ಕಣಿವೆ, ಅ. ೧೧: ಕಾಡಂಚಿನ ಗ್ರಾಮ ವಾದ ಅಳುವಾರ, ಸಿದ್ಧಲಿಂಗಪುರ ಮೊದಲಾದ ಗ್ರಾಮಗಳು ಕಾಡಂಚಿ ನಲ್ಲಿ ಇರುವುದರಿಂದ ಇಲ್ಲಿ ಕಾಡಾನೆ ಗಳ ಹಾವಳಿ ವಿಪರೀತವಾಗಿದ್ದು ಸರಿಯಾದ ಪರಿಹಾರ ಕೃಷಿಕರಿಗೆ ಸಿಗುತ್ತಿಲ್ಲ. ಹೀಗಿರುವಾಗ ಗ್ರಾಮ ಸಭೆಗೆ ಬರಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು, ಅಬಕಾರಿ, ಲೋಕೋ ಪಯೋಗಿ ಹಾಗೂ ಪಶು ಸಂಗೋ ಪನಾ ಇಲಾಖೆಯ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ತೊರೆನೂರು ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ತೊರೆನೂರು ಗ್ರಾಮ ಪಂಚಾ ಯಿತಿಯ ಗ್ರಾಮ ಸಭೆ ಅಳುವಾರ ಗ್ರಾಮದ ಗ್ರಾಮದೇವತೆ ಅಳುವಾರ ದಮ್ಮನ ಸನ್ನಿಧಿಯಲ್ಲಿ ಪಂಚಾಯಿತಿ ಅಧ್ಯಕ್ಷೆ ಟಿ.ಜಿ. ಶೋಭ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿತ್ತು.

ಸಭೆಯ ಆರಂಭದಲ್ಲಿ ಅಧಿಕಾರಿ ಗಳ ಗೈರು ಹಾಜರಿ ಬಗ್ಗೆ ಪಂಚಾ ಯಿತಿಯ ಮಾಜಿ ಉಪಾಧ್ಯಕ್ಷ ಪಿ.ಡಿ.ರವಿಕುಮಾರ್, ಸ್ಥಳೀಯರಾದ ಕೆ.ಎಸ್.ಕೃಷ್ಣೇಗೌಡ, ಟಿ.ಜಿ.ಶಿವಣ್ಣ ಹಾಗೂ ಟಿ.ಜೆ. ಪಾಂಡುರAಗ ಮೊದಲಾದವರು ಪ್ರಸ್ತಾಪಿಸಿದರು.

ಹಳ್ಳಿಗಳಲ್ಲಿ ಮದ್ಯದಂಗಡಿಗಳನ್ನು ತೆರೆಯುವ ಬಗ್ಗೆ ಸರ್ಕಾರ ಡಂಗೂರ ಹೊಡೆಯುತ್ತಿದೆ. ರಸ್ತೆಗಳು ಗುಂಡಿ ಬಿದ್ದಿವೆ. ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಹೀಗೆ ಅನೇಕ ಸಮಸ್ಯೆಗಳು ಇರುವಾಗ ನಾವು ಕೇಳುವುದಾದರೂ ಯಾರನ್ನು ? ಅಧಿಕಾರಿಗಳು ಏಕೆ ಸಭೆಗೆ ಬಂದಿಲ್ಲ. ಈ ಬಗ್ಗೆ ಪಂಚಾ ಯಿತಿಯ ಮುಂದಿನ ಕ್ರಮವೇನು ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಅಳುವಾರದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಕಾಡಂಚಿನಲ್ಲಿ ಸೂಕ್ತವಾದ ಆನೆ ಕಂದಕವನ್ನು ನಿರ್ಮಿ ಸಬೇಕು ಎಂದು ಸ್ಥಳೀಯ ಕೃಷಿಕ ಪ್ರೇಮ ಕುಮಾರ್ ಸಭೆಯಲ್ಲಿ ಕೋರಿದರು.

ಜಲಜೀವನ ಮಿಷನ್ ಅಡಿ ಅಳುವಾರದಲ್ಲಿ ಓವರ್ ಹೆಡ್ ಟ್ಯಾಂಕ್ ಅಪೂರ್ಣವಾಗಿದೆ. ಅದಕ್ಕೆ ನೀರನ್ನೇ ತುಂಬಿಸಿಲ್ಲ. ಆದರೆ ಗುತ್ತಿಗೆ ದಾರರು ಎಲ್ಲಾ ಮುಗಿದಿದೆ ಎನ್ನುತ್ತಿ ದ್ದಾರೆ. ಈ ಬಗ್ಗೆ ಸಂಬAಧಿತ ಇಂಜಿ ನಿಯರಿಂಗ್ ಅಧಿಕಾರಿಗಳು ಗಮನಿ ಸಿಲ್ಲ. ಕೂಡಲೇ ಈ ಯೋಜನೆಯನ್ನು ಪೂರ್ಣಗೊಳಿಸಿ ಎಂದು ಸ್ಥಳೀ ಯರು ಒತ್ತಾಯಿಸಿದರು.

ಸ್ಥಳೀಯರ ಅಳಲಿಗೆ ಸ್ವತಃ ಸ್ಥಳೀಯ ಪಂಚಾಯಿತಿ ಸದಸ್ಯ ಕೆ.ಬಿ. ದೇವರಾಜು ಕೂಡ ಧ್ವನಿಗೂಡಿಸಿ ನಮಗೆ ಸಾರ್ವಜನಿಕರ ಹಿತ ಮುಖ್ಯವೇ ಹೊರತು ಬೇರೇನು ಅಲ್ಲ. ಈ ಬಗ್ಗೆ ಅಧಿಕಾರಿ ವೀರೇಂದ್ರ ಅವರು ಸ್ಪಂದಿಸುತ್ತಿಲ್ಲ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.

ಗ್ರಾಮ ಸಭೆಗೆ ಜವಾಬ್ದಾರಿ ಇರುವ ಅಧಿಕಾರಿಗಳು ಬರುತ್ತಿಲ್ಲ. ಕೇವಲ ಅವರ ಸಹಾಯಕರನ್ನು ಕಳುಹಿಸುತ್ತಿದ್ದಾರೆ. ಇವರಿಂದ ಸಮಸ್ಯೆ ಬಗೆಹರಿಯುತ್ತಿಲ್ಲ. ಜಲಜೀವನ್ ಸಮಸ್ಯೆ ಬಗೆಹರಿಯುವ ತನಕ ಪಂಚಾಯಿತಿ ವತಿಯಿಂದ ಯಾವುದೇ ಬಿಲ್ ಪಾವತಿಸದಂತೆ ನಿರ್ಣಯ ಮಾಡಬೇಕೆಂದು ಪಿ.ಡಿ. ರವಿ ಕುಮಾರ್ ಹಾಗೂ ಕೃಷ್ಣೇಗೌಡ ಒತ್ತಾಯಿಸಿದರು.

ಸಿದ್ಧಲಿಂಗಪುರದಲ್ಲಿ ಕುಡಿವ ನೀರಿಲ್ಲದೆ ಕೋರೆಯ ನೀರನ್ನು ತಂದು ಬಡ ರೈತ ಗಂಗರಾಜು ಕುಟುಂಬ ಕುಡಿಯುತ್ತಿದೆ. ಇಂತಹವರಿಗೆ ಕುಡಿವ ನೀರು ಪೂರೈಸದ ಪಂಚಾಯಿತಿ ಆಡಳಿತದ ಕಾರ್ಯವೈಖರಿ ಖಂಡನೀಯ ಎಂದು ಕೆ.ಎಸ್. ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಳುವಾರದ ಅರಣ್ಯ ಪ್ರದೇಶದಿಂದ ಮಳೆಗಾಲದ ಮಳೆಯ ತ್ಯಾಜ್ಯ ನೀರೆಲ್ಲಾ ಹರಿದು ಮನೆಗೆ ನುಗ್ಗಿ ಅಪಾರ ನಷ್ಟವಾಗುತ್ತಿದೆ. ಕೂಡಲೇ ಪಂಚಾಯಿತಿಯವರು ಸಮರ್ಪಕವಾದ ಚರಂಡಿ ನಿರ್ಮಿಸಿ ಆಗುತ್ತಿರುವ ಹಾನಿಯನ್ನು ತಪ್ಪಿಸಬೇಕೆಂದು ಸ್ಥಳೀಯ ಕೃಷಿಕ ಟಿ.ಆರ್.ಚಂದ್ರಶೇಖರ್ ಸಭೆಯಲ್ಲಿ ಕೋರಿಕೊಂಡರು.

ಪAಚಾಯಿತಿ ಉಪಾಧ್ಯಕ್ಷೆ ರೂಪ ಮಹೇಶ್, ಸದಸ್ಯರಾದ ಎಂ.ಟಿ.ಬೇಬಿ, ನಿಂಗಾಜಮ್ಮ, ಶಿವಕುಮಾರ್, ಸಾವಿತ್ರಿ, ಮಹದೇವ, ಪ್ರಕಾಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀಣಾ ಇದ್ದರು. ನೋಡಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ಹೆಚ್.ಆರ್. ಶೇಖರ್ ಕಾರ್ಯನಿರ್ವಹಿಸಿದರು.