ಗೋಣಿಕೊಪ್ಪ ವರದಿ, ಅ. ೧೦: ಪೊನ್ನಂಪೇಟೆ ತಾಲೂಕು ದಿವ್ಯಾಂಗ ಒಕ್ಕೂಟದ ಕಾರ್ಯ ಚಟುವಟಿಕೆ ವಿಸ್ತರಿಸಲು ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕಾರೇಟೀರ ಗಣೇಶ್ ತಿಳಿಸಿದ್ದಾರೆ.
ಒಕ್ಕೂಟದಲ್ಲಿ ೪೭೦ ಸದಸ್ಯರಿದ್ದು, ಸ್ವಂತ ಕಟ್ಟಡ ಹೊಂದಿಲ್ಲ. ಪೊನ್ನಂಪೇಟೆಯಲ್ಲಿ ನಿವೇಶನ ಖರೀದಿಸಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಸುಮಾರು ೪೮ ಲಕ್ಷ ರೂ. ಅಂದಾಜು ವೆಚ್ಚವಾಗಲಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ದಿವ್ಯಾಂಗರ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದಸ್ಯರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್, ಮಾಸಿಕ ಪಿಂಚಣಿ ಸೌಲಭ್ಯದಿಂದ ವಂಚಿತರಾಗದAತೆ ನೋಡಿಕೊಳ್ಳಲಾಗುತ್ತಿದೆ. ಪ್ರತ್ಯೇಕವಾಗಿ ಮರಣ ನಿಧಿ ಸ್ಥಾಪಿಸಲಾಗಿದೆ. ಅಕಾಲಿಕ ಮರಣಪಟ್ಟ ಸದಸ್ಯರ ಕುಟುಂಬಕ್ಕೆ ರೂ. ೫ ಸಾವಿರ ಮರಣ ನಿಧಿ ನೀಡಲಾಗುತ್ತದೆ. ನಮ್ಮ ತಾಲೂಕು ವ್ಯಾಪ್ತಿಯಲ್ಲಿ ಇಂತಹ ಸೌಲಭ್ಯ ವಂಚಿತರು ಇದ್ದರೆ ಅವರಿಗೆ ಸದಸ್ಯತ್ವ ನೀಡಿ ಪ್ರೋತ್ಸಾಹಿಸಲಾಗುವುದು. ಮೊಬೈಲ್ ಸಂಖ್ಯೆ ೮೭೬೨೪೭೯೦೩೬ ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಪಿ.ಪಿ. ಅಭಿಷೇಕ್, ಸಹ ಕಾರ್ಯದರ್ಶಿ ಪಿ.ಬಿ. ಭಾಗ್ಯಲಕ್ಷಿö್ಮ, ನಿರ್ದೇಶಕರಾದ ಬಿ.ಎಂ. ಪೂವಯ್ಯ, ಎಂ.ಹೆಚ್. ಅಸಿನಾ ಇದ್ದರು.