ಮಡಿಕೇರಿ, ಅ. ೧೦: ಹೊದ್ದೂರು ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೮ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮೂರನೇ ಬಾರಿಗೆ ನೆರವಂಡ ಸಂಜಯ್ ಪೂಣಚ್ಚ ಹಾಗೂ ಉಪಾಧ್ಯಕ್ಷರಾಗಿ ೨ನೇ ಬಾರಿಗೆ ವಾಂಚೀರ ರನ್ನ ಅಜಯ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು ೧೩ ಸದಸ್ಯರನ್ನು ಹೊಂದಿರುವ ಸಹಕಾರ ಸಂಘದ ಚುನಾವಣೆಯಲ್ಲಿ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ೧೩ ಸ್ಥಾನಗಳಲ್ಲೂ ಚುನಾಯಿತರಾಗಿ ಆಯ್ಕೆಯಾಗಿದ್ದರು. ನಿರ್ದೇಶಕರುಗಳಾಗಿ ನೆರವಂಡ ಅನೂಪ್ ಉತ್ತಯ್ಯ, ಚೌರೀರ ಅಪ್ಪಣ್ಣ, ಮೇಕಂಡ ಬಿ. ಪೆಮ್ಮಯ್ಯ, ಹೆಚ್.ಆರ್. ಗಣೇಶ, ಮರಾಠಿ ಕೆ. ರಾಮಣ್ಣ, ಕರ್ಣಯನ ಬಿ. ಪ್ರಭಾಕರ್, ಕಡ್ಲೇರ ಕೆ. ಹರ್ಷ, ಮಂಡೇಪAಡ ತ್ಯಾಗಿ ಅಕ್ಕವ್ವ, ಚೌರೀರ ಎಸ್. ಉತ್ತಪ್ಪ, ಚೆಟ್ಟಿಮಾಡ ಹೇಮಮಾಲಿನಿ, ಸಣ್ಣಜನ ಎಂ. ವೀಣಾ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಮಡಿಕೇರಿ ಸಹಕಾರ ಸಂಘಗಳ ಉಪನಿಬಂಧಕ ಅಧೀಕ್ಷಕಿ ಪಿ. ಆಶಾ ಗಣೇಶ್ ಕಾರ್ಯನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೂಡಂಡ ಎಂ. ಸೋಮಣ್ಣ ಉಪಸ್ಥಿತರಿದ್ದರು.