದ್ದು ಹೋದೀರೊ’’

ಇಲ್ಲಿಯೂ ಕೂಡ ಎಂತಹ ಹೋಲಿಕೆ ಮಾಡಿದ್ದಾರೆ ನೋಡಿ. ಪ್ರಕೃತಿಯ ಆಟವೇ ವಿಚಿತ್ರವಾದುದು. ಕೆಲವೊಮ್ಮೆ ಅತಿಯಾದಾಗ ಪ್ರಕೃತಿಯೇ ಅದನ್ನು ನಾಶಮಾಡಿ ಮರುಸೃಷ್ಟಿ ಮಾಡುತ್ತದೆ. ಅದೇ ರೀತಿ ಕಾಡಿಗೆ ಯಾರು ಬೆಂಕಿ ಕೊಡಬೇಕಾಗಿಲ್ಲ. ಬೇಸಿಗೆ ಸುಡುಬಿಸಿಲಿನಲ್ಲಿ ಬೆಟ್ಟದ ಮೇಲಿರುವ ನೆಲ್ಲಿ ಕಾಯಿ ಸಿಡಿದು ಬೀಳುತ್ತದೆ. ಈ ಸಂದರ್ಭ ಕಾದ ಕಲ್ಲಿಗೆ ಬಿದ್ದಾಗ ಅದರಲ್ಲಿ ಬೆಂಕಿ ಕಿಡಿಗಳು ಹರಡುತ್ತವೆ. ಈ ಕಿಡಿ ಒಣಗಿದ ಹುಲ್ಲಿನ ಮೇಲೆ ಬೀಳುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಹರಡಿ ಎಲ್ಲವನ್ನು ನಾಶ ಮಾಡುತ್ತದೆ. ಅದೇ ರೀತಿ ಕುಟುಂಬದಲ್ಲಿ ಯಾರೂ ಶಾಶ್ವತವಲ್ಲ. ಸಾವು ಎನ್ನುವುದು ಪ್ರಕೃತಿಯ ನಿಯಮ ಎಂದು ಹೇಳಲಾಗಿದೆ. (ಮುಂದುವರಿಯುವುದು)

-ಐತಿಚಂಡ ರಮೇಶ್ ಉತ್ತಪ್ಪ, ಮೈಸೂರು

iu.ಡಿಚಿmesh@gmಚಿiಟ.ಛಿom