ಗೋಣಿಕೊಪ್ಪಲು, ಅ. ೧೦ : ನವ ರಾತ್ರಿ ಅಂಗವಾಗಿ ಹತ್ತು ದಿನಗಳ ಕಾಲ ನಡೆಯಲಿರುವ ಗೋಣಿಕೊಪ್ಪ ದಸರಾ ಜನೋತ್ಸವ ಕಾರ್ಯಕ್ರಮವು ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಜರುಗ ಬೇಕು ಇಲಾಖೆಯ ಅಧಿಕಾರಿಗಳು ಸಂಪೂ ರ್ಣವಾಗಿ ಪಾಲ್ಗೊಳ್ಳುವ ಮೂಲಕ ಗೋಣಿ ಕೊಪ್ಪ ದಸರಾ ಜನೋತ್ಸವ ಅರ್ಥಪೂರ್ಣವಾಗಿ ನಡೆಯುವಂತಾಗ ಬೇಕೆಂದು ತಾಲೂಕು ಮಟ್ಟದ ಅಧಿಕಾರಿ ಗಳಿಗೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಸ್ಪಷ್ಟ ನಿರ್ದೇಶನ ನೀಡಿದರು.
ತಾಲೂಕು ಕಚೇರಿ ಪೊನ್ನಂಪೇಟೆ ಯಲ್ಲಿ ಗೋಣಿಕೊಪ್ಪ ಕಾವೇರಿ ದಸರಾ ಕಾರ್ಯಕ್ರಮ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪೊನ್ನಣ್ಣ ಈ ಬಾರಿ ಜನೋತ್ಸವ ಕಾರ್ಯ ಕ್ರಮವು ಅತ್ಯಂತ ವಿಭಿನ್ನತೆಯಿಂದ ಕೂಡಿರಬೇಕು, ನಾಡಿನ ಕಲೆ, ಸಂಸ್ಕೃತಿಗೆ ಒತ್ತು ನೀಡುವಂತಿರಬೇಕು ಸ್ತಬ್ಧ ಚಿತ್ರ ಮೆರವಣಿಗೆ ಸಂದರ್ಭ ಆರಂಭದಲ್ಲಿ ಆನೆ ಗಳ ಮೆರವಣಿಗೆ ನಡೆಯಲಿದೆ, ವಿವಿಧ ಇಲಾಖೆಗಳು ತಮ್ಮ ಇಲಾಖಾ ಕಾರ್ಯ ಕ್ರಮಗಳ ಮಾಹಿತಿಯನ್ನು ಸ್ತಬ್ಧ ಚಿತ್ರಗಳ ಮೂಲಕ ಬಿಂಬಿಸಬೇಕು, ದಸಮಂಟಪ ಸಂಚರಿಸುವ ರಸ್ತೆ ಮಾರ್ಗಗಳ ಗುಂಡಿ ಮುಚ್ಚಿಸಬೇಕು, ಎಲ್ಲಾ ರೀತಿಯಿಂದಲೂ ದಸರಾ ಜನೋತ್ಸವ ಯಶಸ್ವಿಯಾಗಿ ಜರುಗಲು ತಮ್ಮ ತಮ್ಮ ಜವಾಬ್ದಾರಿ ಗಳನ್ನು ಅಚ್ಚು ಕಟ್ಟಾಗಿ ನಿಭಾಯಿಸುವಂತೆ ಶಾಸಕ ಪೊನ್ನಣ್ಣ ಸೂಚನೆ ನೀಡಿದರು.
ಸಭೆಯ ಆರಂಭದಲ್ಲಿ ನಾಡಹಬ್ಬ ದಸರಾ ಸಮಿತಿಯ ಪ್ರಭಾಕರ್ ನೆಲ್ಲಿತ್ತಾಯ, ಕೊಲ್ಲಿರ ಗೋಪಿ ಚಿಣ್ಣಪ್ಪ ಭಗವತಿ ದಸರಾ ಸಮಿತಿಯ ಜಮ್ಮಡ ಅರಸು, ಸರ್ವರ ದಸರಾ ಸಮಿತಿಯ ಗೋವಿಂ ದಪ್ಪ ಸ್ನೇಹಿತರ ಬಳಗ ಕೊಪ್ಪ ಸಮಿತಿಯ ಕಾಡ್ಯಮಾಡ ಚೇತನ್, ದಸರಾ ಸಂಬAಧ ಸಲಹೆಗಳನ್ನು ನೀಡಿದರು.
ಸ್ತಬ್ಧ ಚಿತ್ರ ಮೆರವಣಿಗೆಗೆ ಎರಡು ಆನೆಗಳು ಬೇಕೆಂದು ಗೋಪಿಚಿಣ್ಣಪ್ಪ ಶಾಸಕರ ಮುಂದೆ ಅಭಿಪ್ರಾಯ ಮನವಿ ಮಾಡಿದರು. ಅಲ್ಲದೇ ಅನುದಾನ ಹೆಚ್ಚು ನೀಡುವಂತೆ ಒತ್ತಾಯಿಸಿದರು.
ದಶಮಂಟಪಗಳ ಮುಖ್ಯಸ್ಥರ ಮಾತನ್ನು ಆಲಿಸಿದ ಶಾಸಕ ಎ.ಎಸ್. ಪೊನ್ನಣ್ಣ ಅಧಿಕಾರಿಗಳಿಗೆ ದಸರಾ ಯಶಸ್ಸಿ ಗಾಗಿ ಕೈ ಜೋಡಿಸುವಂತೆ ತಿಳಿಸಿದರು.
ಸಭೆಯಲ್ಲಿ ಅರಣ್ಯ, ಕೃಷಿ, ತೋಟ ಗಾರಿಕೆ, ಪೊಲೀಸ್, ಮಕ್ಕಳ ಕಲ್ಯಾಣ, ಅಗ್ನಿಶಾಮಕ, ಜಿಲ್ಲಾ ಪಂಚಾಯಿತಿ ಇಂಜಿ ನಿಯರಿಂಗ್, ಲೋಕೋಪಯೋಗಿ, ಸಮಾಜ ಕಲ್ಯಾಣ, ಗಿರಿಜನ ಅಭಿವೃದ್ಧಿ, ಶಿಕ್ಷಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿ ಗಳಿಂದ ಶಾಸಕರು ಮಾಹಿತಿ ಪಡೆದರು.
ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ತಾಲೂಕು ತಹಶೀಲ್ದಾರ್ ಪ್ರಶಾಂತ್, ಇಓ ಕೆ.ಸಿ. ಅಪ್ಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾವೇರಿ ದಸರಾ ಸಮಿತಿಯ ಉಪ ಸಮಿತಿಯ ಪದಾಧಿಕಾರಿಗಳಾದ ಅಂಕೀತ್ ಪೊನ್ನಪ್ಪ, ಶೀಲಾ ಬೋಪಣ್ಣ, ರಮೇಶ್, ಶಿವಾಜಿ ಸೇರಿದಂತೆ ಇನ್ನಿತರು ಹಾಜರಿದ್ದರು.