ಮಡಿಕೇರಿ, ಅ. ೧೨: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಐನಂಡ ಕೆ. ಅಯ್ಯಣ್ಣ ಅವರು ಆಯ್ಕೆಯಾಗಿದ್ದಾರೆ.
ಸಂಘದ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಐನಂಡ ಕೆ. ಅಯ್ಯಣ್ಣ ಅವರು ಅಧ್ಯಕ್ಷರಾಗಿ ಹಾಗೂ ಕುಟ್ಟಂಡ ಸಿ. ಪೂಣಚ್ಚ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರು ಗಳಾಗಿ ಮುಕ್ಕಾಟಿರ ಎ. ಸಂತೋಷ್, ಐನಂಡ ಪಿ. ಗಣಪತಿ, ಚೋವಂಡ ಎಂ. ನಾಚಪ್ಪ, ಎನ್.ಎಸ್. ಪ್ರಜೀತ್, ಕುಂಞAಡ ಬಿ. ನಾಣಯ್ಯ, ಮುಕ್ಕಾಟಿರ ಜಿ. ಸೋಮಣ್ಣ, ಕಾವಾಡಿಚಂಡ ಪಿ. ಕುಂಞಪ್ಪ, ಕುಟ್ಟಂಡ ಟಿ. ಪೊನ್ನಮ್ಮ, ನೆಲ್ಲಮಕ್ಕಡ ಎ. ಕವಿತಾ ಹಾಗೂ ಜಿ.ಎಸ್. ಲಕ್ಷಿö್ಮ ಆಯ್ಕೆಯಾಗಿದ್ದಾರೆ. ಸಂಘವು ಇನ್ನು ಮುಂದಕ್ಕೆ ಹೆಚ್ಚಿನ ವ್ಯವಹಾರ ನಡೆಸಿ ಹೆಚ್ಚು ಲಾಭಗಳಿಸಿ ಪ್ರಗತಿ ಪಥದಲ್ಲಿ ಸಾಗುವಂತೆ ಮಾಡಲು ಶ್ರಮಿಸುವು ದಾಗಿ ಅಧ್ಯಕ್ಷರು ಭರವಸೆ ನೀಡಿದರು.