ಚೆಯ್ಯಂಡಾಣೆ, ಅ. ೧೦: ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಜನ್ಮದಿನಾಚರಣೆಯ ಪ್ರಯುಕ್ತ ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾಸಂಸ್ಥೆ ಅನ್ವಾರುಲ್ ಹುದಾ ಹಾಗೂ ಸುನ್ನೀ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಅನುಪಮ ವ್ಯಕ್ತಿತ್ವ ಅನರ್ಘ್ಯ ಸಂದೇಶ ಎಂಬ ಘೋಷಣೆಯೊಂದಿಗೆ ವೀರಾಜಪೇಟೆ ಪಟ್ಟಣದಲ್ಲಿ ಸಂದೇಶ ಜಾಥಾ ನಡೆಯಿತು.

ಸ್ವಾಗತ ಸಮಿತಿಯ ಸಯ್ಯದ್ ಮಹ್ದೀ ಅಲ್ ಬುಖಾರಿ ತಂಙ್ಙಳ್ ಅವರ ಪ್ರಾರ್ಥನೆಯೊಂದಿಗೆ ಜಾಥಾಕ್ಕೆ ಪಂಜರ್‌ಪೇಟೆಯಿAದ ಚಾಲನೆ ನೀಡಲಾಯಿತು.

ಎಸ್‌ಎಸ್‌ಎಫ್ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಜಾಥಾವನ್ನು ಉದ್ದೇಶಿಸಿ ಸಂದೇಶ ಭಾಷಣ ಮಾಡಿದರು.

ಪಂಜರಪೇಟೆಯಿAದ ಪ್ರಾರಂಭಗೊAಡ ಜಾಥಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗಡಿಯಾರಕಂಬ ಮುಖಾಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ಸಂಚರಿಸಿ ಅನ್ವಾರುಲ್ ಹುದಾ ಕ್ಯಾಂಪಸ್‌ನಲ್ಲಿ ಸಮಾಪನಗೊಂಡಿತು.

ಡೋನೇಟರ್ಸ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಪಟ್ಟಣದಲ್ಲಿ ಜಾಥಾಕ್ಕೆ ಅದ್ದೂರಿಯಾಗಿ ಸ್ವಾಗತ ನೀಡಿದರು. ಅನ್ವಾರುಲ್ ಹುದಾ ಸಂಸ್ಥೆಯ ಸಾರಥಿ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಮಾತನಾಡಿ, ಮೊಹಮ್ಮದ್ ಪೈಗಂಬರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಬೇಕು, ಯುವ ಸಮೂಹದ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕೇಶಲಂಕಾರದAತಹ (ತಲೆ ಕೂದಲು ಮಾಡೆಲ್ ಕಟಿಂಗ್)ಗಳನ್ನು ಮಾಡದಂತೆ ಮೊಹಮದ್ ಪೈಗಂಬರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಬೇಕೆಂದರು.

ದಫ್, ಸ್ಕೌಟ್ ಹಾಗೂ ವಿದ್ಯಾರ್ಥಿಗಳ ಪ್ಲವರ್ ಶೋ ಪ್ರದರ್ಶನ ಜಾಥಾದಲ್ಲಿ ಆಕರ್ಷಣೆಯಾಗಿತ್ತು ಈ ಸಂದರ್ಭದ ಕೂರ್ಗ್ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ, ಸಿ.ಕೆ. ಉಸ್ತಾದ್, ಉಸ್ಮಾನ್ ಮದನಿ, ಸಯ್ಯದ್ ಅಜೀಜ್ ಅಲ್ ಹೈದರೂಸಿ ತಂಗಳ್, ಎಸ್‌ವೈಎಸ್ ರಾಜ್ಯಾಧ್ಯಕ್ಷ ಹಫೀಲ್ ಸಅದಿ ಕೊಳಕೇರಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ, ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಅಬಿದ್ ಕಂಡಕ್ಕರ ನೇತೃತ್ವ ವಹಿಸಿದ್ದರು.

ಜಿಲ್ಲೆಯ ಹಲವು ಭಾಗಗಳಿಂದ ಬಂದ ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದರು.