ಗೋಣಿಕೊಪ್ಪಲು, ಅ. ೧೧: ಉತ್ತರ ಪ್ರದೇಶ ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳ ೩೦ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕರ್ನಾಟಕ ರಾಜ್ಯಕ್ಕೆ ಅಧ್ಯಯನ ಪ್ರವಾಸಕ್ಕಾಗಿ ಆಗಮಿಸಿದ್ದು ರಾಜ್ಯ ಪ್ರಶಸ್ತಿ ವಿಜೇತ ಪಂಚಾಯಿತಿ ಆಗಿರುವ ಪೊನ್ನಂಪೇಟೆ ಪಂಚಾ ಯಿತಿಗೆ ಭೇಟಿ ನೀಡಿತ್ತು.

ತಂಡವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರಿಜ ವೆಂಕಟೇಶ್, ಉಪಾಧ್ಯಕ್ಷರಾದ ಬೊಟ್ಟಂಗಡ ದಶಮಿ ಹಾಗೂ ಗ್ರಾ.ಪಂ. ಸದಸ್ಯರು ಪಿಡಿಓ ಬರಮಾಡಿಕೊಂಡರು. ಪಂಚಾಯಿತಿ ಆವರಣದಲ್ಲಿ ಕೊಡಗಿನ ಸಾಂಪ್ರದಾ ಯಿಕ ವಾಲಗದೊಂದಿಗೆ ಯುಪಿ ತಂಡಕ್ಕೆ ಅದ್ಧೂರಿ ಸ್ವಾಗತ ನೀಡ ಲಾಯಿತು. ಉತ್ತರ ಪ್ರದೇಶ ತಂಡದ ಹಿರಿಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಬಳಿ ಇರುವ ಮಹಾತ್ಮ ಗಾಂಧಿಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.

ನಂತರ ಸಂಜೀವಿನಿ ಒಕ್ಕೂಟ ದಿಂದ ಆವರಣದಲ್ಲಿ ಹಮ್ಮಿಕೊಂಡಿದ್ದ ಅನೇಕ ರೀತಿಯ ವಸ್ತುಗಳ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಮಹಿಳೆಯರು ಆರ್ಥಿಕವಾಗಿ ಸಬಲ ರಾಗಲು ಕರ್ನಾಟಕ ಸರ್ಕಾರವು ಮಾಡಿರುವ ಯೋಜನೆ ವಿವರಗಳನ್ನು ಸ್ತಿçÃಶಕ್ತಿ ಒಕ್ಕೂಟದ ತಾಲೂಕು ಅಧ್ಯಕ್ಷರಾದ ರಜನಿ ಅವರಿಂದ ಪಡೆದರು. ಕಚೇರಿಯಲ್ಲಿನ ಸೇವೆಗಳ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜ್ ಮಾಹಿತಿ ನೀಡಿದರು. ಇಲ್ಲಿನ ವ್ಯವಸ್ಥೆ ಕಂಡು ತಂಡ ಪ್ರಶಂಸೆ ವ್ಯಕ್ತಪಡಿಸಿತು. ಕೊಡ ಗಿನ ಸಾಂಪ್ರದಾಯಿಕ ತಿಂಡಿ ತಿನಿಸು ಗಳನ್ನು ಪಂಚಾಯಿತಿ ಸದಸ್ಯರು ಆಗ ಮಿಸಿದ ತಂಡಕ್ಕೆ ಪರಿಚಯಿಸಿದರು.

ಕರ್ನಾಟಕ ರಾಜ್ಯದಲ್ಲಿನ ಪಂಚಾ ಯತ್‌ರಾಜ್ ವ್ಯವಸ್ಥೆ, ಸಂಸ್ಥೆಗಳ ಯೋಜನೆ ಮತ್ತು ಮೇಲ್ವಿಚಾರಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಠಾನ ವಿನೂತನ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಸೂಕ್ತವಾದ ವುಗಳನ್ನು ಅನುಕರಣೆ ಮಾಡುವ ಉದ್ದೇಶದಿಂದ ಉತ್ತರ ಪ್ರದೇಶ ರಾಜ್ಯದಿಂದ ಚುನಾಯಿತ ಪ್ರತಿನಿಧಿ ಗಳು ಹಾಗೂ ಅಧಿಕಾರಿಗಳು ಪೊನ್ನಂಪೇಟೆ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದರು.

ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಗಿರಿಜ ವೆಂಕಟೇಶ್, ಉಪಾಧ್ಯಕ್ಷರಾದ ಬೊಟ್ಟಂಗಡ ದಶಮಿ ಹಾಗೂ ಗ್ರಾ.ಪಂ. ಸದಸ್ಯರ ಸಮ್ಮುಖದಲ್ಲಿ ಅಭಿವೃದ್ಧಿಯ ಬಗ್ಗೆ ಸಂವಾದ ಕಾರ್ಯ ಕ್ರಮವು ಜರುಗಿತು. ಕರ್ನಾಟಕ ರಾಜ್ಯ ಸರ್ಕಾರದ ಸಂಯೋಜಕರಾದ ಡಾ.ಬಿ.ಜೆ. ಶಶಿಕುಮಾರ್ ಹಾಗೂ ಡಾ.ಬಿ.ಎಂ. ಶಿವಪ್ರಸಾದ್ ಕಾರ್ಯ ನಿರ್ವಹಣೆ ಮಾಡಿದರು.