ಮಡಿಕೇರಿ, ಅ. ೧೦: ಮಲೇಷಿಯಾದಲ್ಲಿ ಅಕ್ಟೋಬರ್ ೧೭ರಿಂದ ನವೆಂಬರ್ ೪ರತನಕ ಜರುಗಲಿರುವ ೧೧ನೇ ಸುಲ್ತಾನ್ ಆಫ್ ಜೋಹರ್ ಕಪ್-೨೦೨೩ ಹಾಕಿ ಪಂದ್ಯಾವಳಿ ಯಲ್ಲಿ ಪಾಲ್ಗೊಳ್ಳಲಿರುವ ಭಾರತ ಜೂನಿಯರ್ ಹಾಕಿ ತಂಡವನ್ನು ಪ್ರಕಟಿಸಲಾಗಿದೆ.
ಹಾಕಿ ಇಂಡಿಯಾ ಪ್ರಕಟಿಸಿರುವ ಆಟಗಾರರ ಪೈಕಿ ಕೊಡಗಿನವರಾದ ಚಂದೂರ ಬಿ. ಪೂವಣ್ಣ ಹಾಗೂ ರಾಜ್ಯದ ಮತ್ತೋರ್ವ ಆಟಗಾ ರರಾಗಿ ಹಾಸನದ ಮೋಹಿತ್ ಹೆಚ್.ಎಸ್. ಸ್ಥಾನ ಪಡೆದಿದ್ದಾರೆ. ಪೂವಣ್ಣ ಮೂಲತಃ ಕಂಡAಗಾಲ ಗ್ರಾಮದವರಾದ ಚಂದೂರ ಎಸ್. ಬಾಬಿ (ಪ್ರಭು) ಹಾಗೂ ಅನಿಲ (ತಾಮನೆ ಮಲ್ಲೇಂಗಡ, ಬಾಡಗರಕೇರಿ) ದಂಪತಿಯ ಪುತ್ರ. ಫಾರ್ವರ್ಡ್ ಉತ್ತಮ್ ಸಿಂಗ್ ಭಾರತ ತಂಡದ ನಾಯಕರಾಗಿದ್ದಾರೆ. ಪೂವಣ್ಣ ಮಿಡ್ಫೀಲ್ಡ್ ಆಟಗಾರರಾಗಿದ್ದರೆ ಮೋಹಿತ್ ಗೋಲ್ಕೀಪರ್ ಆಗಿದ್ದಾರೆ.